ಜನವರಿ 1 ರಿಂದ ಈ ನಿಯಮಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ, ಜೇಬಿಗೆ ಬೀಳಲಿದೆ ಕತ್ತರಿ, ಹೊಸ ನಿಯಮ ನೋಡಿ.

2021 ರ ವರ್ಷ ಕಳೆದು ಹೊಸ ವರ್ಷ ಆರಂಭ ಆಗಲು ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ ಎಂದು ಹೇಳಬಹುದು. ಹೌದು ಹಳೆಯ ಕೆಟ್ಟ ನೆನಪುಗಳನ್ನ ಮರೆತು ಹೊಸ ಜೀವನವನ್ನ ಆರಂಭ ಮಾಡಲು ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಹೊಸ ವರ್ಷ ಅನ್ನುವುದು ಹೊಸ ನಿಯಗಳನ್ನು ಆರಂಭ ಆಗಲಿದೆ ಎಂದು ಹೇಳಬಹುದು. ಹೌದು ಹೊಸ ವರ್ಷದ ಆರಂಭದಿಂದ ಹೊಸ ನಿಯಮಗಳು ದೇಶದಲ್ಲಿ ಜಾರಿಗೆ ಬರಲಿದ್ದು ಈ ನಿಯಗಳು ಜನರಿಗೆ ಬಹಳ ಸಮಸ್ಯೆಯನ್ನ ಉಂಟುಮಾಡಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಣದುಬ್ಬರದ ಕಾರಣ ಮತ್ತು ಕೆಲವು ಅಗತ್ಯ ಉದ್ದೇಶದ ಕಾರಣ ದೇಶದಲ್ಲಿ ಹೊಸ ನಿಯಮಗಳು ಜನವರಿ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದ್ದು ಈ ನಿಯಮಗಳ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಹೇಳಬಹುದು. ಹಾಗಾದರೆ ಜನವರಿ 1 ನೇ ತಾರೀಕಿನಿಂದ ಜಾರಿಗೆ ಬರಲಿರುವ ಆ ಹೊಸ ನಿಯಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಜನವರಿ ಮೊದಲ ದಿನದಿಂದ ದೇಶದ ಅಗತ್ಯ ಸೇವೆಗಳಲ್ಲಿ ಕೆಲವು ಬದಲಾವಣೆ ಆಗಲಿದೆ ಎಂದು ಹೇಳಬಹುದು.

januari rule change

ಇನ್ನು ಜನವರಿ ಮೊದಲ ದಿನದಿಂದ ಏಟಿಎಂ ಬಳಸುವ ಎಲ್ಲಾ ಜನರಿಗೆ ಶಾಕಿಂಗ್ ಸುದ್ದಿ ಇದೆ ಎಂದು ಹೇಳಬಹುದು. ಹೌದು ಏಟಿಎಂ ಮೂಲಕ ನಗದು ಹಿಂಪಡೆಯುವ ಶುಲ್ಕದಲ್ಲಿ ಏರಿಕೆ ಆಗಲಿದೆ ಜನರು ಉಚಿತ ಮಿತಿಗಿಂತ ಹೆಚ್ಚಿನ ಸಮಯ ನಗದು ಹಣವನ್ನ ಹಿಂಪಡೆದರೆ ಅವರು ಹೆಚ್ಚಿನ ಶುಲ್ಕವನ್ನ ಪಾವತಿ ಮಾಡಬೇಕು. ಇನ್ನು ಜನವರಿ ಮೊದಲ ದಿನದಿಂದ ಅಂಚೆ ಕಚೇರಿಯ ಸೇವೆಯಲ್ಲಿ ಕೂಡ ಬದಲಾವಣೆ ಆಗಲಿದೆ. ಹೌದು ಅಂಚೆ ಕಚೇರಿಯಲ್ಲಿ ಮಿತಿಗಿಂತ ಹೆಚ್ಚಿನ ಬಾರಿ ಹಣವನ್ನ ತೆಗೆದರೆ ಅಥವಾ ಹಣವನ್ನ ಜಮಾ ಮಾಡಿದರೆ 25 ರೂಪಾಯಿ ಶುಲ್ಕದ ಜೊತೆಗೆ GST ಹಣವನ್ನ ಕೂಡ ಜನರು ಪಾವತಿ ಮಾಡಬೇಕು. ಇನ್ನು ಪಿಂಚಣಿ ಹಣ ಪಡೆಯುವ ಎಲ್ಲಾ ಜನರಿಗೆ ದೊಡ್ಡ ಶಾಕಿಂಗ್ ಇದೆ.

ಹೌದು ಪಿಂಚಣಿ ಹಣವನ್ನ ಪಡೆದುಕೊಳ್ಳುವ ಎಲ್ಲ 60 ವರ್ಷ ಮೇಲ್ಪಟ್ಟ ಜನರು ಇದೆ 31 ರ ಒಳಗಾಗಿ ತಮ್ಮ ಜೀವನ ಪ್ರಮಾಣಪತ್ರವನ್ನ ಸಲ್ಲಿಸದೆ ಇದ್ದರೆ ಜನವರಿ ತಿಂಗಳಿಂದ ಅವರಿಗೆ ಯಾವುದೇ ಪಿಂಚಣಿ ಹಣವ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಇನ್ನು ಅದೇ ರೀತಿಯಲ್ಲಿ ಜನವರಿ ಮೊದಲ ವಾರವೇ ಹಣ ದುಬ್ಬರದ ಕಾರಣ ಗ್ಯಾಸ್ ಬೆಲೆಯಲ್ಲಿ ಕೂಡ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಾಣಿಜ್ಯ ಮತ್ತು ಗ್ರಹ ಬಳಕೆ ಬಳಸುವ ಎರಡು ಗ್ಯಾಸ್ ಗಳ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ವಿದ್ಯುತ್ ದರದಲ್ಲಿ ಕೂಡ ಕೆಲವು ಬದಲಾವಣೆ ಆಗುವ ಸಾಧ್ಯತೆ ಇದೆ. ಸ್ನೇಹಿತರೆ ಹೊಸ ವರ್ಷದಲ್ಲಿ ಆಗುವ ಈ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

januari rule change

Join Nadunudi News WhatsApp Group