Jio 499 Recharge: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್, ಹೊಸ ರಿಚಾರ್ಜ್ ಸೇವೆಯಲ್ಲಿ ಉಚಿತ ವೈಫೈ ಮತ್ತು ಹಲವು ಸೇವೆಗಳು.
Jio 49 Recharge Plan Benefits: ಜಿಯೋ ಕಂಪನಿ (Jio) ತನ್ನ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಇದರಿಂದ ಬಳಕೆದಾರರು ರಿಚಾರ್ಜ್ ಪ್ಲ್ಯಾನ್ ಇಂದಾಗಿ ಸಮಾಧಾನದಿಂದ ಇದ್ದಾರೆ ಎನ್ನಬಹುದು. ಇದೀಗ ಜಿಯೋ ಕಂಪನಿಯಿಂದ ಹೊಸ ರಿಚಾರ್ಜ್ ಪ್ಲ್ಯಾನ್ ಒಂದು ಬಿಡುಗಡೆಯಾಗಿದೆ.
ಜಿಯೋ ಹೊಸ ರಿಚಾರ್ಜ್ ಪ್ಲ್ಯಾನ್
ಜಿಯೋ ಫೈಬರ್ ನ ಹಲವು ರಿಚಾರ್ಜ್ ಯೋಜನೆಗಳು ನಿಮಗೆ ಸಾಕಷ್ಟು ಇಷ್ಟವಾಗಬಹುದು. ಮತ್ತು ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಾಗು ಬಜೆಟ್ ಗೆ ಅನುಗುಣವಾಗಿ ಅವುಗಳನ್ನು ಬಳಸಬಹುದು. ಕಡಿಮೆ ಬಜೆಟ್ ಶ್ರೇಣಿಯ ಹೊರತಾಗಿಯೂ ಜನರಿಗೆ ಹಲವಾರು ಆಯ್ಕೆಗಳು ಈ ಯೋಜನೆಯಲ್ಲಿ ಸಿಗುತ್ತದೆ.
ಈ ರಿಚಾರ್ಜ್ ಯೋಜನೆಯಲ್ಲಿನ ಪ್ರಯೋಜನಗಳು ಸಾಕಷ್ಟಿವೆ ಮತ್ತು ಅವುಗಳ ವೆಚ್ಚವು ಕೂಡ ತುಂಬಾ ಕಡಿಮೆಯಾಗಿದೆ. ಈ ರಿಚಾರ್ಜ್ ಯೋಜನೆ ತುಂಬಾ ವಿಶೇಷವಾಗಿದೆ ಎನ್ನಬಹುದು.
ಈ ರಿಚಾರ್ಜ್ ನ ಪ್ರಯೋಜನಗಳು
ಈ ರಿಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಮೊದಲನೆಯದಾಗಿ ಈ ಯೋಜನೆಯ ಮಾನ್ಯತೆ ಕುರಿತು ಹೇಳುವುದಾದರೆ, ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ 30 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ.
ಈ ಮಾನ್ಯತೆಯಿಂದಾಗಿ ನೀವು ಇಡೀ ತಿಂಗಳು ಇಂಟೆರ್ನೆಟ್ ಅನ್ನು ಸುಲಭವಾಗಿ ಬಳಸಬಹುದು. ರಿಚಾರ್ಜ್ ಯೋಜನೆಯಲ್ಲಿ ನೀವು 30 mbps ಇಂಟೆರ್ನೆಟ್ ವೇಗವನ್ನು ಪಡೆಯುತ್ತೀರಿ. ಇದು ಅಪ್ಲೋಡ್ ಮಾಡಲು 30 mbps ಮತ್ತು ಡೌನ್ಲೋಡ್ ಮಾಡಲು 30 mbps ಆಗಿರುತ್ತದೆ.
499 ರೂಪಾಯಿಯ ಜಿಯೋ ರಿಚಾರ್ಜ್ ಯೋಜನೆ
ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಇಂಟರ್ನೆಟ್ ಅನ್ನು ಪಡೆಯುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ನೀವು ಅಡಚಣೆಯಿಲ್ಲದೆ ಇಂಟರ್ನೆಟ್ ಅನ್ನು ಬಳಸುವ ಆನಂದವನ್ನು ಪಡೆಯುವಿರಿ.
ಈ ರೀಚಾರ್ಜ್ ಯೋಜನೆಯಲ್ಲಿ ಉಚಿತ ಅನಿಯಮಿತ ಧ್ವನಿ ಕರೆ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀವು ಕಾಣಬಹುದು. ಅನಿಯಮಿತ ಧ್ವನಿ ಕರೆಯಿಂದಾಗಿ ಬಳಕೆದಾರರಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಎಷ್ಟು ಬೇಕಾದರೂ ಮಾತನಾಡಬಹುದು. ಈ ರಿಚಾರ್ಜ್ ನ ಬೆಲೆ 499 ರೂಪಾಯಿ ಆಗಿದೆ.