Jeevan Pramaan Submission Last Date: ಪ್ರತಿ ವರ್ಷದ ಅಂತ್ಯದಲ್ಲಿ ಲಕ್ಷಾಂತರ ಪಿಂಚಣಿದಾರರಿಗೆ ಒಂದೇ ಸಮಸ್ಯೆ, ಅದುವೇ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಮಾಡುವುದು. ಪ್ರತಿ ವರ್ಷದ ಹಾಗೆ ಈ ವರ್ಷ ಕೂಡ ಪಿಂಚಣಿ ಹಣ ಪಡೆದುಕೊಳ್ಳುವ ಎಲ್ಲರಿಗೂ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಪ್ರತಿ ತಿಂಗಳು ಪಿಂಚಣಿ ಹಣ ಪಡೆದುಕೊಳ್ಳುವ ಎಲ್ಲಾ ಹಿರಿಯ ನಾಗರಿಕರು ಮತ್ತೆ ಜೀವನ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನು ಈಗಾಗಲೇ ನಿಗದಿ ಮಾಡಲಾಗಿದ್ದು, ಈ ಬಗ್ಗೆ ನಾವೀಗ ಮಾಹಿತಿಯನ್ನ ತಿಳಿದುಕೊಳ್ಳೋಣ.
ಜೀವನ್ ಪ್ರಮಾಣ ಪತ್ರ ಎಂದರೇನು..?
ಜೀವನ್ ಪ್ರಮಾಣಪತ್ರವು ಕೇಂದ್ರ, ರಾಜ್ಯ ಅಥವಾ ಸರ್ಕಾರಿ ಸಂಸ್ಥೆಗಳಿಂದ ಪಿಂಚಣಿ ಪಡೆಯುವವರಿಗೆ ನೀಡಲಾಗುವ ಒಂದು ಡಿಜಿಟಲ್ ಜೀವಿತ ಪ್ರಮಾಣ ಪತ್ರವಾಗಿದೆ. ಇದು ಪಿಂಚಣಿ ಹಣ ಪಡೆದುಕೊಳ್ಳುವ ವ್ಯಕ್ತಿ ಜೀವಂತವಾಗಿದ್ದಾನೆ ಅನ್ನುವುದಕ್ಕೆ ಒಂದು ಸಾಕ್ಷಿಯಾಗಿದೆ. ಸರ್ಕಾರೀ, ಅರೆ ಸರ್ಕಾರೀ, ರಕ್ಷಣಾ ಪಿಂಚಣಿ, EPS- 95 ,ಬ್ಯಾಂಕ್ ಪಿಂಚಣಿ ಇವೆಲ್ಲದಕ್ಕೂ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಸತ್ತವರ ಹೆಸರಿನ ಪಿಂಚಣಿ ಹಣ ದುರ್ಬಳಕೆ ಆಗದಂತೆ ತಡೆಯಲು ಈ ನಿಯಮವನ್ನು ಜಾರಿಗೆ ತರಲಾಗಿದೆ.
ಆನ್ಲೈನ್ ಮೂಲಕ ಈ ರೀತಿಯಾಗಿ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಮಾಡಿ
* ಮೊದಲು Jeevan Pramaan ಆಪ್ ಅನ್ನು ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
* ವೆಬ್ಸೈಟ್ ಮೂಲಕ ಸಲ್ಲಿಸುವವರು https://jeevanpramaan.gov.in/v1.0/ ಭೇಟಿ ನೀಡಿ.
* ಮೊಬೈಲ್ ಸಂಖ್ಯೆ ಲಿಂಕ್ ಇರುವ ಆಧಾರ್ ನಂಬರ್ ಹಾಕಿ OTP ನಮೂದಿಸಿ.
* ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್ ಮಾಡಿ ಬಯೋಮೆಟ್ರಿಕ್ ಅಪ್ಡೇಟ್ ಮಾಡಿ.
* ನಂತರ ಪಿಂಚಣಿ ಖಾತೆಯ ಸಂಖ್ಯೆಯನ್ನು ನಮೂದಿಸಿ.
* ಇದಾದ ನಂತರ ನಿಮಗೆ SMS ಜೊತೆಗೆ ಡಿಜಿಟಲ್ ಪ್ರಮಾಣ ಪತ್ರದ PDF ಬರುತ್ತದೆ.
Offline ಮೂಲಕ
ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಅಥವಾ ಪೋಸ್ಟ್ ಆಫೀಸ್ ನಲ್ಲೂ ಕೂಡ ಜೀವನ್ ಪ್ರಮಾಣ ಪತ್ರವನ್ನ ಸಲ್ಲಿಕೆ ಮಾಡಬಹುದು.
ಕೊನೆಯ ದಿನಾಂಕ
ನವೆಂಬರ್ 30 ಜೀವನ್ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ ಮತ್ತು ಅವಧಿ ಮೀರಿದರೆ ತೊಂದರೆ ಎದುರಿಸಬೇಕಾಗುತ್ತದೆ. EPFO ಪೋರ್ಟಲ್ ನಲ್ಲಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ನಿಮ್ಮ ಜೀವನ ಪ್ರಮಾಣಪತ್ರ ಸಲ್ಲಿಕೆಯಾಗಿದೆಯಾ ಅನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿ. ಸದ್ಯ ಡಿಜಿಟಲ್ ವ್ಯವಸ್ಥೆ ಬಂದಿರುವ ಕಾರಣ ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕ ಡಿಜಿಟಲ್ ಪ್ರಮಾಣಪತ್ರ ಸಲ್ಲಿಸಬಹುದು.
ಜೀವನ್ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ ಏಕೆ?
ಸಾಕಷ್ಟು ಜನರು ಸರ್ಕಾರದಿಂದ ಬರುವ ಪಿಂಚಣಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ಕಳೆದ ವರ್ಷ ಇದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಕಾರಣಗಳಿಂದ ಪಿಂಚಣಿ ಹಣ ಪಡೆದುಕೊಳ್ಳುವ ಪ್ರತಿಯೊಬ್ಬ ಹಿರಿಯರು ಕೂಡ ಆನ್ಲೈನ್ ಅಥವಾ Offline ನಲ್ಲಿ ಜೀವನ್ ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಸರ್ಕಾರೀ ಯೋಜನೆಯ ದುರುಪಯೋಗ ಕಡಿಮೆಯಾಗಲಿದೆ ಅನ್ನುವುದು ಸರ್ಕಾರ ಅಭಿಪ್ರಾಯವಾಗಿದೆ.
ಸಾಕಷ್ಟು ಜನರು ಸರ್ಕಾರದಿಂದ ಬರುವ ಪಿಂಚಣಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ಕಳೆದ ವರ್ಷ ಇದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಕಾರಣಗಳಿಂದ ಪಿಂಚಣಿ ಹಣ ಪಡೆದುಕೊಳ್ಳುವ ಪ್ರತಿಯೊಬ್ಬ ಹಿರಿಯರು ಕೂಡ ಆನ್ಲೈನ್ ಅಥವಾ Offline ನಲ್ಲಿ ಜೀವನ್ ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಸರ್ಕಾರೀ ಯೋಜನೆಯ ದುರುಪಯೋಗ ಕಡಿಮೆಯಾಗಲಿದೆ ಅನ್ನುವುದು ಸರ್ಕಾರ ಅಭಿಪ್ರಾಯವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

