ITMS: ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಹೊಸ ನಿಯಮ, ITMS ತಂತ್ರಜ್ಞಾನ ಜಾರಿಗೆ.
ಪೊಲೀಸರಿಗೆ ತಿಳಿಯದ ಹಾಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಜನರಿಗೆ ಈಗ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.
ITMS Technology In Traffic: ಸಾಮಾನ್ಯವಾಗಿ ಜನರು ಅತಿಯಾದ ಟ್ರಾಫಿಕ್ (Traffic) ನಿಂದಾಗಿ ಸಮಸ್ಯೆಗೆ ಗುರಿಯಾಗುತ್ತಾರೆ. ಇತ್ತೀಚೆಗಂಟೆ ಟ್ರಾಫಿಕ್ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳು ಬಂದಿವೆ. ಇನ್ನು ಸಂಚಾರ ನಿಯಮ ಉಲ್ಲಾಘನೆಯ ಕಾರಣಕ್ಕೆ ದಂಡ ಕೂಡ ವಿಧಿಸಲಾಗುತ್ತಿದೆ.
ಇದೀಗ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ರೀತಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಇನ್ನು ಸಂಚಾರ ನಿಯಮದಲ್ಲಿನ ಹೊಸ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.
ಐಟಿಎಮ್ಎಸ್ (ITMS) ಮೂಲಕ ದಂಡಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿದೆ. ಸಂಚಾರ ನಿಯಮದಲ್ಲಿ ಅದೆಷ್ಟೇ ಬದಲಾವಣೆ ಬಂದರು ಕೂಡ ಟ್ರಾಫಿಕ್ ಕಡಿಮೆಯಾಗುವುದಿಲ್ಲ. ಇದೀಗ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಾಗಿತ್ತದೆ.
ಸಂಚಾರ ನಿಯಮ ಉಲ್ಲಂಘನೆಯಲ್ಲಿ ವಿಶೇಷ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆ. ಇನ್ನುಮುಂದೆ ಐಟಿಎಮ್ಎಸ್ (Intelligent Traffic Management System) ತಂತ್ರಜ್ಞಾನದ ಮೂಲಕ ದಂಡ ವಿಧಿಸಲಾಗುತ್ತದೆ.
ಐಟಿಎಮ್ಎಸ್ ಕ್ಯಾಮೆರಾ ವ್ಯವಸ್ಥೆ
ಐಟಿಎಮ್ಎಸ್ ಕ್ಯಾಮೆರಾ (ITMS Camera) ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಸಂಚಾರಿ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿದಿಸುತ್ತಿದ್ದಾರೆ. ಐಟಿಎಮ್ಎಸ್ ಕ್ಯಾಮೆರಾ ಮೂಲಕ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ 19,04,227 ಪ್ರಕಾರಗಳು ದಾಖಲಾಗಿವೆ.
18 ಲಕ್ಷ ಪ್ರಕರಣಗಳನ್ನು ಆನ್ಲೈನ್ ನಲ್ಲಿ ದಾಖಲಿಸಲಾಗಿದೆ. ವಾಹನಗಳ ಮಾಲೀಕರಿಗೆ ನೋಟಿಸ್ ನೋಡುವ ಮೂಲಕ ಪ್ರಕರಣಗಳನ್ನ ದಾಖಲು ಮಾಡಲಾಗುತ್ತದೆ. ಐಟಿಎಮ್ಎಸ್ ಕ್ಯಾಮೆರಾ ವ್ಯವಸ್ಥೆಯಿಂದಾಗಿ ಸಂಚಾರಿ ಪೊಲೀಸರು ನಗರದಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತಿದ್ದಾರೆ.