ನಮ್ಮ ಕಣ್ಣಿಗೆ ಕಾಣುವ ದೇವರುಗಳು ಅಂದರೆ ಅದು ತಂದೆ ಮತ್ತು ತಾಯಿ ಎಂದು ಹೇಳಬಹುದು. ನಮ್ಮ ಭಾರತದ ಸಂಪ್ರದಾಯದಲ್ಲಿ ತಂದೆ ತಾಯಿಯನ್ನ ದೇವರಿಗೆ ಹೋಲಿಕೆ ಮಾಡಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ಇನ್ನು ಇತ್ತೀಚಿನ ಕಾಲದಲ್ಲಿ ಕೆಲವು ಮಕ್ಕಳು ಹೆತ್ತವರನ್ನ ದಾರಿಪಾಲು ಮಾಡುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ, ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಸರ್ವೇ ಸಾಮಾನ್ಯವಾಗಿದೆ ಎಂದು ಹೇಳಬಹುದು. ಕೆಲವು ನಟ ಮತ್ತು ನಟಿಯರು ತಾವು ಫೇಮಸ್ ಆಗಲು ಏನು ಮಾಡಲು ಹಿಂದೆಮುಂದೆ ನೋಡುವುದಿಲ್ಲ ಎಂದು ಹೇಳಬಹುದು.
ಸ್ನೇಹಿತರೆ ಇಲ್ಲೊಬ್ಬ ಖ್ಯಾತ ನಟಿ ತಾನು ಫೇಮಸ್ ಆಗುವ ಸಲುವಾಗಿ ತಂದೆಯ ಶವದ ಮುಂದೆ ಮಾಡಿರುವ ಕೆಲಸ ಅಭಿಮಾನಿಗಳ ಬೇಸರಕ್ಕೆ ಮತ್ತು ಕೋಪಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಈಕೆ ಮಾಡಿರುವ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಟಿಕೆ ಬರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ತಂದೆಯ ಶವದ ಮುಂದೆ ಈ ನಟಿ ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಮಾಡೆಲ್ ಕಮ್ Influencer ಜಯ್ನೆ ರಿವೇರಾ (Jayne Rivera) ತಂದೆ ಶವದ ಜೊತೆ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಬೆಂಕಿ ಹೆಚ್ಚಿಸುತ್ತಿದ್ದಾರೆ. ಹೌದು ತಂದೆ ತೀರಿಕೊಂಡ ವಿಚಾರವನ್ನೂ ಶವದ ಜೊತೆ ಫೋಟೋಶೂಟ್ ಮಾಡುವ ಮೂಲಕ ರಿವೀಲ್ ಮಾಡಿದ್ದಾರೆ. ನೆಟ್ಟಿಗರು ಈ ಫೋಟೋಗೆ ರಿಪೋರ್ಟ್ ಮಾಡಿದ ಕಾರಣ ಹಾಗೂ ಇನ್‌ಸ್ಟಾಗ್ರಾಂ ರೂಲ್ಸ್ (Instagram Rules) ಬ್ರೇಕ್ ಮಾಡಿದ ಕಾರಣ ಜಯ್ನೆ ಖಾತೆ ಡಿಲೀಟ್ ಮಾಡಲಾಗಿದೆ. ಇನ್ನು ಫೋಟೋ ಹಂಚಿಕೊಂಡಿರುವ ನಟಿಯ ವಿರುದ್ಧ ಅನೇಕ ಸಾಮಾಜಿಕ ಜಾಲತಾಣಗಳು ಆಕ್ರೋಶವನ್ನ ವ್ಯಕ್ತಪಡಿಸಿದೆ. 20 ವರ್ಷದ ಮಾಡೆಲ್ ಜಯ್ನೆನ ಬ್ಲಾಕ್ ಸಿಂಗಲ್ ಪೀಸ್ ಡ್ರೆಸ್ (Black Dress) ಧರಿಸಿ ತಂದೆಯ ಶವದ ಪೆಟ್ಟಿಗೆಯ ಮುಂದೆ ಕುಳಿತು ಪೋಸ್ ನೀಡಿದ್ದಾಳೆ.
ಫೋಟೋಗಳನ್ನು ಹಂಚಿಕೊಂಡು ತಂದೆಗೆ ವಿದಾಯ ಹೇಳಿದ್ದಾರೆ. ಚಿಟ್ಟೆ (Butterfly) ದೂರ ಹಾರಿದೆ, ನೀವು ನನ್ನ ಬೆಸ್ಟ್ ಫ್ರೆಂಡ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಚೆನ್ನಾಗಿ ಬದುಕಿದ್ರಿ, ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಎಲ್ಲಾ ಫೋಟೋಗಳಲ್ಲೂ ನಗು ನಗುತಾ ಫೋಸ್ ಕೊಟ್ಟಿರುವುದೇ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಫೋಟೋ ನೋಡಿರುವ ನೆಟ್ಟಿಗರು ತಂದೆಯ ಬಗ್ಗೆ ಗೌರವ ಇಲ್ಲವೇ, ಸ್ವಲ್ಪವೂ ಸೂಕ್ಷ್ಮತೆ ಮತ್ತು ಜವಾಬ್ದಾರಿ ಇಲ್ಲದ ಹುಡುಗಿ, ಇದು ಕೆಟ್ಟ ನಡವಳಿಕೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೊಲ್ ಆಗಿರುವ ಕಾರಣ ನಟಿ ಫೋಟೋ ಕೆಲವೇ ಗಂಟೆಯಲ್ಲಿ ಡಿಲೀಟ್ ಮಾಡಿದ್ದಾಳೆ. ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಕ್ಷಮೆ ಕೇಳಬೇಕು, ಕೇಳಬಾರದು ಎಂದು ನಡೆಯುತ್ತಿದ್ದ ಚರ್ಚೆ ನಡುವೆ ಜಯ್ನೆ ಖಾತೆಯನ್ನು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿದೆ. ಸ್ನೇಹಿತರೆ ಈ ನಟಿಯ ಈ ನಡವಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.