Ads By Google

Ram Mandir: ಜನವರಿ 22ಕ್ಕೆ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದಿಯಾ? ಇಲ್ಲಿದೆ ಮಾಹಿತಿ

ram mandir holidays in karnataka

Image Credit: Original Source

Ads By Google

January 22 School Holiday In Karnataka: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 , 2024 ರಂದು ಶ್ರೀ ರಾಮನ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈಗಾಗಲೇ ಸಕಲ ಸಿದ್ದತೆಯಲ್ಲಿ ಅಯೋಧ್ಯೆ ಸಜ್ಜಾಗಿದೆ. ಶತಮಾನಗಳಿಂದ ಕಾಯುತ್ತಿದ್ದ ಈ ಗಳಿಗೆಗೆ ಈಗ ಕಾಲ ಕೂಡಿ ಬಂದಿದ್ದು, ಹಿಂದೂಗಳ ದೊಡ್ಡ ಕನಸು ನನಸಾಗುತ್ತಿದೆ. ಈಗಾಗಲೇ ಮನೆ ಮನೆಗಳಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ಬಗ್ಗೆ ಕುತೂಹಲ ಮೂಡಿದೆ. ಸಾಕಷ್ಟು ಮನೆಗಳಿಗೆ ಜನರು ಹೋಗಿ ರಾಮಮಂದಿರ ಉದ್ಘಾಟನೆಯ ದಿನ ದೀಪ ಹಚ್ಚುವಂತೆ ಸೂಚನೆ ನೀಡಿದ್ದಾರೆ.

Image Credit: India Times

ಶ್ರೀ ರಾಮ ಮಂದಿರದ ಉದ್ಘಾಟನೆಗೆ ಇಡೀ ದೇಶವೇ ಸಜ್ಜಾಗಿದೆ

ಜನವರಿ 22 ರ ದಿನಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದು, ಶ್ರೀ ರಾಮ ಮಂದಿರದ ಉದ್ಘಾಟನೆ ಹಾಗೂ ರಾಮಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಎಲ್ಲಾ ರೀತಿಯ ತಯಾರಿ ಆಗಿದೆ. ಈ ದಿನದಂದು ದೇಶದ ವಿವಿಧ ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶ್ರೀರಾಮ ಮಂದಿರ ಕೇವಲ ಉತ್ತರ ಪ್ರದೇಶ ರಾಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ, ಇದು ಇಡೀ ದೇಶಕ್ಕೆ ಸಂಬಂಧಪಟ್ಟಿದ್ದು, ವಿಶ್ವವೇ ಅಂದು ಅಯೋಧ್ಯೆಯ ಕಡೆಗೆ ಮುಖ ಮಾಡಿ ನೋಡಲು ಶ್ರೀರಾಮ ಮಂದಿರ ಎನ್ನುವುದು ಕಾರಣವಾಗಲಿದೆ.

ಸರ್ಕಾರಿ ರಜೆ ಘೋಷಣೆಗೆ ಮನವಿ

ಜನವರಿ 22, 2024 ರಂದು ಶ್ರೀರಾಮ ಮಂದಿರ ಉದ್ಘಾಟನೆಯ ಸಲುವಾಗಿ ಇಡೀ ದೇಶದಲ್ಲಿ ಸರ್ಕಾರೀ ರಜೆ ನೀಡುವಂತೆ ಮನವಿ ಮಾಡಿಕೊಂಡಿದ್ದು, ಒಂದು ವೇಳೆ ಅಯೋಧ್ಯೆ ಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿ ಮನೆಯಲ್ಲಿಯೇ ಕುಳಿತು ಅಯೋಧ್ಯೆಯ ಉದ್ಘಾಟನಾ ಸಂಭ್ರಮವನ್ನು ಮಾಧ್ಯಮಗಳ ಮೂಲಕ ನೋಡಿ ಶ್ರೀರಾಮನ ಭಕ್ತಿಗೆ ಪಾತ್ರರಾಗಬೇಕು ಎಂದು ಸರ್ಕಾರ ಮಾಹಿತಿ ನೀಡಿದೆ. ಹಾಗಾಗಿ ಶ್ರೀರಾಮ ಮಂದಿರ ಉದ್ಘಾಟನೆಯ ದಿನ ಪ್ರತಿಯೊಬ್ಬರಿಗೂ ಕೂಡ ಕೆಲಸಕ್ಕೆ ರಜೆ ಕೊಟ್ಟರೆ ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಲು ಸಹಾಯವಾಗುತ್ತದೆ ಎನ್ನುವುದು ಹಲವರ ಹೇಳಿಕೆ ಆಗಿದೆ.

Image Credit: Thesouthfirst

ಶಾಲಾ ಮಕ್ಕಳಿಗೆ ರಜೆಯನ್ನು ಘೋಷಿಸುವ ಕುರಿತು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ

ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಗೆ ಮಕ್ಕಳು ಕೂಡ ಸಾಕ್ಷಿ ಆಗಬೇಕು ಹಾಗಾಗಿ ಅವರಿಗೂ ಕೂಡ ರಾಜ್ಯದಲ್ಲಿ ಜನವರಿ 22ಕ್ಕೆ ರಜೆ ಘೋಷಿಸಬೇಕು ಎಂದು ಹಲವು ಹಿಂದೂ ಸಂಸ್ಥೆಗಳು, ಶ್ರೀ ರಾಮ ಸೇನೆ, ಶ್ರೀರಾಮ ಸಂಘಟನೆಗಳು ರಜೆ ಘೋಷಣೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಹನುಮನ ನಾಡು, ಅಯೋಧ್ಯ ರಾಮಮಂದಿರದ ಲೋಕಾರ್ಪಣೆಯ ದಿನ ಮಕ್ಕಳಿಗೆ ರಜೆಯನ್ನು ಘೋಷಿಸಿ, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು, ಮುಂದಿನ ಪೀಳಿಗೆಗೂ ತಿಳಿಸಲು ಮಕ್ಕಳನ್ನು ಸಿದ್ಧಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in