itel P40 Smartphone: 64GB ROM ಇರುವ ಕಡಿಮೆ ಬೆಲೆಯ ಮೊಬೈಲ್ ಖರೀದಿಸಲು ಸಾಲುಗಟ್ಟಿ ನಿಂತ ಜನ
ಐಟೆಲ್ P40 ಸ್ಮಾರ್ಟ್ ಫೋನ್ ಖರೀದಿ ಮೇಲೆ ಭರ್ಜರಿ ರಿಯಾಯಿತಿ.
itel P40 Smartphone Price: ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳು ಬಿಡುಗಡೆಯಾಗಿ ಛಾಪು ಮೂಡಿಸುತ್ತಿದೆ. ಇತ್ತೀಚಿಗಂತೂ ಸ್ಮಾರ್ಟ್ ಫೋನ್ ಗಳ ಹಾವಳಿ ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಆನ್ ಲೈನ್ ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನುಗಳು ಫ್ಲಿಪ್ ಕಾರ್ಟ್ ಹಾಗು ಅಮೆಜಾನ್ ನಲ್ಲಿ ಅಗ್ಗದ ಬೆಲೆಯಲ್ಲಿ ಸೇಲ್ ಕಾಣುತ್ತಿದೆ. ಇದೀಗ ಐಟೆಲ್ P40 ಸ್ಮಾರ್ಟ್ ಫೋನ್ ಆನ್ ಲೈನ್ ನಲ್ಲಿ ಸಖತ್ ರಿಯಾಯಿತಿಯಲ್ಲಿ ಸೇಲ್ ಕಾಣುತ್ತಿದೆ.
ಐಟೆಲ್ P40 ಸ್ಮಾರ್ಟ್ ಫೋನ್ ನ ಬೆಲೆ
ಅಮೆಜಾನ್ ನಲ್ಲಿ ಆಯೋಜಿಸಿರುವ ಅಮೆಜಾನ್ ಪ್ರೈಮ್ ಡೇಸ್ ಸೇಲ್ ನಲ್ಲಿ ಐಟೆಲ್ ಸಂಸ್ಥೆಯು ಐಟೆಲ್ P40 ಸ್ಮಾರ್ಟ್ ಫೋನ್ 25 % ರಷ್ಟು ಡಿಸ್ಕೌಂಟ್ ಪಡೆದಿದೆ. ಈ ಫೋನಿನ 2 GB RAM + 64GB ಸ್ಟೋರೇಜ್ ಬೆಲೆ 7999 ರೂಪಾಯಿ ಆಗಿದೆ. ಇದೀಗ ಅಮೆಜಾನ್ ನಲ್ಲಿ 5999 ರೂಪಾಯಿ ದರದಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು ಬ್ಯಾಂಕ್ ಆಫರ್ ಗಳ ಮೂಲಕ ಮತ್ತಷ್ಟು ಡಿಸ್ಕೌಂಟ್ ನಲ್ಲಿ ಖರೀದಿಸಬಹುದು.
ಐಟೆಲ್ P40 ಸ್ಮಾರ್ಟ್ ಫೋನ್ ನ ವಿಶೇಷತೆ
ಐಟೆಲ್ P40 ಸ್ಮಾರ್ಟ್ ಫೋನ್ 6 .6 ಇಂಚಿನ ಹೆಚ್ ಡಿ + ಐಪಿಎಸ್ ವಾಟರ್ ದ್ರಾಪ್ ಮಾದರಿಯ ಡಿಸ್ ಪ್ಲೇಯನ್ನು ಪಡೆದಿದ್ದು 1612 X 720 ಪಿಕ್ಸೆಲ್ ರೆಸಲ್ಯೂಷನ್ ಸಾಮರ್ಥ್ಯವನ್ನು ಒಳಗೊಂಡಿದೆ.
ಹಾಗೆಯೇ ಇದು 120 Hz ಟಚ್ ಸ್ಯಾಪ್ಲಿಂಗ್ ರಿಫ್ರೆಶ್ ರೇಟ್ ಪಡೆದಿದೆ. ಐಟೆಲ್ P40 ಸ್ಮಾರ್ಟ್ ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಪಡೆದಿದೆ . ಈ ಸ್ಮಾರ್ಟ್ ಫೋನಿನ ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಆಯ್ಕೆ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ಇನ್ನು ಈ ಸ್ಮಾರ್ಟ್ ಫೋನ್ ಎಲ್ ಇ ಡಿ ಫ್ಲಾಶ್ ಲೈಟ್ ಆಯ್ಕೆ ನೀಡಲಾಗಿದೆ. ಐಟೆಲ್ P40 ಸ್ಮಾರ್ಟ್ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.