Minor’s Earning: ಮಕ್ಕಳನ್ನ ಹೊಂದಿರುವ ಪೋಷಕರಿಗೆ ಹೊಸ ತೆರಿಗೆ ನಿಯಮ, ಇಂತವರ ಮನೆಗೆ ನೋಟೀಸ್ ಪಕ್ಕಾ.

ಮಕ್ಕಳನ್ನ ಹೊಂದಿರುವ ಪೋಷಕರಿಗೆ ಹೊಸ ತೆರಿಗೆ ನಿಯಮ ಜಾರಿಗೊಳಿಸಿದ ತೆರಿಗೆ ಇಲಾಖೆ.

Tax Rule For Minor’s Children’s Earning: ಆದಾಯ ಇಲಾಖೆಯು ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಿದೆ. ತೆರಿಗೆ ಪಾವತಿದಾರರಿಗೆ ಈ ತಿಂಗಳು ಬಾರಿ ನಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.

ಆದಾಯ ರಿಟರ್ನ್ ಪಾವತಿಗೆ (Income Tax Return) ಈಗಾಗಲೇ ಗಡುವು ಮುಗಿದಿದ್ದು ಇನ್ನು ಯಾವುದೇ ರೀತಿಯ ಗಡುವು ವಿಸ್ತರಣೆ ಆಗುವುದಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಈಗಾಗಲೇ ಕೋಟ್ಯಾಂತರ ಜನರು ಐಟಿಆರ್ ಸಲ್ಲಿಸಿದ್ದಾರೆ. ಇನ್ನು ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ ಬರೋಬ್ಬರಿ 5 ಸಾವಿರ ದಂಡ ಪಾವತಿಸಬೇಕಾಗುತ್ತದೆ.

Tax Rule For Minor's Children's Earning
Image Credit: Jagran

ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ತಪ್ಪಾದ ಮಾಹಿತಿ ನೀಡಬಾರದು
ಇನ್ನು ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು. ಐಟಿಆರ್ ಸಲ್ಲಿಸುವ ಯಾವುದೇ ಮಾಹಿತಿ ನೀಡಿದ್ದರು ಅಥವಾ ಯಾವುದೇ ತಪ್ಪಾದ ಮಾಹಿತಿ ನೀಡಿದರು ಆದಾಯ ಇಲಾಖೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳುತ್ತದೆ.

ಇನ್ನು ಐಟಿಆರ್ ಸಲ್ಲಿಕೆಯಲ್ಲಿ ಎಲ್ಲ ರೀತಿಯ ಆದಾಯದ ವಿವರಗಳ ಬಗ್ಗೆ ಸರಿಯಾದ ಮಾಹಿತಿ ದಾಖಲಿಸದಿದ್ದರೆ ಆದಾಯ ಇಲಾಖೆ ನಿಮ್ಮ ವಿರುದ್ಧ ಕೇಸ್ ದಾಖಲಿಸುತ್ತದೆ. ಇನ್ನು ಪೋಷಕರು ಅಪ್ರಾಪ್ತ ಮಕ್ಕಳ ಆದಾಯವನ್ನು ಕೂಡ ತಮ್ಮ ಆದಾಯಕೆ ಸೇರಿಸಿಕೊಳ್ಳಬೇಕು. ಅಪ್ರಾಪ್ತ ಮಕ್ಕಳ ಆದಾಯ ಮಾಹಿತಿ ನೀಡಿದ್ದರು ಇಲಾಖೆ ನಿಮ್ಮನ್ನು ಶಿಕ್ಷಿಸುತ್ತದೆ.

ITR filing rules for children
Image Credit: Outlookmoney

ಮಕ್ಕಳನ್ನ ಹೊಂದಿರುವ ಪೋಷಕರಿಗೆ ಹೊಸ ತೆರಿಗೆ ನಿಯಮ
*ಪೋಷಕರು ತಮ್ಮ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಯಾವುದೇ ರೀತಿಯ ಆಸ್ತಿ ಅಥವಾ ಹಣವನ್ನು ಸಂಪಾಧನೆ ಮಾಡುತ್ತಿದ್ದರೆ ಅದರ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಈ ಇಂಟರ್ನೆಟ್ ಜಗತ್ತಿನಲ್ಲಿ ಯೂಟ್ಯೂಬ್, ಇನ್ಸ್ಟಾಗ್ರಾಮ್ ಅಥವಾ ಇನ್ನಿತರ ಸೋಶಿಯಲ್ ಮೀಡಿಯಾದಿಂದ ಹಣ ಗಳಿಸಿದರೆ ಆ ಆದಾಯ ಮಾಹಿತಿಯನ್ನು ನೀಡಬೇಕು.

Join Nadunudi News WhatsApp Group

*ಸಾಮಾನ್ಯವಾಗಿ ಹೂಡಿಕೆಯ ಲಾಭದ ಮೊತ್ತಕ್ಕೆ ಐಟಿಆರ್ ಅನ್ನು ಸಲ್ಲಿಸಬೇಕಾಗುತ್ತದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆದರೆ ಅದರ ಲಾಭವು ಪೋಷಕರಿಗೆ ತಲುಪುತ್ತದೆ. ಮಗುವಿನ ಹೆಸರಿನಲ್ಲಿ ಬರುವ ಬಡ್ಡಿಯ ಲಾಭವನ್ನು ನೀವು ನಿಮ್ಮ ಆದಾಯಕ್ಕೆ ಸೇರಿಸಿಕೊಂಡು ಐಟಿಆರ್ ಸಲ್ಲಿಸುವಾಗ ಮಾಹಿತಿ ನೀಡಬೇಕು. ಅಪ್ರಾಪ್ತರ ಆದಾಯವನ್ನು ಸೇರಿಸುವ ಮೂಲಕ 1500 ರೂ. ಕಡಿತವನ್ನು ಕ್ಲೈಮ್ ಮಾಡಬಹುದು.

ITR filing rules for children
Image Credit: Financialexpress

*ಮಗುವಿನ ಗಳಿಕೆಯ ಆದಾಯದ ವಿವರವು ತಂದೆ ಅಥವಾ ತಾಯಿ ಯಾರು ಹೆಚ್ಚಿನ ಆದಾಯವನ್ನು ಹೊಂದುತ್ತಾರೋ ಅವರ ಆದಾಯದ ಜೊತೆ ತೋರಿಸಲಾಗುತ್ತದೆ. ಇನ್ನು ಮಗು ಯಾವುದೇ ರೀತಿಯ ಅಂಗವೈಕಲ್ಯಕ್ಕೆ ಬಲಿಯಾಗಿದ್ದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80U ಅಡಿಯಲ್ಲಿ ಅವರ ಸಂಪತ್ತನ್ನು ಪೋಷಕರ ITR ನೊಂದಿಗೆ ಸೇರಿಸಲಾಗುವುದಿಲ್ಲ ಬದಲಾಗಿ ಪ್ರತ್ಯೇಕ ಐಟಿಆರ್ ಸಲ್ಲಿಸಲಾಗುವುದು.

*ಇನ್ನು 18 ವರ್ಷಕ್ಕಿಂತ ಕಡಿಮೆ ವಯಾಸ್ಸಿನ ಅನಾಥ ಮಗು ತೆರಿಗೆಗೆ ಒಳಪಡುವ ಆಸ್ತಿಯನ್ನು ಹೊಂದಿದ್ದರು ಸಹ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕು.

Join Nadunudi News WhatsApp Group