Jio Plan: 336 ದಿನಗಳ ಕಾಲ ನಿಯಮಿತ ಕರೆ, ಡೇಟಾ ಮತ್ತು SMS, Jio ಗ್ರಾಹಕರಿಗೆ ಇನ್ನೊಂದು ರಿಚಾರ್ಜ್ ಪ್ಲ್ಯಾನ್.
ಜಿಯೋ ಬಳಕೆದಾರರಿಗೆ ಆಕರ್ಷಕ ರಿಚಾರ್ಜ್ ಪ್ಲಾನ್, 336 ದಿನಗಳ ಕಾಲ ಅನಿಯಮಿತ ಸೇವೆ.
Jio Recharge Plan: ಭಾರತೀಯ ಟೆಲಿಕಾಂ ಜಗತ್ತಿನ ಪ್ರಸಿದ್ಧ ಕಂಪನಿ ರಿಲಯನ್ಸ್ Reliance Jio ಅತೀ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ ಎನ್ನಬಹುದು. Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ.
ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ. Jio ಇತ್ತೀಚಿಗೆ ವಿಭಿನ್ನ ರಿಚಾರ್ಜ್ ಪ್ಲ್ಯಾನ್ ಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ ಎನ್ನಬಹುದು. ಸದ್ಯ Jio ಬಳಕೆದಾರರಿಗೆ ಲಭ್ಯವಿರುವ ಮೂರು ಉತ್ತಮ ಪ್ಲ್ಯಾನ್ ಗಳ ವಿವರ ಇಲ್ಲಿದೆ. ನೀವು ಜಿಯೋ ಬಳಕೆದಾರರಾದರೆ ಈ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಸದ್ಯ JIo ತನ್ನ ಗ್ರಾಹಕರಿಗೆ 336 ದಿನಗಳ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ.
ಜಿಯೋ 155 ರಿಚಾರ್ಜ್ ಪ್ಲ್ಯಾನ್
ಜಿಯೋ ಇದೀಗ ಕೇವಲ 155 ರೂ.ಗಳಲ್ಲಿ ಗ್ರಾಹಕರಿಗೆ ಮಾಸಿಕ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡಲು ಮುಂದಾಗಿದೆ. ನೀವು 155 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿಕೊಂಡರೆ 28 ದಿನಗಳ ಮಾನ್ಯತೆಯನ್ನ ಪಡೆಯಬಹುದು. ಉಚಿತ ಕರೆಯ ಜೊತೆಗೆ 300 SMS ಗಳ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಈ ರಿಚಾರ್ಜ್ ಪ್ಲಾನ್ ಕಡಿಮೆ ಇಂಟೆರ್ ನೆಟ್ ಬಳಕೆದಾರರಿಗೆ ಉತ್ತಮ ಯೋಜನೆ ಎನ್ನಬಹುದು. ಏಕೆಂದರೆ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ನೀವು ಕೇವಲ 2GB ಡೇಟಾವನ್ನು ಪಡೆಯುತ್ತೀರಿ.
ಜಿಯೋ 395 ರೂ. ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ರೂ. 395 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಒಟ್ಟಾಗಿ 6GB ಡೇಟಾ ಜೊತೆಗೆ 1000 SMS ಗಳ ಪ್ರಯೋಜನವನ್ನು ಪಡೆಯಬಹುದು. ಇನ್ನು ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಳ್ಳುವ ಮೂಲಕ ಬಳಕೆದಾರರು ಅನಿಯಮಿತ 5G ನೆಟ್ವರ್ಕ್ ಸೌಲಭ್ಯವನ್ನು ಪಡೆಯಬಹುದು.
ಜಿಯೋ 1559 ರೂ. ರಿಚಾರ್ಜ್ ಪ್ಲ್ಯಾನ್
ಜಿಯೋ ಗ್ರಾಹಕರು ಪ್ರತಿನಿತ್ಯ 4.21 ರೂ. ಖರ್ಚು ಮಾಡುವ ಮೂಲಕ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪಡೆಯಬಹುದು. ಈ ಯೋಜನೆಯು ನಿಮಗೆ ಅನಿಯಮಿತ ಕರೆಯ ಜೊತೆಗೆ 3600 SMS ಸೌಲಭ್ಯವನ್ನು ನೀಡಲಿದೆ.
ಈ ಯೋಜನೆಯು ಕಡಿಮೆ ಡೇಟಾ ಬಳಕೆದಾರರಿಗೆ ಸಹಾಯವಾಗಲಿದೆ. ಈ ಯೋಜನೆಯಲ್ಲಿ ನಿಮಗೆ 24GB ಡೇಟಾ ಲಭ್ಯವಾಗಲಿದೆ. ಡೇಟಾ ಖಾಲಿಯಾದ ಬಳಿಕ 64Kbps ವೇಗದ ಮಿತಿಯ ಡೇಟಾವನ್ನು ಪಡೆಯಬಹುದು. ಈ ಯೋಜನೆಯ ಮೂಲಕ ಬಳಕೆದಾರರು ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.