Jailer: ಬಿಡುಗಡೆಯಾದ ಎರಡು ದಿನದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಜೈಲರ್, ಬಾಕ್ಸ್ ಓಫೀಸ್ ಧೂಳಿಪಟ.
ಎರಡು ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ಜೈಲರ್.
Jailer Collection: ಸದ್ಯ ಕನ್ನಡ ಸೇರಿದಂತೆ ದೇಶದ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದು ರಜಿನಿಕಾಂತ್ ಅಭಿನಯದ ಜೈಲರ್ ಚಿತ್ರ ಎಂದು ಹೇಳಬಹುದು. 72 ವರ್ಷ ವಯಸ್ಸಿನ ನಟ ರಜಿನಿಕಾಂತ್ ಅವರ ಜೈಲರ್ ಚಿತ್ರಕ್ಕೆ ಇಡೀ ದೇಶವೇ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದೆ ಎಂದು ಹೇಳಬಹುದು.
ನಟ ರಜಿನಿಕಾಂತ್ (Actor Rajinikanth )ಅವರು ಈ ಚಿತ್ರದಲ್ಲಿ ಅಮೋಘವಾಗಿ ನಟನೆಯನ್ನ ಮಾಡುತ್ತಿದ್ದು ದೇಶದ ಎಲ್ಲಾ ಚಿತ್ರ ಮಂದಿರಗಳು ಬಹುತೇಕ ಫುಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ನಟಿ ರಜಿನಿಕಾಂತ್ ಅವರ ಜೈಲರ್ ಚಿತ್ರ ದೇಶದಲ್ಲಿ ಆರು ಭಾಷೆಗಲ್ಲಿ ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಬಿಡುಗಡೆ ಆಗಿದ್ದು ಚಿತ್ರಕ್ಕೆ ಬಹಳ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಜೈಲರ್ ಚಿತ್ರದಲ್ಲಿ ಮಿಂಚಿದ ರಜಿನಿಕಾಂತ್
ಹೌದು ನಟ ರಜಿನಿಕಾಂತ್ ಅವರು ಜೈಲರ್ ಚಿತ್ರಾದಲ್ಲಿ ತಂದೆಯ ಪಾತ್ರವನ್ನ ಬಹಳ ಚನ್ನಾಗಿ ನಿಭಾಯಿಸಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಹೋರಾಟವನ್ನ ಮಾಡುವ ನಟ ರಜಿನಿಕಾಂತ್ ಅವರು ನಂತರ ಮಗ ಮಾಡಿದ ಅನ್ಯಾಯಕ್ಕೆ ಶಿಕ್ಷೆಯನ್ನ ಕೂಡ ಕೊಡುತ್ತಾರೆ. ಚಿತ್ರದಲ್ಲಿ ಸಾಕಷ್ಟು ಸ್ಟಾರ್ ನಟರು ನಟನೆಯನ್ನ ಮಾಡಿದ್ದು ಚಿತ್ರ ಬಾಕ್ಸ್ ಆಫೀಸ್ ದಾಖಲೆಯ ಕಲೆಕ್ಷನ್ ಕೂಡ ಮಾಡುತ್ತಿದೆ.
ಎರಡು ದಿನದಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಜೈಲರ್
ಹೌದು ಜೈಲರ್ ಚಿತ್ರಕ್ಕೆ ಬಹಳ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಬಿಡುಗಡೆಯಾದ ಎರಡು ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ಸುಮಾರು 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಜೈಲರ್ ಚಿತ್ರ ಎರಡನೆಯ ದಿನ ಸುಮಾರು 45 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಜೈಲರ್ ಚಿತ್ರ ಬಿಡುಗಡೆಯಾದ ಎರಡು ದಿನದಲ್ಲಿ ಸುಮಾರು 95 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಇಂದು ಮತ್ತು ನಾಳೆ ರಜೆ ಇರುವ ಕಾರಣ ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಲಿದೆ.
ಚಿತ್ರದಲ್ಲಿ ಮಿಂಚಿದ ಶಿವ ರಾಜಕುಮಾರ್
ಹೌದು ಜೈಲರ್ ಚಿತ್ರದಲ್ಲಿ ನಟ ಶಿವ ರಾಜಕುಮಾರ್ (Shiva Rajkumar) ಅವರು ರಜಿನಿಕಾಂತ್ ಅವರ ಗೆಳೆಯನ ಪಾತ್ರವನ್ನ ಮಾಡಿದ್ದಾರೆ. ನಟ ಶಿವ ರಾಜಕುಮಾರ್ ಅವರ ಎಂಟ್ರಿ ಜನರಿಗೆ ಬಹಳ ಇಷ್ಟವಾಗಿದ್ದು ಕ್ಲೈಮಾಕ್ಸ್ ನಲ್ಲಿ ಕೂಡ ನಟ ಶಿವ ರಾಜಕುಮಾರ್ ಅವರು ಕಮಲ್ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಅದೇ ರೀತಿಯಲ್ಲಿ ಮಲಯಾಳಂ ನ ಇನ್ನೊಬ್ಬ ಖ್ಯಾತ ನಟ ಮೋಹನ್ ಲಾಲ್ (Mohanlal) ಕೂಡ ಚಿತ್ರದಲ್ಲಿ ಪ್ರಮುಖವಾದ ಪಾತ್ರವನ್ನ ಮಾಡಿದ್ದಾರೆ. ಚಿತ್ರದಲ್ಲಿ ವಿಲನ್ ಪಾತ್ರ ಬಹಳ ಚನ್ನಾಗಿ ಮೂಡಿ ಬಂದಿದೆ ಎಂದು ಚಿತ್ರವನ್ನ ನೋಡಿದ ಜನರು ಅಭಿಪ್ರಾಯವನ್ನ ಹೊರಹಾಕಿದ್ದಾರೆ.