Jamunapari Goat: ಒಂದೇ ಬಾರಿಗೆ 3 ಮರಿ ಹಾಕುವ ಈ ಮೇಕೆ ವ್ಯವಹಾರ ಆರಂಭಿಸಿದರೆ ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಲಾಭ.
ಒಂದೇ ಬಾರಿಗೆ 3 ಮರಿ ಹಾಕುವ ಈ ಮೇಕೆ ವ್ಯವಹಾರದಿಂದ ಗಳಿಸಬಹುದು ಲಕ್ಷ.
Jamunapari Goat Farming: ಕೆಲ ಜನರು ಪ್ರಾಣಿ ಪ್ರಿಯರಾಗಿದ್ದು ಪ್ರಾಣಿಗಳ ಆರೈಕೆ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನು ಕೆಲವರು ಕೋಳಿ, ಮೇಕೆ, ಕುರಿ ಸೇರಿದಂತೆ ಇನ್ನಿತರ ಮಾಂಸಾಹಾರಿ ಪ್ರಾಣಿಗಳನ್ನು ಸಾಕುತ್ತಾರೆ. ಕೋಳಿ, ಕುರಿ ಸಾಕಾಣಿಕೆ ಹೆಚ್ಚಿನ ಲಾಭ ನೀಡುವ ಕೆಲಸವಾಗಿದೆ. ಸಣ್ಣ ಪ್ರಾಣಿಗಳ ಸಾಕಾಣಿಕೆ ಹೆಚ್ಚಿನ ಖರ್ಚನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಜನರು ಸಣ್ಣ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ.
ಮೇಕೆಗಳ ಸಾಕಾಣಿಕೆ
ಪ್ರಸ್ತುತ ದೇಶದಾದ್ಯಂತ ಮೇಕೆಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಮೇಕೆಗಳ ಮಾಂಸದ ಬೆಲೆ ದುಬಾರಿಯಾಗಿದೆ. ಇನ್ನು ಮೇಕೆಗಳನ್ನು ಸಾಕುವ ಮುನ್ನ ಮೇಕೆಗಳು ಯಾವ ತಳಿಗೆ ಸೇರಿರುತ್ತವೆ ಎನ್ನುವುದನ್ನು ತಿಳಿಯುವುದು ಉತ್ತಮ. ಏಕೆಂದರೆ ಕೆಲವು ತಳಿಯ ಮೇಕೆಗಳು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ಹಸುಗಳು ಎಮ್ಮೆಯನ್ನು ಹಾಲು ಪಡೆಯುವುದಕ್ಕೆ ಸಾಕಲಾಗುತ್ತದೆ. ಅದೇ ರೀತಿ ಮೇಕೆ ಸಾಕಾಣಿಕೆಯಿಂದ ಹಾಲು ಕೂಡ ಪಡೆಯಬಹುದು. ಮೇಕೆಯ ಹಾಲಿಗೂ ಕೂಡ ಹೆಚ್ಚಿನ ಬೇಡಿಕೆ ಇದೆ. ಒಂದೇ ಬಾರಿಗೆ 3 ಮರಿ ಹಾಕುವ ಮೇಕೆಯ ಬಗ್ಗೆ ಒಂದಿಷ್ಟು ವಿವರಣೆ ಇಲ್ಲಿದೆ.
Jamunapari Goat Farming
ಉತ್ತರ ಪ್ರದೇಶದ ಇಟಾವಾ, ಗಂಗಾ, ಯಮುನಾ ಮತ್ತು ಚಂಬಲ್ ನದಿಗಳ ಪಕ್ಕದ ಪ್ರದೇಶಗಳಲ್ಲಿ Jamunapari ಮೇಕೆ ಸಾಕಣೆ ಬಹಳ ಜನಪ್ರಿಯವಾಗಿದೆ. ಈ ತಳಿಯ ಮೇಕೆಗೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಈ ಮೇಕೆಗಳು ಕಾಡಿನ ಎಲೆಗಳು ಮತ್ತು ಮೇವನ್ನು ತಿನ್ನುವ ಮೂಲಕ ನಿರ್ವಹಿಸುತ್ತವೆ ಮತ್ತು ಕಡಿಮೆ ಆಹಾರ ಮತ್ತು ನೀರಿನಿಂದ 2 ವರ್ಷಗಳಲ್ಲಿ ಆರೋಗ್ಯಕರವಾಗುತ್ತವೆ.
ಒಂದೇ ಬಾರಿಗೆ 3 ಮರಿ ಹಾಕುವ ಈ ಮೇಕೆ ವ್ಯವಹಾರದಿಂದ ಗಳಿಸಬಹುದು ಲಕ್ಷ
Jamunapari ತಳಿಯ ಮೇಕೆ ಒಂದೇ ಬಾರಿಗೆ 3 ಮರಿಗಳನ್ನು ನೀಡುತ್ತದೆ. ಒಂದು ಮೇಕೆ ತನ್ನ ಜೀವಿತಾವಧಿಯಲ್ಲಿ 14 ರಿಂದ 15 ಮರಿಗಳಿಗೆ ಜನ್ಮ ನೀಡುತ್ತದೆ. ಈ ತಳಿಯ ಮೇಕೆಗಳು 70 ರಿಂದ 90 ಕೆಜಿ ತೂಕವಿದ್ದರೆ, ಹೆಣ್ಣು ಮೇಕೆಗಳು 50 ರಿಂದ 60 ಕೆಜಿ ತೂಗುತ್ತವೆ.
Jamunapari ಆಡಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳು ಮತ್ತು ಉಪ್ಪು ಇರುತ್ತದೆ. ಇದು ದಿನಕ್ಕೆ 2 ರಿಂದ 3 ಲೀಟರ್ ಹಾಲು ನೀಡುತ್ತದೆ. ಮೇಕ ಹಾಲು ಕೂಡ ಹೆಚ್ಚಿನ ಬೇಡಿಕೆ ಹೊಂದಿದ್ದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಮೇಕೆಯನ್ನು ಸಾಕುವುದರಿಂದ ನೀವು ಮಾಸಿಕವಾಗಿ ಲಕ್ಷ ಲಕ್ಷ ಹಣವನ್ನು ಸಂಪಾದಿಸಬಹುದು.