Janhvi Kapoor Net Worth: ಚರ್ಚೆಯಾಗುತ್ತಿದೆ ಜಾಂಹ್ವಿ ಕಪೂರ್ ಒಟ್ಟು ಆಸ್ತಿ ಮೌಲ್ಯ, ಶ್ರೀದೇವಿ ಮಗಳ ಒಟ್ಟು ಆಸ್ತಿ ವಿವರ.
Actress Janhvi Kapoor Total Property Details: ಬಾಲಿವುಡ್ ನ ಖ್ಯಾತ ನಟಿ ಜಾನ್ವಿ ಕಪೂರ್ (Janhvi Kapoor)ಇದೀಗ ಬಾರಿ ಸುದ್ದಿಯಲ್ಲಿದ್ದಾರೆ ನಟಿ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಜೂನಿಯರ್ NTR ಅಭಿನಯದ NTR 30 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಮೂಲಕ ಟಾಲಿವುಡ್ ಚಿತ್ರರಂಗದತ್ತ ನಟಿ ಜಾನ್ವಿ ಮುಖ ಮಾಡಿದ್ದಾರೆ. ಇನ್ನು ಇದೀಗ ಜಾನ್ವಿ ಕಪೂರ್ ಅವರ ಆಸ್ತಿಯ ಮೌಲ್ಯಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಐಷಾರಾಮಿ ಜೀವನ ನಡೆಸುತ್ತಿರುವ ಜಾನ್ವಿ ಕಪೂರ್
ವರದಿಗಳ ಪ್ರಕಾರ, ಜಾನ್ವಿ ಕಪೂರ್ ನಿವ್ವಳ ಆದಾಯ 50 ಕೋಟಿ ರೂಪಾಯಿ. ಒಂದು ಸಿನಿಮಾಗೆ 5 ಕೋಟಿ ಸಂಭಾವನೆಯನ್ನು ಈ ನಟಿ ಪಡೆಯುತ್ತಾರೆ.
ಒಂದು ಪ್ರಾಯೋಜಿತ ಪೋಸ್ಟ್ ಗೆ 70 ರಿಂದ 80 ಲಕ್ಷ ಚಾರ್ಜ್ ಮಾಡುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿ ಗಳಿಸಿರುವ ಜಾನ್ವಿ ಕಪೂರ್ ಬಳಿ ಇರುವ ದುಬಾರಿ ವಸ್ತುಗಳ ಬಗ್ಗೆ ಮಾಹಿತಿ ತಿಳಿಯೋಣ.
ಬ್ರಾಂಡ್ ಅಂಬಾಸಿಡರ್ ಆಗಿ ಜಾನ್ವಿ ಕಪೂರ್
ಜಾನ್ವಿ ಕಪೂರ್ ಹಲವಾರು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಒಂದು ಕಂಪನಿಯ ಅಂಬಾಸಿಡರ್ ಆಗಲು 53 ಲಕ್ಷದಿಂದ 1 ಕೋಟಿಯವರೆಗೆ ಚಾರ್ಜ್ ಮಾಡುತ್ತಾರೆ. ನೈಕ, ಮಿಂಟ್ ಚಾಕೊನ್ ಮತ್ತು ರಿಲಯನ್ಸ್ ಟ್ರೆಂಡ್ಸ್ ಸೇರಿದಂತೆ ಹಲವು ಜನಪ್ರಿಯ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ದುಬಾರಿ ವೆಚ್ಚದ ಕಾರ್ ಹಾಗೂ ಮನೆಗಳನ್ನು ಹೊಂದಿರುವ ಜಾನ್ವಿ ಕಪೂರ್
ಜಾನ್ವಿ ಕಪೂರ್ ಮುಂಬೈ ನ ಜುಹುನಲ್ಲಿ 39 ಕೋಟಿ ಬೆಲೆ ಬಾಳುವ ದುಬಾರಿ ಅಪಾರ್ಟ್ ಮೆಂಟ್ ಅನ್ನು ಖರೀದಿಸಿದ್ದಾರೆ.
ಹಾಗು 67.15 ಲಕ್ಷ ಬೆಲೆಬಾಳುವ ಮರ್ಸಿಡಿಸ್ ಗ್ಲೇ, 82.9 ಲಕ್ಷ ಬೆಲೆಬಾಳುವ BMW X5, 88.28 ಲಕ್ಷ ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಮತ್ತು 1.98 ಕೋಟಿ ಬೆಲೆ ಬಾಳುವ ಮರ್ಸಿಡಿಸ್ ಮೇಬ್ಯಾಕ್ S560 ಕಾರುಗಳನ್ನು ಹೊಂದಿದ್ದಾರೆ.