Jio India: 84 ದಿನಗಳ ಕಡಿಮೆ ಬೆಲೆಯ ಮನಿ ರಿಕವರಿ ಪ್ಲ್ಯಾನ್ ಘೋಷಣೆ ಮಾಡಿದ Jio, ಅನಿಯಮಿತ ಡೇಟಾ ಮತ್ತು ಕರೆ.
ಕಡಿಮೆ ಬೆಲೆಯ 84 ದಿನಗಳ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಜಿಯೋ.
Jio New Recharge Plan: ದೇಶದಲ್ಲಿ ಅತೀ ಗ್ರಾಹಕರನ್ನ ಹೊಂದಿರುವ ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ (Jio) ಕೂಡ ಒಂದು ಎಂದು ಹೇಳಬಹುದು. ಹೌದು ಉಚಿತ ಡೇಟಾ ಮತ್ತು ಕರೆಗಳನ್ನ ನೀಡುವುದಾರ ಮೂಲಕ ದೇಶದಲ್ಲಿ ಸಂಚಲನವನ್ನ ಮೂಡಿಸಿದ್ದ ಜಿಯೋ ತನ್ನ ಗ್ರಾಹಕರಿಗೆ ಸಾಕಷ್ಟು ಸೇವೆಗಳನ್ನ ಒದಗಿಸಿಕೊಂಡು ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಸದ್ಯ ಅನೇಕ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೈಡ್ ಯೋಜನೆಯನ್ನ ಜಾರಿಗೆ ತಂದಿರುವ ಜಿಯೋ ಈಗ ಇನ್ನೊಂದು ಮನಿ ರಿಕವರಿ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಜನರು 84 ದಿನಗಳ ಕಾಲ ಉಚಿತ ಕರೆ ಮತ್ತು ಡೇಟಾ ಬಳಸಬಹುದಾಗಿದೆ.
ಗ್ರಾಹಕರಿಗೆ ಸಾಕಷ್ಟು ಯೋಜನೆ ಪರಿಚಯಿಸಿದ ಜಿಯೋ
ಜಿಯೋ ಈಗಾಗಲೇ ತನ್ನ ಗ್ರಾಹಕರಿಗೆ ಸಾಕಷ್ಟು ಯೋಜನೆಯನ್ನ ಪರಿಚಯಿಸಿದೆ. ಒಂದು ತಿಂಗಳು, ಎರಡು ತಿಂಗಳು, 15 ದಿನಗಳು ಸೇರಿದಂತೆ ಒಂದು ವರ್ಷದ ರಿಚಾರ್ಜ್ ಸೇವೆಯನ್ನ ಕೂಡ ಪರಿಚಯಿಸಿರುವ ಜಿಯೋ ಈಗ 84 ದಿನಗಳ ಇನ್ನೊಂದು ಲಾಭದಾಯಕ ಯೋಜನೆಯನ್ನ ಪರಿಚಯಿಸುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುವ ಕೆಲಸವನ್ನ ಮಾಡಿದೆ. ಗ್ರಾಹಕರು ಈ ಯೋಜನೆಯಲ್ಲಿ 84 ದಿನಗಳ ಕಾಲ ಉಚಿತ ಕರೆ ಮತ್ತು ಡೇಟಾ ಬಳಸಬಹುದು.
84 ದಿನಗಳ ಮನಿ ರಿಕವರಿ ಯೋಜನೆ ಪರಿಚಯಿಸಿದ ಜಿಯೋ
ಜಿಯೋ ತನ್ನ ಗ್ರಹಕರಿಗೆ 84 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು ಈ ರಿಚಾರ್ಜ್ ಯೋಜನೆಯ ಅಡಿಯಲ್ಲಿ ಗ್ರಾಹಕರು ಪ್ರತಿನಿತ್ಯ 2GB ಇಂಟರ್ನೆಟ್ ಸೇವೆಯನ್ನ ಬಳಸಬಹುದು. ಈ ಯೋಜನೆ ಮೂರೂ ತಿಂಗಳ ಮಾನ್ಯತೆಯನ್ನ ಹೊಂದಿದ್ದು ಜನರು ಮೂರೂ ತಿಂಗಳುಗಳ ಕಾಲ ಉಚಿತ ಕರೆ, SMS ಮತ್ತು ಡೇಟಾ ಬಳಸಬಹುದು ಎಂದು ಕಂಪನಿ ಹೇಳಿದೆ.
719 ರೂ ರಿಚಾರ್ಜ್ ನಲ್ಲಿ ಸಿಗಲಿದೆ 2GB ಡೇಟಾ
ಜಿಯೋ ಗ್ರಾಹಕರು 719 ರೂ ರಿಚಾರ್ಜ್ ಮಾಡಿಕೊಂಡರೆ ಅವರು 84 ದಿನಗಳ ಪ್ರತಿನಿತ್ಯ 2GB ಇಂಟರ್ನೆಟ್ ನಂತೆ ಒಟ್ಟಾರೆಯಾಗಿ 168GB ಉಚಿತ ಇಂಟರ್ನೆಟ್ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯಲ್ಲಿ ಜನರು ಉಚಿತ ಕರೆ ಮತ್ತು ಪ್ರತಿನಿತ್ಯ 100 SMS ಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಮತ್ತು ಜಿಯೋ ಸೆಕ್ಯೂರಿಟಿ ಯೋಜನೆಗಳು ಇದರಲ್ಲಿ ಉಚಿತವಾಗಿ ಸಿಗಲಿದೆ.
299 ರೂಪಾಯಿ ರಿಚಾರ್ಜ್ ಯೋಜನೆ
ಜಿಯೋ ಗ್ರಾಹಕರು 299 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ಪ್ರತಿನಿತ್ಯ 2GB ಇಂಟರ್ನೆಟ್ ಜೊತೆಗೆ ಉಚಿತ ಕೆರೆ ಬಳಸಬಹುದು. ಈ ರಿಚಾರ್ಜ್ ಅಡಿಯಲ್ಲಿ 56 GB ಡೇಟಾ ಜೊತೆಗೆ ಉಚಿತ SMS ಮತ್ತು ಕರೆ ಸೇವೆಯನ್ನ ಗ್ರಾಹಕರು ಬಳಸಿಕೊಳ್ಳಬಹುದು. ಈ ಯೋಜನೆಯಲ್ಲಿ ಕೂಡ ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಸೆಕ್ಯೂರಿಟಿ ಮತ್ತು ಜಿಯೋ ಟಿವಿ ಉಚಿತವಾಗಿ ಸಿಗಲಿದೆ.