ಚಿನ್ನ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್, ಒಂದೇ ದಿನದಲ್ಲಿ 1600 ರೂಪಾಯಿ ಇಳಿದ ಚಿನ್ನದ ಬೆಲೆ, ಇಂದಿನ ಬೆಲೆ ಎಷ್ಟು ನೋಡಿ.
ಚಿನ್ನ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಹುಟ್ಟಿದ ಪ್ರತಿಯೊಬ್ಬ ಮಾನವ ಕೂಡ ಚಿನ್ನಕ್ಕೆ ಇಷ್ಟಪಡುತ್ತಾನೆ ಎಂದು ಹೇಳಿದರೆ ತಪ್ಪಾಗಲ್ಲ.ಇನ್ನು ಕಳೆದ ವರ್ಷ ಕರೋನ ಮಹಾಮಾರಿ ಲಾಕ್ ಡೌನ್ ಸಮಯದಲ್ಲಿ ಏರಿಕೆ ಆಗಿದ್ದ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡು ಬಡಜನರ ಕಣ್ಣಲ್ಲಿ ನೀರು ಬರುವಂತೆ ಮಾಡಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿನ್ನದ ಬೆಲೆ ಏರಿಕೆಯ ಕಾರಣ ಅದೆಷ್ಟೋ ಮದುವೆಗಳು ಮುಂದಕ್ಕೆ ಹೋದವು ಎಂದು ಹೇಳಬಹುದು. ಇನ್ನು ದೇಶದಲ್ಲಿ ಕಳೆದ ವಾರ ಭಾರಿ ಪ್ರಮಾಣದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿದ್ದ ಚಿನ್ನದ ಬೆಲೆ ಸಡನ್ ಆಗಿ ಇಳಿಕೆಯ ಹಾದಿಯನ್ನ ಹಿಡಿದಿದ್ದು ಜನರು ಚಿನ್ನವನ್ನ ಖರೀದಿ ಮಾಡಲು ಚಿನ್ನದ ಮಳಿಗೆಗಳ ಬಳಿ ಬರುತ್ತಿದ್ದಾರೆ.
ಹೌದು ದೇಶದಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು ಇದು ಜನರ ಖುಷಿಗೆ ಕಾರಣವಾಗಿದೆ. ಹಾಗಾದರೆ ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಮತ್ತು ಎಷ್ಟು ಇಳಿಕೆಯನ್ನ ಕಂಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಆಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆ ಇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಕಳೆದ ವಾರ 22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 4600 ರೂಪಾಯಿ ಆಗಿತ್ತು ಮತ್ತು ಈ ಚಿನ್ನದ ಬೆಲೆ ದೊಡ್ಡ ಇತಿಹಾಸವನ್ನ ಸೃಷ್ಟಿ ಮಾಡಿತ್ತು.ಇನ್ನು ಕಳೆದ ಎರಡು ವಾರದಿಂದ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು ಇಂದು ದೇಶದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4460 ರೂಪಾಯಿ ಆಗಿದೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರಾದಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 140 ರೂಪಾಯಿ ಇಳಿಕೆಯನ್ನ ಕಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆ ಇದ್ದು ದೇಶದಲ್ಲಿ ಇನ್ನೊಮ್ಮೆ ಲಾಕ್ ಡೌನ್ ಆದರೆ ಚಿನ್ನದ ಬೆಲೆ ಬಹಳ ಏರಿಕೆ ಆಗಲಿದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನ ಹೇಳುತ್ತಿದ್ದಾರೆ.
ಇನ್ನು ದೇಶದಲ್ಲಿ ಇಂದು 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 44600 ರೂಪಾಯಿ ಆಗಿದ್ದು ಕಳೆದ ಒಂದು ವಾರದಲ್ಲಿ ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1400 ರೂಪಾಯಿ ಇಳಿಕೆ ಆಗಿದ್ದು ನೂರು ಗ್ರಾಮ್ ಚಿನ್ನದ ಬೆಲೆಯಲ್ಲಿ 14 ಸಾವಿರ ರೂಪಾಯಿ ಇಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿನ ಪ್ರಗತಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಪ್ರಾಮಾಣದ ಇಳಿಕೆ ಆದಕಾರಣ ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸ್ನೇಹಿತರೆ ಚಿನ್ನವನ್ನ ಖರೀದಿ ಮಾಡಲು ಇದು ಉತ್ತಮವಾದ ಸಮಯವಾಗಿದ್ದು ಈ ಮಾಹಿತಿಯನ್ನ ಪ್ರತಿಯೊಬ್ಬ ಚಿನ್ನ ಪ್ರಿಯರಿಗೆ ತಲುಪಿಸಿ.