ಪ್ರತಿ ತಿಂಗಳು ಪಿಂಚಣಿ ಪಡೆಯುವ ಎಲ್ಲರಿಗೂ ಶಾಕಿಂಗ್ ಸುದ್ದಿ, 30 ರ ಒಳಗೆ ಈ ಕೆಲಸ ಮಾಡಿದ್ದರೆ ನಿಲ್ಲಲಿದೆ ಪಿಂಚಣಿ.

ದೇಶದಲ್ಲಿ ಕೋಟ್ಯಾಂತರ ಜನರು ಪಿಂಚಣಿ ಸೇವೆಯನ್ನ ಬಳಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಅದೆಷ್ಟೋ ವೃದ್ದರು, ಅಂಗವಿಕಲರು, ವಿಧವೆಯರು ಮತ್ತು ವಿಕಲಚೇತನರು ಪ್ರತಿ ತಿಂಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಹಲವು ಹೊಸ ನಿಯಮಗಳನ್ನ ಜಾರಿಗೆ ತರಲಾಗಿದ್ದು ಇದು ಜನರ ತಲೆಬಿಸಿಗೆ ಕಾರಣವಾಗುವುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುವ ಎಲ್ಲಾ ಜನರಿಗೆ ಶಾಕಿಂಗ್ ಬಂದಿದ್ದು ಇದೆ ತಿಂಗಳ 30 ರ ಒಳಗಾಗಿ ಈ ಕೆಲಸವನ್ನ ಮಾಡದೆ ಇದ್ದರೆ ನಿಮ್ಮ ಪಿಂಚಣಿ ಹಣ ನಿಲ್ಲುತ್ತದೆ ಎಂದು ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ.

ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುವ ಎಲ್ಲಾ ಜನರು ಅವಶ್ಯಕವಾಗಿ ಇದೆ ತಿಂಗಳ ಅಂತ್ಯದ ಒಳಗಾಗಿ ಈ ಕೆಲಸವನ್ನ ಮಾಡಲೇಬೇಕು ಮತ್ತು ಮಾಡದೆ ಇದ್ದರೆ ಅವರ ಪಿಂಚಣಿ ಹಣವನ್ನ ನಿಲ್ಲಿಸಲಾಗಿದೆ ಎಂದು ಆದೇಶವನ್ನ ಹೊರಡಿಸಲಾಗಿದೆ. ಹಾಗಾದರೆ ಇಂದೇ ತಿಂಗಳ 30 ರ ಒಳಗಾಗಿ ಮಾಡಬೇಕಾದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಈ ವರ್ಷ ಎಲ್ಲಾ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನ ನವೆಂಬರ್ 30 ರೊಳಗೆ ಸಲ್ಲಿಸಬೇಕು, ಇದನ್ನು ಮಾಡದಿದ್ದರೆ ಅವರ ಪಿಂಚಣಿ ನಿಲ್ಲುತ್ತದೆ.

Jeevana Pramanapatra

ಹೌದು ಪಿಂಚಣಿ ಹಣ ಪಡೆಯುವ ಎಲ್ಲಾ ಜನರು ಇದೆ ತಿಂಗಳ 30 ರ ಒಳಗಾಗಿ ಜೀವನ ಪ್ರಮಾಣಪತ್ರವನ್ನ ಸಲ್ಲಿದರೆ ಅವರಿಗೆ ಮುಂದಿನ ತಿಂಗಳಿಂದ ಪಿಂಚಣಿ ಹಣ ಬರುತ್ತದೆ ಮತ್ತು ಮಾಡದೆ ಇದ್ದರೆ ಅವರ ಪಿಂಚಣಿ ಹಣ ನಿಲ್ಲುತ್ತದೆ ಎಂದು ಸರ್ಕಾರ ಆದೇಶವನ್ನ ಹೊರಡಿಸಿದೆ. ಇನ್ನು ಜೀವನ ಪ್ರಮಾಣಪತ್ರವನ್ನ ಸಲ್ಲಿಸದೆ ಇರುವವವರು ಅಧಿಕೃತ ವೆಬ್ಸೈಟ್ ಮೂಲಕ ಕೂಡ ಸಲ್ಲಿಸಬಹುದು ಎಂದು ಸರ್ಕಾರ ಹೇಳಿದೆ. ಇನ್ನು ನೀವು ಸ್ಮಾರ್ಟ್‌ಫೋನ್ ಮೂಲಕ ಇಮೇಲ್ ಐಡಿ ಮತ್ತು ಅಪ್ಲಿಕೇಶನ್‌ನಲ್ಲಿ ತಿಳಿಸಲಾದ ವಿಧಾನಗಳ ಮೂಲಕ ಮನೆಯಲ್ಲಿ ಕುಳಿತು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.

ಇನ್ನು 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮನೆ ಬಾಗಿಲಿನ ಬ್ಯಾಂಕಿಂಗ್ ಮೈತ್ರಿ ಅಥವಾ ಅಂಚೆ ಇಲಾಖೆಯ ಮನೆ ಬಾಗಿಲಿನ ಸೇವೆಯನ್ನ ಬಳಸಿಕೊಂಡು ಪಿಂಚಣಿದಾರರು ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಬಹುದು ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ತಿಳಿಸಿದೆ. ಇನ್ನು ಹಿರಿಯ ನಾಗರಿಕರು ತಮ್ಮ ಪ್ರದೇಶದ ಹತ್ತಿರದ ಅಂಚೆ ಕಚೇರಿಯಿಂದ ಸಾಮಾನ್ಯ ಸೇವಾ ಕೇಂದ್ರದಿಂದ (ಸಿಎಸಿ) ಜೀವನ್ ಪ್ರಮಾಣ ಸೇವೆಯನ್ನು ಸುಲಭವಾಗಿ ಪಡೆಯಬಹುದು ಎಂದು ಇಂಡಿಯಾ ಪೋಸ್ಟ್ ಟ್ವೀಟ್ ಮೂಲಕ ತಿಳಿಸಿದೆ. ಸ್ನೇಹಿತರೆ ಈ ಮಾಹಿತಿಯನ್ನ ಪಿಂಚಣಿ ಪಡೆದುಕೊಳ್ಳುತ್ತಿರುವ ಎಲ್ಲಾ ಜನರಿಗೆ ತಲುಪಿಸಿ.

Join Nadunudi News WhatsApp Group

Jeevana Pramanapatra

Join Nadunudi News WhatsApp Group