Jeevan Pramaan Patra: 60 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ಕೇಂದ್ರದಿಂದ ಹೊಸ ಸೇವೆ ಆರಂಭ, ಆನ್ಲೈನ್ ಮೂಲಕ ಈ ಕೆಲಸ ಮಾಡಿ.

ಜೀವನ ಪ್ರಮಾಣ ಪತ್ರವನ್ನು Online ಅಲ್ಲಿ ಕೂಡ ಸಲ್ಲಿಸಬಹುದಾಗಿದೆ.

Jeevan Pramaan Patra Online Application: ಕೇಂದ್ರ ಸರ್ಕಾರ (Central Government) ವಿವಿಧ ಪಿಂಚಣಿಯ ಯೋಜನೆಯನ್ನು ಪರಿಚಯಿಸಿದೆ. ನಿವೃತ್ತಿಯ ನಂತರದ ಬದುಕನ್ನು ಸುಲಭ ಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಈಗಾಗಲೇ ದೇಶದಲ್ಲಿ ಕೋಟ್ಯಂತರ ಜನರು ವಿವಿಧ ಪಿಂಚಣಿಯ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ಸದ್ಯ ಪಿಂಚಣಿದಾರರು ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುದು ಕಡ್ಡಾಯವಾಗಿದೆ.

Jeevan Praman Patra Online Application
Image Credit: Zee News

ಜೀವನ್ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ
Jeevan Praman Patra ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ ಪ್ರಮಾಣಪತ್ರವಾಗಿದೆ. ಭಾರತದಲ್ಲಿ ಪಿಂಚಣಿದಾರರು ತಮ್ಮ ಪಿಂಚಣಿಯ ಒಳಹರಿವನ್ನು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ತಮ್ಮ ಜೀವನ್ ಪ್ರಮಾಣ ಪತ್ರ ಸಲ್ಲಿಸುದು ಕಡ್ಡಾಯವಾಗಿದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರು ನವೆಂಬರ್ 30 ರೊಳಗೆ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಇದೀಗ ಜೀವನ ಪ್ರಮಾಣ ಪತ್ರವನ್ನು Online ಅಲ್ಲಿ ಕೂಡ ಸಲ್ಲಿಸಬಹುದಾಗಿದೆ.

ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಜೀವನ್ ಪ್ರಮಾಣ ಪತ್ರವನ್ನು ಆನ್ಲೈನ್ ಅಲ್ಲಿ ಸಲ್ಲಿಸಲು ಪಿಂಚಣಿದಾರರು ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ರಚಿಸಬೇಕು. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಜೀವನ್ ಪ್ರಮಾಣ ಪತ್ರ ಕೇಂದ್ರಕ್ಕೆ ಭೇಟಿ ನೀಡಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

*ಆಧಾರ್ ಸಂಖ್ಯೆ

*ಪಿಂಚಣಿ ಪಾವತಿ ಆದೇಶ

Join Nadunudi News WhatsApp Group

*ಬ್ಯಾಂಕ್ ಖಾತೆ ವಿವರ

*ಮೊಬೈಲ್ ಸಂಖ್ಯೆ

Pension Latest Update
Image Credit: Livehindustan

ಜೀವನ್ ಪ್ರಮಾಣ ಪತ್ರಕ್ಕೆ ಅಗತ್ಯವಿರುವ ದಾಖಲೆಗಳು
*ಆಧಾರ್ ಸಂಖ್ಯೆ

*ಬಯೋಮೆಟ್ರಿಕ್ಸ್ ಸ್ಕ್ಯಾನ್

*ಇಂಟರ್ನೆಟ್ ಸಂಪರ್ಕ

*ಪಿಂಚಣಿ ಪಾವತಿ ಆದೇಶ

*ಬ್ಯಾಂಕ್ ವಿವರ

*ಪಿಂಚಣಿ ಮಂಜೂರಾತಿ ಪ್ರಾಧಿಕಾರದ ವಿವರಗಳು

*ಪಿಂಚಣಿ ವಿತರಣಾ ಪ್ರಾಧಿಕಾರದ ವಿವರಗಳು

Join Nadunudi News WhatsApp Group