Jio 4G Phone: ದಸರಾ ಹಬ್ಬಕ್ಕೆ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟ ಅಂಬಾನಿ, ಅಗ್ಗದ ಬೆಲೆಗೆ ಇನ್ನೊಂದು 4G ಫೋನ್ ಲಾಂಚ್.
ಮತ್ತೊಂದು ಅತ್ಯಾಕರ್ಷಕ ಜಿಯೋ ಫೋನ್ ಪರಿಚಯಿಸಿದ ಜಿಯೋ ರಿಲಯನ್ಸ್.
Jio Bharat B1 4G Phone: ಸಧ್ಯ ದೇಶದಲ್ಲಿ ಜಿಯೋ (Jio) ಇದೀಗ 5G ನೆಟ್ ವರ್ಕ್ ನೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ದೇಶದಲ್ಲಿ ಜಿಯೋ ಪ್ರಮುಖ ಟೆಲಿಕಾಂ ಕಂಪನಿಯಾಗಿದೆ. Jio Reliance ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ. ಇನ್ನು ಈಗಾಗಲೇ ಜಿಯೋ ಫೋನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇದೀಗಾ ಜಿಯೋ ರಿಲಯನ್ಸ್ ಮತ್ತೊಂದು ಅತ್ಯಾಕರ್ಷಕ ಜಿಯೋ ಫೋನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇಂಟೆರ್ ನೆಟ್ ಬಳಸದೆ ಇರುವವರು ಈ ಹೊಸ ಜಿಯೋ ಫೋನ್ ನ ಪ್ರಯೋನವನ್ನು ಪಡೆಯಬಹುದು. ದಸರಾ ಹಬಕ್ಕೆ ಅಂಬಾನಿ ಹೊಸ ಫೋನ್ ಅನ್ನು ಅಗ್ಗದ ಬೆಲೆಗೆ ಪರಿಚಯಿಸಿದ್ದಾರೆ. ಸದ್ಯ Jio Reliance ಪರಿಚಯಿಸಿರುವ 4G ಫೋನ್ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಯಲ್ಲಿ ಲಭ್ಯವಿದೆ ಎನ್ನುವ ಬಗ್ಗೆ ವಿವರ ತಿಳಿಯೋಣ.
ದಸರಾ ಹಬ್ಬಕ್ಕೆ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟ ಅಂಬಾನಿ
ಇದೀಗ ಮಾರುಕಟ್ಟೆಯಲ್ಲಿ Jio Bharat Phone ಅನ್ನು ಬಿಡುಗಡೆಗೊಳಿಸಿದ ಬಳಿಕ ಅಂಬಾನಿ ಮತ್ತೆ ಇನ್ನೊಂದು 4G ಮೊಬೈಲ್ ಆನು ಪರಿಚಯಿಸಿದ್ದಾರೆ. Jio Reliance ನೂತನ ಫೋನ್ ನ ಹೆಸರು Jio Bharat B1 ಫೋನ್ ಆಗಿದೆ. ಈ ಫೀಚರ್ ಫೋನ್ ಅನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರತ್ಯೇಕ ಸರಣಿಯ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಜಿಯೋ ಅಪ್ಲಿಕೇಶನ್ ಗಳನ್ನು ಸಹ Jio Bharat B1 ಫೋನ್ ನಲ್ಲಿ ಸಕ್ರಿಯಗೊಳಿಸಿಕೊಳ್ಳಬಹುದು.
Jio Bharat B1 4G ಫೋನ್ ನ ಮಾರುಕಟ್ಟೆ ಬೆಲೆ ಎಷ್ಟಿದೆ..?
Jio Bharat B1 4G ಫೋನ್ 1,299 ರೂ. ಗಳಲ್ಲಿ ಕಂಪನಿಯು ಪರಿಚಯಿಸಿದೆ. ನೀವು ಈ ಹ್ಯಾಂಡ್ಸೆಟ್ ಅನ್ನು Jio ನ ಅಧಿಕೃತ ವೆಬ್ಸೈಟ್ ಅಥವಾ Amazon ನಿಂದ ಖರೀದಿಸಬಹುದು. ಇದನ್ನು ಕಪ್ಪು ಬಣ್ಣದ ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಈ 4G ಫೋನ್ ನಲ್ಲಿ 2.4 ಇಂಚಿನ QVGA ಡಿಸ್ಪ್ಲೇ ನೀಡಲಾಗಿದೆ. ಇದು ಥ್ರೆಡ್ X RTos ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು 0.05 GB RAM ಅನ್ನು ಹೊಂದಿದೆ, ಇದರಲ್ಲಿ ನ್ಯಾನೋ ಸಿಮ್ ಸಹ ಇರುತ್ತದೆ.
Jio Bharat B1 4G ಫೋನ್ ನ ವಿಶೇಷತೆಗಳು
Jio Bharat B1 4G ಫೋನ್ ನಲ್ಲಿ ಬ್ಲೂಟೂತ್, ವೈ-ಫೈ ಮತ್ತು USB ಪೋರ್ಟ್ ನ ಬೆಂಬಲವನ್ನು ನೀಡಲಾಗಿದೆ. ಹಾಗೆಯೆ ಮೈಕ್ರೊ SD ಕಾರ್ಡ್ ಮೂಲಕ 128GB ಸಂಗ್ರಹಣೆಗೆ ವಿಸ್ತರಿಸಬಹುದು. ಇನ್ನು 2000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಹಾಗೆಯೆ 343 ಗಂಟೆಗಳ ವರೆಗೆ ಸ್ಟ್ಯಾಂಡ್ ಬೈ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಉತ್ತಮ ಛಾಯಾಗ್ರಹಣಕ್ಕಾಗಿ ಹಿಂಬದಿಯ ಕ್ಯಾಮೆರಾವನ್ನು ಒದಗಿಸಲಾಗಿದೆ. ಈ ಫೀಚರ್ ಫೋನ್ 23 ಭಾಷೆಗಳನ್ನು ಬೆಂಬಲಿಸುತ್ತದೆ. ಇದರೊಂದಿಗೆ, ನೀವು ಈ ಫೋನ್ನಲ್ಲಿ ಚಲನಚಿತ್ರಗಳು, ಟಿವಿ ಸರಣಿಗಳು, ಕ್ರೀಡೆಗಳು ಮತ್ತು ಸಂಗೀತವನ್ನು ಸಹ ಆನಂದಿಸಬಹುದು. ಇದಕ್ಕಿಂತ ಹೆಚ್ಚಾಗಿ JioCinema ಮತ್ತು JioSaavn , JioPay ಅನ್ನು ಬಳಸುವುದರ ಜೊತೆಗೆ ಇದರ ಮೂಲಕ UPI ಪಾವತಿಗಳನ್ನು ಸಹ ಮಾಡಬಹುದು.