New Rules implementation 2026: ಇನ್ನೇನು ಕೆಲವೇ ದಿನಗಳಲ್ಲಿ ಡಿಸೆಂಬರ್ ತಿಂಗಳು ಕೊನೆಗೊಳ್ಳಲಿದೆ. ಇದೀಗ ಹೊಸ ವರ್ಷದ ಆರಂಭದೊಂದಿಗೆ ಅನೇಕ ಕಾನೂನು ನಿಯಮಗಳನ್ನು ಬದಲಾವಣೆ ಮಾಡಲಾಗುತ್ತಿದೆ. 2026 ರ ಜನವರಿಯಿಂದ ಭಾರತದಲ್ಲಿ 5 ಪ್ರಮುಖ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ನಿಯಮಗಳು ಕೇಂದ್ರ ಸರ್ಕಾರದ ಇತ್ತೀಚಿನ ಘೋಷಣೆಗಳ ಆಧಾರದ ಮೇಲೆ ರೂಪಿಸಲ್ಪಟ್ಟಿವೆ. ಹಾಗಾದರೆ ಜನವರಿ 1 ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಯಾವುದು..? ಅದರಿಂದ ಪ್ರಯೋಜನ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
* New Traffic Rules
ಜನವರಿ 2026 ರಿಂದ ಭಾರತದ ಎಲ್ಲಾ ರಾಜ್ಯಗಳಲ್ಲಿ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಮೊಬೈಲ್ ಮೂಲಕ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆ ಟ್ರಾಫಿಕ್ ನಲ್ಲಿ ದಂಡವನ್ನು ಹೆಚ್ಚಿಸಲಾಗುತ್ತದೆ. ಉದಾಹರಣೆಗೆ, ಸಿಗ್ನಲ್ ಜಂಪಿಂಗ್ ಗೆ ಹಿಂದಿನ ದಂಡಕ್ಕಿಂತ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ. ಇದು ರಸ್ತೆ ಅಪಘಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗುತ್ತಿದೆ. ವಾಣಿಜ್ಯ ವಾಹನಗಳಲ್ಲಿ GPS ಮಾನಿಟರಿಂಗ್ ಕಡ್ಡಾಯವಾಗುತ್ತದೆ, ಇದರಿಂದ ಪ್ರಯಾಣಿಕರ ಸುರಕ್ಷತೆ ಹೆಚ್ಚಾಗುತ್ತದೆ. ಇನ್ನು ಪರಿಸರ ಮಾಲಿನ್ಯದ ಮೇಲೆ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ. ಹಳೆಯ ವಾಹನಗಳಿಗೆ ಹೊಸ ಎಮಿಷನ್ ಟೆಸ್ಟ್‌ಗಳು ಅಗತ್ಯ. ಇದು ನಮ್ಮ ನಗರಗಳ ಗಾಳಿ ಗುಣಮಟ್ಟವನ್ನು ಸುಧಾರಿಸುತ್ತದೆ.
* Digital Personal Data Protection
ನಿಮ್ಮ ವಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಜನವರಿ 2026 ರಿಂದ DPDP Act ಅಡಿಯಲ್ಲಿ ಕಂಪನಿಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೆಚ್ಚು ಸುರಕ್ಷಿತವಾಗಿ ನಿರ್ವಹಿಸಬೇಕು. ಸಾಮಾಜಿಕ ಮಾಧ್ಯಮಗಳು ಮತ್ತು ಆನ್ಲೈನ್ ಗೇಮಿಂಗ್ ಪ್ಲಾಟ್ ಫಾರ್ಮ್ ಗಳು 3 ವರ್ಷಗಳ ನಂತರ ಡೇಟಾ ಡಿಲೀಟ್ ಮಾಡಬೇಕು ಮತ್ತು ಇದು ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ. ಯಾರಾದರೂ ಸೂಕ್ಷ್ಮ ಡೇಟಾ ಅಥವಾ ವೈಯಕ್ತಿಕ ಮಾಹಿತಿಯನ್ನು ಅನುಮತಿಯಿಲ್ಲದೆ, ಆಕಸ್ಮಿಕವಾಗಿ ಅಥವಾ ದುರುದ್ದೇಶಪೂರಿತವಾಗಿ ಡೇಟಾ ಉಲ್ಲಂಘನೆ ಮಾಡಿದರೆ ತ್ವರಿತವಾಗಿ ತಿಳಿಸಬೇಕು, ಇದರಿಂದ ಡಿಜಿಟಲ್ ಜಗತ್ತು ಹೆಚ್ಚು ವಿಶ್ವಾಸಾರ್ಹವಾಗುತ್ತದೆ. ನವೆಂಬರ್ 2026 ರಿಂದ ಸಮ್ಮತಿ ಮ್ಯಾನೇಜರ್ ಗಳು ಆರಂಭವಾಗುತ್ತವೆ. ಇದು ನೀವು ಯಾವ ಕಂಪನಿಗೆ ನಿಮ್ಮ ಡೇಟಾ ಶೇರ್ ಮಾಡಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಸಮ್ಮತಿ ಮ್ಯಾನೇಜರ್ ಒಪ್ಪಿಗೆಯ ನಂತರವೇ ಡಿಜಿಟಲ್ ಡೇಟಾ ಹಂಚಿಕೆ ಆಗುತ್ತೆ.
* Consecutive Check Clearing Of Cheque
ನೀವು ಚೆಕ್ ಬಳಕೆ ಮಾಡುತ್ತಿದ್ದರೆ ನಿಮಗೆ ಈ ಮಾಹಿತಿ ಉಪಯುಕ್ತ ಆಗಲಿದೆ. RBI ನ ಹೊಸ ನಿಯಮದ ಪ್ರಕಾರ, ಜನವರಿ 2026 ರಿಂದ Bank ಚೆಕ್ ಕ್ಲಿಯರಿಂಗ್ ತ್ವರಿತವಾಗಿ ಆಗುತ್ತದೆ. ಹಿಂದಿನಂತೆ ಚೆಕ್ ಕ್ಲಿಯರಿಂಗ್ ತಡವಾಗದೆ, ತಕ್ಷಣ ಹಣ ವಾಪಾಸ್ ಪಡೆದುಕೊಳ್ಳಬಹುದು. ಇದು ವ್ಯಾಪಾರಿಗಳಿಗೆ ಉತ್ತಮವಾಗಿದೆ ಮತ್ತು ಇದರಿಂದ ಟ್ರಾನ್ಸಾಕ್ಷನ್ ಗಳು ವೇಗವಾಗುತ್ತವೆ. ಆದರೆ ಸುರಕ್ಷತೆಯ ಕಡೆ ಬ್ಯಾಂಕುಗಳು ಹೆಚ್ಚಿನ ಗಮನ ಕೊಡಬೇಕಾಗುತ್ತದೆ.
* Labour Codes
ಇದೀಗ ಕಾರ್ಮಿಕರ ಹಿತದೃಷ್ಟಿಯಿಂದ ದೇಶದಲ್ಲಿ ಹೊಸ ಲೇಬರ್ ಕೋಡ್ ಜಾರಿಗೆ ತರಲಾಗಿದೆ. ಇವುಗಳು 29 ಹಳೆಯ ಕಾನೂನುಗಳನ್ನು ಸರಳಗೊಳಿಸಿ, ಕೆಲಸಗಾರರಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಈ ಹೊಸ ನಿಯಮ ಕಾರ್ಮಿಕರಿಗೆ ಭವಿಷ್ಯದಲ್ಲಿ ಹಣ ಉಳಿತಾಯ ಮಾಡಲು ಸಾಕಷ್ಟು ಸಹಾಯಕವಾಗಲಿದೆ. ಕಾರ್ಮಿಕ ಕೋಡ್ ನಿಯಮದಲ್ಲಿ 4 ಬದಲಾವಣೆ ಮಾಡಲಾಗಿದೆ ಮತ್ತು ಆ ಬದಲಾವಣೆ ಈ ಕೆಳಗಿನಂತಿದೆ.
* ವೇತನ ಸಂಹಿತೆ (2019)
* ಕೈಗಾರಿಕಾ ಸಂಬಂಧಗಳ ಕೋಡ್ (2020)
* ಸಾಮಾಜಿಕ ಭದ್ರತೆ ಸಂಹಿತೆ (2020)
* ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ (OSHWC, 2025)
ಇವುಗಳು ಹಳೆಯ ಕಾನೂನನ್ನು ಬದಲಾಯಿಸಿ ಕೆಲಸಗಾರರಿಗೆ ಸಮಾನತೆ, ಸುರಕ್ಷತೆ ಮತ್ತು ಇತರ ಸೌಲಭ್ಯವನ್ನ ನೀಡುತ್ತವೆ.
* Digital Payment Security
ಜನವರಿ 2026 ರಿಂದ ಡಿಜಿಟಲ್ ಪೇಮೆಂಟ್ ಗಳಿಗೆ Two-factor authentication ಕಡ್ಡಾಯವಾಗಿದೆ. ಬಯೋಮೆಟ್ರಿಕ್ ಬಳಸುವುದರಿಂದ ದುರ್ಬಳಕೆ ಕಡಿಮೆ ಆಗುತ್ತದೆ. ಇದು ನಿಮ್ಮ ಹಣಕಾಸಿನ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಡಿಜಿಟಲ್ ಇಂಡಿಯಾ ಗುರಿಗೆ ಇದು ಒಂದು ದೊಡ್ಡ ಹೆಜ್ಜೆ ಆಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

