ದೇಶದಲ್ಲಿ ಹಲವು ಯೋಜನೆಗಳು ಜಾರಿಯಲ್ಲಿ ಇದ್ದು ಈ ಯೋಜನೆಗಳ ಮಾಹಿತಿ ಹೆಚ್ಚಿನ ಜನರಿಗೆ ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬ್ಯಾಂಕುಗಳಿಗೆ ಸಂಬಂಧಿಸಿದಂತ ಹಲವು ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇನ್ನು ತಿಳಿದಿಲ್ಲ ಎಂದು ಹೇಳಬಹುದು. ಸಾಮಾನ್ಯವಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಹೆಚ್ಚಿನ ಜನರಿ ಜನ್ ಧನ್ ಖಾತೆಯನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಆದರೆ ಈ ಖಾತೆಯ ಯೋಜನೆಯ ಅಡಿಯಲ್ಲಿ ಯಾವಯಾವ ಲಾಭ ಇದೆ ಅನ್ನುವುದು ಹೆಚ್ಚಿನ ಜನರಿಗೆ ತಿದಿಲ್ಲ ಎಂದು ಹೇಳಬಹುದು. ಸ್ನೇಹಿತರೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ನೀವು ಜನ್ ಧನ್ ಖಾತೆಯ ಅಡಿಯಲ್ಲಿ 10 ಸಾವಿರ ರೂಪಾಯಿಯನ್ನ ಪಡೆದುಕೊಳ್ಳಬಹುದಾಗಿದೆ.
ಹಾಗಾದರೆ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಬ್ಯಾಂಕ್ ನಮಗೆ ಯಾಕೆ ಹತ್ತು ಸಾವಿರ ರೂಪಾಯಿ ಕೊಡುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ನಿಮ್ಮ ಬ್ಯಾಂಕ್ ಖಾತೆಯಿದ್ದು ಅದರಲ್ಲಿ ಹಣ ಇಲ್ಲದಿದ್ದರೂನೀವು ಸುಲಭವಾಗಿ 10 ಸಾವಿರ ರೂಪಾಯಿಯನ್ನ ಖಾತೆಯಿಂದ ಪಡೆಯಬಹುದು, ಆದರೆ ಇದಕ್ಕಾಗಿ ನೀವು ಜನ್ ಧನ್ ಖಾತೆಯನ್ನು ಹೊಂದಿರಬೇಕು.
ಸ್ನೇಹಿತರೆ ಜನ್ ಧನ್ ಖಾತೆಯ ಅಡಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ಖಾತೆಯನ್ನ ತೆರೆಯಲಾಗುತ್ತದೆ, ಕೇಂದ್ರ ಸರ್ಕಾರ ಈ ಯೋಜನೆಯನ್ನ ಚಾಲ್ತಿಗೆ ತಂದು ಏಳು ವರ್ಷಗಳು ಕಳೆದಿದ್ದು ಸುಮಾರು 41 ಕೋಟಿಗೂ ಅಧಿಕ ಜನರು ಜನ್ ಧನ್ ಖಾತೆಯನ್ನ ತೆರೆದಿದ್ದರೆ ಎಂದು ಹೇಳಬಹುದು. ಈ ಖಾತೆಯಡಿಯಲ್ಲಿ ಅಡಿಯಲ್ಲಿ ಇಮೇ ಸೇರಿದಂತೆ ಹಲವು ಸೌಲಭ್ಯಗಳು ಜನರಿಗೆ ಸಿಗುತ್ತದೆ. ಇನ್ನು ಈ ಖಾತೆ ಹೊಂದಿದವರಿಗೆ ಓವರ್ ಡ್ರಾಫ್ಟ್ ಸೌಲಭ್ಯ ಇದ್ದು ಇದರ ಅಡಿಯಲ್ಲಿ ನೀವು ಖಾತೆಯಲ್ಲಿ ಹಣ ಇಲ್ಲದೆ ಇದ್ದರು 10 ಸಾವಿರ ರೂಪಾಯಿಯನ್ನ ಪಡೆದುಕೊಳ್ಳಬಹುದಾಗಿದೆ. ಹೌದು ಈ ಸೌಲಭ್ಯವು ಅಲ್ಪಾವಧಿ ಸಾಲದಂತಿರುತ್ತದೆ.
ಮೊದಲು ಈ ಮೊತ್ತ 5 ಸಾವಿರ ರೂಪಾಯಿಯಾಗಿತ್ತು, ಆದರೆ ಈಗ ಸರ್ಕಾರ ಈ ಓವರ್ ಡ್ರಾಫ್ಟ್ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸಿದೆ. ಇನ್ನು ಓವರ್ ಡ್ರಾಫ್ಟ್ ಸೌಲಭ್ಯಕ್ಕಾಗಿ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳಾಗಿವೆ. ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ನಿಮ್ಮ ಜನ್ ಧನ್ ಖಾತೆಯು ಕನಿಷ್ಠ 6 ತಿಂಗಳ ಹಳೆಯದಾಗಿರಬೇಕು, ಇಲ್ಲದಿದ್ದರೆ 2,000 ರೂಪಾಯಿ ವರೆಗೆ ಮಾತ್ರ ಓವರ್ ಡ್ರಾಫ್ಟ್ ಪಡೆಯಲು ಸಾಧ್ಯವಾಗುತ್ತದೆ. ಇನ್ನು ಜನ್ ಧನ್ ಖಾತೆ ತೆರೆವವರು, ಜನ್ ಧನ್ ಯೋಜನೆಯಡಿ ಖಾತೆಯನ್ನು ತೆರೆಯುವಾಗ ನೀವು ರುಪೇ ಎಟಿಎಂ ಕಾರ್ಡ್ ಪಡೆದಿದ್ದರೆ ಅದರಿಂದ 2 ಲಕ್ಷ ರೂಪಾಯಿ ಅಪಘಾತ ವಿಮೆ ರಕ್ಷಣೆ, 30 ಸಾವಿರ ರೂಪಾಯಿ ಜೀವ ರಕ್ಷಣೆ ಮತ್ತು ಠೇವಣಿ ಮೊತ್ತದ ಮೇಲಿನ ಬಡ್ಡಿ ಪಡೆಯಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಜನ್ ಧನ್ ಖಾತೆ ಹೊಂದಿರುವ ಎಲ್ಲರಿಗೂ ತಲುಪಿಸಿ.