Tax Notice: Income Tax ಕಟ್ಟಿದ ನಂತರ ಕೂಡ ಇಂತಹ ಜನರ ಮನೆಗೆ ಬರಲಿದೆ ನೋಟೀಸ್, ತೆರಿಗೆ ಇಲಾಖೆಯ ಆದೇಶ.
ನೀವು ತೆರಿಗೆ ಪಾವತಿಸಿದರು ಸಹ ನಿಮ್ಮ ಮನೆಗೆ ನೋಟೀಸ್ ಬರುತ್ತದೆ, ತೆರಿಗೆ ನೋಟಿಸ್ ಅನ್ನು ನಿರ್ಲಕ್ಷಿಸಬಾರದು.
ITR Tax Notice Update: ಈಗಾಗಲೇ ಐಟಿ ರಿಟರ್ನ್ ಸಲಿಕೆಯಲ್ಲಿ ಕೂಡ ಆದಾಯ ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ (ITR) ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿತ್ತು.
ನಿಗದಿತ ಸಮಯದೊಳಗೆ ಐಟಿ ರಿಟರ್ನ್ ಸಲ್ಲಿಕೆ ಆಗದಿದ್ದರೆ ತೆರಿಗೆ ಪಾವತಿದಾರರು ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ. ದಂಡ ಪಾವತಿಸುವ ಭಯದಿಂದಾಗಿ ಕಳೆದ ತಿಂಗಳಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿ ಐಟಿಆರ್ ಸಲ್ಲಿಕೆಯಾಗಿದೆ.
ಇನ್ನು ತೆರಿಗೆದಾರರು ಸಲ್ಲಿಸಿದ ಎಲ್ಲಾ ರಿಟರ್ನ್ ಮಾಹಿತಿಯನ್ನು ಆದಾಯ ಇಲಾಖೆ ಪರಿಶೀಲಿಸುತ್ತದೆ. ತೆರೆದಾರರು ತೆರಿಗೆ ಪಾವತಿಸುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ತೆರಿಗೆದಾರರಿಗೆ ಕೆಲವೊಮ್ಮೆ ಆದಾಯ ಇಲಾಖೆ ತೆರಿಗೆ ನೋಟಿಸ್ (Tax Notice) ಅನ್ನು ಕಳುಹಿಸುತ್ತದೆ.
ಆದಾಯ ತೆರಿಗೆ ನೋಟಿಸ್ (Tax Notice)
ತೆರಿಗೆ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪು ಕಂಡು ಬಂದಲ್ಲಿ ನೋಟಿಸ್ ನೀಡಲಾಗುತ್ತದೆ. ನೀವು ಈಗಾಗಲೇ ಆದಾಯ ರಿಟರ್ನ್ ಸಲ್ಲಿಸಿದ್ದರು ಕೂಡ ನಿಮಗೆ ನೋಟಿಸ್ ಕಳುಹಿಸಲಾಗುತ್ತದೆ. ಕೆಲವು ಸಮಯದ ಹಿಂದೆ, ಆದಾಯ ತೆರಿಗೆ ಇಲಾಖೆಯು ಕೆಲವು ಸಂಬಳದಾರರಿಗೆ ತಮ್ಮ ಆದಾಯದ ಪುರಾವೆ ಮತ್ತು ಅವರು ತಮ್ಮ ರಿಟರ್ನ್ಸ್‌ನಲ್ಲಿ ಕ್ಲೈಮ್ ಮಾಡಿದ ಕಡಿತಗಳನ್ನು ಕೇಳಿ ನೋಟಿಸ್ ಕಳುಹಿಸಿದೆ.
ತೆರಿಗೆ ನೋಟಿಸ್ ಅನ್ನು ನಿರ್ಲಕ್ಷಿಸಬಾರದು
ಯಾವುದೇ ಮೂಲದಿಂದ ಬಂದಿರುವ ಆದಾಯದ ಬಗ್ಗೆ ನೀವು ಮಾಹಿತಿ ನೀಡದಿದ್ದರೆ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ನಿಮಗೆ ಆದಾಯ ಇಲಾಖೆ ನೋಟಿಸ್ ಕಳುಹಿಸದರೆ ಅದನ್ನು ನಿರ್ಲಕ್ಷಿಸಬಾರದು. ನೀವು ತಪ್ಪು ಮಾಹಿತಿ ನೀಡಿದ್ದರೆ ಅಥವಾ ಯಾವುದೇ ಆದಾಯದ ಮಾಹಿತಿಯನ್ನು ನೀಡದೆ ಇದ್ದರೆ ಮಾತ್ರ ಇಲಾಖೆ ನಿಮಗೆ ನೋಟಿಸ್ ಕಳುಹಿಸುತ್ತದೆ. ಆದಾಯ ಇಲಾಖೆಯು ನೀಡುವ ನೋಟಿಸ್ ನಲ್ಲಿ ಸಮಯ ಮಿತಿಯನ್ನು ನೀಡಿರುತ್ತದೆ. ನಿಗದಿತ ಸಮಯದೊಳಗೆ ನೀವು ನೋಟೀಸ್ ಗೆ ಉತ್ತರ ನೀಡಬೇಕಾಗುತ್ತದೆ.
ಐಟಿಆರ್ ಸಲ್ಲಿಕೆಯ ನಂತರವೂ ಮನೆಗೆ ಬರಲಿದೆ ಟ್ಯಾಕ್ಸ್ ನೋಟಿಸ್
ಆದಾಯ ಇಲಾಖೆ ನೀಡಿದ ನೋಟಿಸ್ ನ ಅರ್ಥ ನಿಮಗೆ ತಿಳಿಯದಿದ್ದರೆ ವೃತ್ತಿಪರರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು. ಐಟಿಆರ್ ಸಲ್ಲಿಸುವ ಸಮಯದಲ್ಲಿ ನೀಡಿದ ಎಲ್ಲ ಡಾಕ್ಯುಮೆಂಟ್ ಗಳನ್ನೂ ಒಮ್ಮೆ ಪರಿಶೀಲಿಸಿಕೊಳ್ಳಿ. ಆದಾಯ ಇಲಾಖೆ ನೀಡಿದ ನೋಟಿಸ್ ಗೆ ನೀವು ಉತ್ತರಿಸುವಾಗ ಡ್ರಾಫ್ಟ್ ಅನ್ನು ಸಿದ್ಧಪಡಿಸಿಕೊಳ್ಳಬೇಕು. ಆದಾಯ ಇಲಾಖೆಗೆ ಸ್ಪಷ್ಟ ಉತ್ತರದೊಂದಿಗೆ ಸಾಕ್ಷ್ಯವನ್ನು ನೀಡಬೇಕಾಗುತ್ತದೆ.