Jayamala: ಮದುವೆಗೂ ಮುನ್ನವೇ ಹರ್ಷಿಕಾಗೆ ದುಬಾರಿ ಉಡುಗೊರೆ ನೀಡಿದ ಹಿರಿಯ ನಟಿ ಜಯಮಾಲಾ.
ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೊಸ ಹರ್ಷಿಕಾ ಅವರಿಗೆ ದುಬಾರಿ ಉಡುಗೊರೆ ನೀಡಿದ ನಟಿ ಜಯಮಾಲಾ.
Jayamala Gold Earrings Gifts To Harshika: ಚಂದನವನದಲ್ಲಿ ಇತ್ತೀಚಿಗೆ ಗಟ್ಟಿಮೇಳದ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಕಿರು ತೆರೆಯ ಕಲಾವಿದರಿಂದ ಹಿಡಿದು ಬೆಳ್ಳಿ ತೆರೆಯ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಹರಿಪ್ರಿಯಾ ವಸಿಷ್ಠ ಸಿಂಹ, ಅತಿಥಿ ಪ್ರಭುದೇವ್, ಯಶಸ್, ಅಭಿಷೇಕ್ ಅಂಬರೀಷ್ ಅವೀವಾ ಮದುವೆ ಚಂದನವನದಲ್ಲಿ ಬಾರಿ ಸದ್ದು ಮಾಡಿತ್ತು.
ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಬಿಗ್ ಬಾಸ್ ಖ್ಯಾತಿಯ ಭುವನ್ (Bhuvan) ಅವರ ಮದುವೆಯ ಸುದ್ದಿಗಳು ವೈರಲ್ ಆಗುತ್ತಿದೆ. ಇಡೀ ಚ್ನದನವನ ಈ ಜೋಡಿ ಮದುವೆಗೆ ಕಾಯುತ್ತಿದೆ. ಈ ಇಬ್ಬರು ಜೋಡಿಯ ಮದುವೆ ದಿನಾಂಕ ಕೂಡ ನಿಗದಿಯಾಗಿದ್ದು ನಟಿ ತಮ್ಮ ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯುವುದನ್ನು ನೋಡಲು ಎಲ್ಲರು ಕಾಯುತ್ತಿದ್ದಾರೆ.
ಹಸೆಮಣೆ ಏರಲಿದ್ದಾರೆ ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕೊನೆಗೂ ಹಸೆಮಣೆ ಏರುತ್ತಿದ್ದಾರೆ. ತುಂಬಾ ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು. ಮದುವೆ ವಿಚಾರವಾಗಿ ಇಬ್ಬರು ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ತಮ ಪ್ರೀತಿಗೆ ಮದುವೆಯ ಮುದ್ರೆ ಹಾಕಲು ಸಜ್ಜಾಗಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಅವರ ಮದುವೆ ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧವಾಗಿದೆ.
ಇನ್ನು ಮೂರೇ ದಿನದಲ್ಲಿ ಸತಿಪತಿ ಆಗಲಿದ್ದಾರೆ ಹರ್ಷಿಕಾ- ಭುವನ್
ಕೊಡಗು ಭಾಷೆಯಲ್ಲಿಯೇ ಆಮಂತ್ರಣ ಪತ್ರಿಕೆ ಸಿದ್ದವಾಗಿದ್ದು, ಕೊಡಗು ಸಂಪ್ರದಾಯದಂತೆಯೇ ಇಬ್ಬರು ಮದುವೆ ಆಗಲಿದ್ದಾರೆ. ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲಿಯೇ ನಡೆಯಲಿವೆ. ಇನ್ನು ಈ ಜೋಡಿಯ ಮದುವೆ ಆಗಸ್ಟ್ 24 ಕ್ಕೆ ನಡೆಯಲಿದೆ.
ಈ ಜೋಡಿಯ ಆತ್ಮೀಯರು ಸಿನಿಮಾರಂಗದ ನಟ ನಟಿಯರು, ಕಲಾವಿದರು ಸೇರಿದಂತೆ ಇನ್ನಿತರ ಗಣ್ಯರಿಗೆ ಲಗ್ನ ಪತ್ರಿಕೆ ಹಂಚುತ್ತಿದ್ದಾರೆ. ಈ ವೇಳೆ ಕನ್ನಡದ ಖ್ಯಾತ ಹಿರಿಯ ನಟಿ ಜಯಮಾಲಾ (Jayamala) ಅವರು ಹರ್ಷಿಕಾ ಅವರಿಗೆ ಬಿಗ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
ಮದುವೆಗೂ ಮುನ್ನವೇ ಹರ್ಷಿಕಾಗೆ ದುಬಾರಿ ಉಡುಗೊರೆ ನೀಡಿದ ನಟಿ ಜಯಮಾಲಾ
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಸಾಂಪ್ರದಾಯಿಕವಾಗಿ ಆಪ್ತರ ಮನೆಗೆ ಹೋಗಿ ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ಈ ವೇಳೆ ನಟಿ ಹರ್ಷಿಕಾ ಪೂಣಚ್ಚ ಹಿರಿಯ ನಟಿ ಜಯಮಾಲಾ ಅವರ ಮನೆಗೂ ಭೇಟಿ ನೀಡಿದ್ದ್ದಾರೆ.ನಟಿ ಜಯಮಾಲ ಅವರು ಆಮಂತ್ರಣ ಪತ್ರಿಕೆ ನೀಡಲು ಬಂದ ಹರ್ಷಿಕಾ ಪೂಣಚ್ಚ ಅವರಿಗೆ ಬಾರಿ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.
View this post on Instagram
ಮದುವೆಗೂ ಮುನ್ನವೇ ಹರ್ಷಿಕಾಗೆ ಚಿನ್ನದ ಓಲೆಯನ್ನು ಉಡುಗೊರೆಯಾಗಿ ನೀಡಿ ನವ ವಧುವಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಕೈಯಾರೆ ಹರ್ಷಿಕಾ ಅವರಿಗೆ ಕಿವಿ ಓಲೆಯನ್ನು ನಟಿ ತೊಡಿಸಿದ್ದಾರೆ. ಜಯಮಾಲಾ ಅವರು ಹರ್ಷಿಕಾ ಅವರಿಗೆ ಓಲೆ ತೊಡಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.