Jio 365 Days: Jio ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲಾನ್,365 ದಿನ ಅನಿಯಮಿತ 5G ಡೇಟಾ ಮತ್ತು ಉಚಿತ OTT.

365 ದಿನ ಉಚಿತ OTT ನೀಡುವ ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ Jio.

Jio 3662 Rs Recharge Plan For 365 Days: Reliance Jio ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. Airtel , Vi ಹೇಗೆ ಇನ್ನಿತರ ಟೆಲಿಕಾಮ್ Network ಗಳಿಗೆ ಹೋಲಿಸಿದರೆ Jio ಬಳಕೆದಾರರು ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪಡೆಯುತ್ತಿದ್ದಾರೆ.

Jio ತನ್ನ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಜಿಯೋ 5G ಸೇವೆಯೊಂದಿಗೆ ಗ್ರಾಹಕರಿಗೆ ಅಗ್ಗದ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಘೋಷಿಸುತ್ತಿವೆ.

New recharge plan for Jio users
Image Credit: Kannadanews

Jio ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲ್ಯಾನ್
ಜಿಯೋ ತನ್ನ ಪೂರ್ಣ ಪ್ಯಾಕೇಜ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಕಂಪನಿಯು ವಿವಿಧ ಯೋಜನೆಗಳ ಜೊತೆಗೆ ಉಚಿತ ಕರೆ, ಡೇಟಾ ಎಸ್ ಎಂಎಸ್ ಸೌಲಭ್ಯವನ್ನು ನೀಡುತ್ತದೆ. ಜಿಯೋ ತನ್ನ ಬಳಕೆದಾರರ ಅನುಕೂಲಕ್ಕಾಗಿ 149 ರಿಂದ 3,662 ರೂ. ವರೆಗೆ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಇದೀಗ ಜಿಯೋ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ಜಿಯೋ ಬಳಕೆದಾರರಿಗೆ ತಿಂಗಳ ರಿಚಾರ್ಜ್ ಪ್ಲ್ಯಾನ್ ನ ಚಿಂತೆಯನ್ನು ತಪ್ಪಿಸಲು ಇದೀಗ ಜಿಯೋ ವಾರ್ಷಿಕ ಯೋಜನೆ ಬಿಡುಗಡೆಗೊಳಿಸಿದೆ.

ಜಿಯೋದಲ್ಲಿ ಇದೀಗ 3,662 ರಿಚಾರ್ಜ್ ಪ್ಲ್ಯಾನ್ ಲಭ್ಯ
ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪ್ರಯೋಜನವನ್ನು ಈ 3662 ಪ್ಲ್ಯಾನ್ ನಲ್ಲಿ ಪಡೆಯಬಹುದಾಗಿದೆ. ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 912.5GB ಡೇಟಾವನ್ನು ನೀಡುತ್ತಿದೆ. ಈ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ನಲ್ಲಿ Jio Cinema, Jio Security , Jio Cloud , Sony LIV, Zee5 ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

jio new recharge plans
Image Credit: Timesofindia.indiatimes

ಇಂದೊಂದು ಸುದೀರ್ಘ ಬಾಳಿಕೆಯ ಯೋಜನೆಯಾಗಿದ್ದು, ನೀವೇ ಯಾವುದೇ ನೆಟ್ವರ್ಕ್ ನ ಜೊತೆಗೆ ಉಚಿತವಾಗಿ ಅನಿಯಮಿತ ಕರೆಯ ಅನುಭವವನ್ನು ಪಡೆಯಬಹುದು. ಅನೇಕ OTT Platform ಗಳಿಗೆ ಉಚಿತ ಚಂದಾದಾರಿಕೆ ಪಡೆಯುವುದರ ಜೊತೆಗೆ 5G ನೆಟ್ವರ್ಕ್ ಬಳಸುವವರು ಅನಿಯಮಿತ 5G ಪಡೆಯಬಹುದು. ಹೆಚ್ಚಿನ ಡೇಟಾ ಬಳಸುವವರಿಗೆ ಈ ಯೋಜನೆ ಬೆಸ್ಟ್ ಎನ್ನಬಹುದು. ಈ ಯೋಜನೆಯನ್ನು ನೀವು ಸಕ್ರಿಯಗೊಳಿಸಿಕೊಂಡು ಮಾಸಿಕ ರಿಚಾರ್ಜ್ ನ ಚಿಂತೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group