Jio: ಜಿಯೋ ಸಿಮ್ ಬಳಸುತ್ತಿರುವ ಎಲ್ಲಾ ಭಾರತೀಯರಿಗೆ ಸಿಹಿಸುದ್ದಿ ಕೊಟ್ಟ ಅಂಬಾನಿ 2023 ಕ್ಕೆ ಬಂಪರ್ ಕೊಡುಗೆ

ಸದ್ಯ ಭಾರತದಲ್ಲಿ ಅಲ್ಟ್ರಾ ಹೈಸ್ಪೀಡ್ ಇಂಟರ್ನೆಟ್‌ನ ಹೊಸ ಯುಗ ಪ್ರಾರಂಭವಾಗಿದ್ದು ಪ್ರಧಾನಿ ಮೋದಿ  5G ಸೇವೆಯನ್ನು ಪ್ರಾರಂಭಿಸಿದ್ದಾರೆ. ಹೌದು 5ಜಿ ಸೇವೆಗೆ ಚಾಲನೆ ನೀಡಿದ ಈ ಸಂದರ್ಭದಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿದ್ದು ಟೆಲಿಕಾಂ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ.

ಈ ಹಿಂದೆ ಟೆಲಿಕಾಂ ವಲಯದಲ್ಲಿ ಅನುಮೋದನೆಗೆ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿದ್ದು ಈಗ ಅದು ಕೇವಲ 7 ದಿನಗಳಿಗೆ ಇಳಿದಿದೆ ಎಂದು ಅವರು ಹೇಳಿದರು. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ನ ಪರಿಣಾಮ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಗೋಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಟೆಲಿಕಾಂ ಕ್ಷೇತ್ರದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.

ಸದ್ಯ ಡಿಸೆಂಬರ್ 2023ರ ವೇಳೆಗೆ ದೇಶದ ಎಲ್ಲ ಭಾಗಗಳಿಗೂ ಕೂಡ ಅಲ್ಟ್ರಾ ಹೈಸ್ಪೀಡ್ ಇಂಟರ್‌ನೆಟ್‌ನ  JIO 5ಜಿ ಸೇವೆ ಒದಗಿಸುವುದಾಗಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೊ ಮುಖ್ಯಸ್ಥ  ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದು 2016ರಲ್ಲಿ ಟೆಲಿಕಾಂ ವಲಯಕ್ಕೆ ಪ್ರವೇಶಿಸಿದ ಜಿಯೊ ಕಂಪನು ಉಚಿತ ಧ್ವನಿ ಕರೆ ಹಾಗೂ ಕಡಿಮೆ ಬೆಲೆಯಲ್ಲಿ ಡೇಟಾ ಒದಗಿಸುವ ಮೂಲಕ ಹೊಸ ಸ್ಪರ್ಧೆ ಆರಂಭಿಸಿತ್ತು. ಸದ್ಯ ಇದೀಗ ಕೈಗೆಟುಕುವ ಬೆಲೆಯಲ್ಲಿ 5ಜಿ ಸೇವೆ ನೀಡುವುದಾಗಿ ಅಂಬಾನಿ ಹೇಳಿದ್ದು ದೇಶದ ಎಲ್ಲ ನಗರಗಳು ಪಟ್ಟಣಗಳು ತಾಲ್ಲೂಕು ಕೇಂದ್ರಗಳು ತಹಸೀಲ್‌ಗಳಿಗೆ 5ಜಿ ಸೇವೆ ಒದಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತೇನೆ ಎಂದು ಭಾರತ ಮೊಬೈಲ್ ಕಾಂಗ್ರೆಸ್(ಐಎಂಸಿ) ಸಮ್ಮೇಳನದಲ್ಲಿ ಮುಕೇಶ್  ರವರು ಹೇಳಿದ್ದಾರೆ.

jio 5g in 2023
Image Credit: India.com

ಇನ್ನು ದೀಪಾವಳಿ ವೇಳೆಗೆ ದೇಶದ 4 ಮೆಟ್ರೊ ನಗರಗಳಾದ ದೆಹಲಿ ಮುಂಬೈ ಚೆನ್ನೈ ಮತ್ತು ಕೋಲ್ಕತ್ತಗಳಲ್ಲಿ 5ಜಿ ಸೇವೆ ಆರಂಭಿಸುವುದಾಗಿ ಕಳೆದ ಆಗಸ್ಟ್‌ನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್‌ನ ಷೇರುದಾರರ ಸಭೆಯಲ್ಲಿ ಭರವಸೆ ನೀಡಿದ್ದು  ಇನ್ನು ಜಿಯೋನ 5ಜಿ ಸೇವೆಗೆ ಸಂಬಂಧಿಸಿದ ಬಹುತೇಕ ಉಪಕರಣಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೌದು ಆದ್ದರಿಂದ ಅವುಗಳು ಆತ್ಮನಿರ್ಭರ್ ಭಾರತ್ ಸ್ಟ್ಯಾಂಪ್ ಅನ್ನು ಹೊಂದಿವೆ ಎಂದು ಅವರು ಹೇಳಿದ್ದು5ಜಿ ಸೇವೆಯು ಭಾರತೀಯರಿಗೆ ಕೈಗೆಟುಕುವ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಯ ಸೇವೆಯನ್ನು ಒದಗಿಸುತ್ತದೆ ಎಂದಿದ್ದಾರೆ.ಇನ್ನು ಅಸ್ತಿತ್ವದಲ್ಲಿರುವ ಆಸ್ಪತ್ರೆಗಳನ್ನು ಹೆಚ್ಚುವರಿ ಹೂಡಿಕೆಯಿಲ್ಲದೆ ಸ್ಮಾರ್ಟ್ ಆಸ್ಪತ್ರೆಗಳಾಗಿ ಪರಿವರ್ತಿಸುವ ಮೂಲಕ ಗ್ರಾಮೀಣ ಹಾಗೂ ದೂರದ ಪ್ರದೇಶಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸಬಹುದಾಗಿದ್ದು

Join Nadunudi News WhatsApp Group

ದೇಶದ ಯಾವುದೇ ಭಾಗಕ್ಕೆ ಅತ್ಯುತ್ತಮ ವೈದ್ಯರ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡುತ್ತದೆ ಹಾಗೂ ರೋಗನಿರ್ಣಯದ ವೇಗ ಹಾಗೂ ನಿಖರತೆಯನ್ನು ಸುಧಾರಿಸುತ್ತದೆ ಎಂದು ಹೇಳಿದರು. ಕೃಷಿ ಸೇವೆಗಳು ವ್ಯಾಪಾರ ಉದ್ಯಮ ಅನೌಪಚಾರಿಕ ವಲಯ ಸಾರಿಗೆ ಹಾಗೂ ಇಂಧನ ಮೂಲಸೌಕರ್ಯಗಳ ಡಿಜಿಟಲೀಕರಣ ಹಾಗೂ ಡೇಟಾ ನಿರ್ವಹಣೆಯನ್ನು ವೇಗಗೊಳಿಸುವ ಮೂಲಕ 5ಜಿ ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

Join Nadunudi News WhatsApp Group