Ads By Google

Jaggesh Interview: 12 ಜನರನ್ನ ಜೈಲಿಗೆ ಕಳುಹಿಸಿದ ನಟ ಜಗ್ಗೇಶ್, ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ಟ ಜಗ್ಗೇಶ್.

jaggesh raghavendra store movie
Ads By Google

Actor Jaggesh Latest News: ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ಜಗ್ಗೇಶ್ (Jaggesh) ಇದೀಗ ಸುಡಿಯಲ್ಲಿದ್ದಾರೆ. ನಟ ಜಗ್ಗೇಶ್ ಅವರು ತಮ್ಮ ಹೊಸ ಚಿತ್ರದಲ್ಲಿ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ನಟ ಜಗ್ಗೇಶ್ ಅವರು ಇದೀಗ ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ಹೊಸ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ.

ಇನ್ನು ಈವೇಳೆ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ನೆಗೆಟಿವ್ ಕಮೆಂಟ್ ಮಾಡುವರ ಬಗ್ಗೆ ಮಾತನಾಡಿದ್ದಾರೆ. ತಮಗೆ ನೆಗೆಟಿವ್ ಕಮೆಂಟ್ ಮಾಡಿದವರನ್ನು ಹೇಗೆ ನಿಭಾಯಿಸುತ್ತೇನೆ ಎನ್ನುವುದನ್ನು ನಟ ಜಗ್ಗೇಶ್ ರಿವೀಲ್ ಮಾಡಿದ್ದಾರೆ.

Image Credit: instagram

ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರ
ಇನ್ನು ನಟ ಜಗ್ಗೇಶ್ ಅವರು ತೊಬಂತ್ತರ ದಶಕದಲ್ಲಿಯೇ ಸ್ಟಾರ್ ನಟರಾಗಿ ಮಿಂಚಿದವರು. ಈಗಲೂ ಕೂಡ ನಟ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇದೀಗ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನ ಅಡಿಯಲ್ಲಿ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರ (Raghavendra Stores Movie) ನಿರ್ಮಾಣಗೊಂಡಿದೆ.

ಈ ಚಿತ್ರ ಏಪ್ರಿಲ್ 28 ರಂದು ತೆರೆಯ ಮೇಲೆ ಬರಲಿದೆ. ಇನ್ನು ಈ ಚಿತ್ರದ ಪ್ರಮೋಷನ್ ನ ವೇಳೆ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಬಗ್ಗೆ ಒಂದಿಷ್ಟು ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

ಸಾಮಾಜಿಕ ಜಾಲತಾಣದ ಕುರಿತು ಜಗ್ಗೇಶ್ ಮಾತುಗಳು
ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟರಾಗಿದ್ದಾರೆ. ಇದೀಗ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣವನ್ನು ಕಂಡು ಹಿಡಿದವರಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ನನ್ನ ಎಲ್ಲಾ ಅಭಿಮಾನಿಗಳನ್ನು ಒಂದೇ ಕಡೆಯಲ್ಲಿ ಸಿಗುವಂತೆ ಮಾಡಿದ ಆತನಿಗೆ ನನ್ನ ಧನ್ಯವಾದ ಎಂದಿದ್ದಾರೆ.

12 ಜನರನ್ನ ಜೈಲಿಗೆ ಕಳುಹಿಸಿದ್ದರಂತೆ ನಟ ಜಗ್ಗೇಶ್
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ಕಮೆಂಟ್ ಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. 99 % ಪಾಸಿಟಿವ್ ಕಮೆಂಟ್ ಹಾಗೂ 1 % ನೆಗೆಟಿವ್ ಕಮೆಂಟ್ ಇರುತ್ತದೆ. ನೆಗೆಟಿವ್ ಕಮೆಂಟ್ ಮಾಡುವವರು ಫೇಕ್ ಐಡಿ ಬಳಸಿ ಕಮೆಂಟ್ ಮಾಡುತ್ತಾರೆ.

Image Credit: instagram

ನಿಜವಾದ ಐಡಿಯಲ್ಲಿ ಕಮೆಂಟ್ ಮಾಡಿದರೆ ಅವರನ್ನು ಕಂಡು ಹಿಡಿಯುವುದು ಎರಡು ನಿಮಿಷದ ಕೆಲಸ. ಕಳೆದ ನಾಲ್ಕು ತಿಂಗಳುಗಳಲ್ಲಿ 12 ಜನರನ್ನು ಜೈಲಿಗೆ ಕಳುಹಿಸಿದ್ದೇನೆ ಎಂದಿದ್ದಾರೆ. ಚಿತ್ರರಂಗಕ್ಕೆ ಸಂಬಧಪಟ್ಟವರು ಹಾಗೂ ಸಿನಿಪ್ರೇಮಿಗಳು ಈ ರೀತಿಯ ಕೆಲಸವನ್ನು ಯಾವ ಕಾರಣಕ್ಕೂ ಮಾಡುವುದಿಲ್ಲ, ಆದರೆ ಇದೆಲ್ಲ ರಾಜಕಾರಣಿಯರ ಕೆಲಸ ಎಂದಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field