ITR Fines: ಕೇವಲ 20 ದಿನ ಬಾಕಿ ಇದೆ, ಈ ಕೆಲಸ ಮಾಡದವರಿಗೆ 5000 ದಂಡ, ಕೇಂದ್ರದ ಆದೇಶ
ಆದಾಯ ತೆರಿಗೆ ಪಾವತಿಸುವಾಗ ಈ ತಪ್ಪಾದರೆ ಕಟ್ಟಬೇಕು 5000 ದಂಡ.
ITR Filing Due Date: ಪ್ರಸ್ತುತ 2022 -23 ಹಣಕಾಸು ವರ್ಷದ ಆದಾಯ ರಿಟರ್ನ್ (ITR) ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದಾಯ ತೆರಿಗೆಗೆ (Income Tax) ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. ಇನ್ನು ಆದಾಯ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಕೂಡ ಹತ್ತಿರವಾಗುತ್ತಿದೆ.
ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ತೆರಿಗೆದಾರರು ಹೆಚ್ಚಿನ ದಂಡವನ್ನು ಪಾವತಿಸಬೇಕುತ್ತದೆ. ಇನ್ನು ತೆರಿಗೆ ಪಾವತಿದಾರರು ಈ ತಪು ಮಾಡಿದ್ದಲ್ಲಿ 5000 ದಂಡವನ್ನು ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಪಾವತಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವಾಗಿದೆ.
ಮುಂದಿನ 20 ದಿನದಲ್ಲಿ ಈ ಸರ್ಕಾರೀ ಕೆಲಸ ಮಾಡಿ
ಹೊಸ ಹಣಕಾಸು ವರ್ಷದಿಂದ ಐಟಿ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಅನೇಕ ನಿಯಮಗಳು ಬದಲಾಗಿವೆ. ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಒಂದು ವರ್ಷದಲ್ಲಿ ತೆರಿಗೆ ಅನ್ವಯ ಆಗುವಂತಹ 50 ಲಕ್ಷ ಆದಾಯ ಇರುವ ಭಾರತೀಯ ಪ್ರಜೆಗಳು ಐಟಿಆರ್ 1 ಅನ್ನು ಸಲ್ಲಿಸಬೇಕು.
ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ವ್ಯವಹಾರಗಳು ಮತ್ತು ಕಂಪನಿಗಳಿಗೆ ಏಳು ರೀತಿಯ ಐಟಿಆರ್ ಫಾರ್ಮ್ ಗಳಿರುತ್ತದೆ. ಹಳೆ ತೆರಿಗೆ ಪದ್ಧತಿ ಹಾಗು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಐಟಿಆರ್ ಅನ್ನು ಸಲ್ಲಿಸಬಹುದಾಗಿದೆ.
ತೆರಿಗೆ ಪಾವತಿಯಲ್ಲಿ ಈ ತಪ್ಪಾದರೆ ಕಟ್ಟಬೇಕು 5000 ರೂ ದಂಡ
ವಿವಿಧ ರೀತಿಯ ಐಟಿಆರ್ ಫಾರ್ಮ್ ಗಳನ್ನೂ ಅಗತ್ಯಕ್ಕೆ ಅನುಗುಣವಾಗಿ ಸಲ್ಲಿಸಲಾಗುತ್ತದೆ. ITR -1 ಮತ್ತು ITR -4 ಅನ್ನು ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರು ಸಲ್ಲಿಸುತ್ತಾರೆ. ಐಟಿ ರಿಟರ್ನ್ ಪಾವತಿಗೆ ನೀಡಿರುವ ನಿಗದಿತ ಸಮಯದೊಳಗೆ ತೆರಿಗೆ ಪಾವತಿ ಆಗದಿದ್ದರೆ 5000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಈ ವರ್ಷದ ITR ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ ದಂಡದ ಮೊತ್ತ ದ್ವಿಗುಣವಾಗುತ್ತದೆ.
ಜುಲೈ 31 ರೊಳಗೆ ITR ಸಲ್ಲಿಕೆ ಕಡ್ಡಾಯ
ಐಟಿಆರ್ ಸಲ್ಲಿಕೆಯ ಅವಧಿ ಮೀರಿದರೆ ಐಟಿಆರ್ ಅನ್ನು ಸೆಕ್ಷನ್ 234 ರ ಅಡಿಯಲ್ಲಿ ಸಲ್ಲಿಸಬೇಕು. ಆದರೆ ಸೆಕ್ಷನ್ 139 ರ ಅಡಿಯಲ್ಲಿ ನೀವು ಐಟಿಆರ್ ಆನು ಫೈಲ್ ಮಾಡದಿದ್ದರೆ ನಿಮ್ಮಿಂದ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಜುಲೈ ನಂತರ ಐಟಿಆರ್ ಸಲ್ಲಿಕೆಗೆ 5000 ದಂಡವನ್ನು ಆದಾಯ ಇಲಾಖೆ ನಿಗದಿಪಡಿಸಿದೆ. ಆದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಐಟಿಆರ್ ಅನ್ನು ಸಲ್ಲಿಸಬಹುದು.