Jio Book: 999 ರೂ ಮೊಬೈಲ್ ಬೆನ್ನಲ್ಲೇ ಅಗ್ಗದ ಬೆಲೆ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ Jio, ದಾಖಲೆಯ ಬುಕಿಂಗ್.
ಗ್ರಾಹಕರಿಗಾಗಿ ಕಡಿಮೆ ಬೆಲೆಗೆ Jio Book ಲ್ಯಾಪ್ ಟಾಪ್ ಅನ್ನು ಈಗ ಜಿಯೋ ಬಿಡುಗಡೆ ಮಾಡಿದೆ.
Jio Book Laptop: ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ (Jio) ತನ್ನ ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಜಿಯೋ ಕಂಪನಿ ಪದೇ ಪದೇ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ಟೆಲಿಕಾಂ ವಲಯದಲ್ಲಿ ಹಾಗು ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದೆ.
ಜಿಯೋ ಬುಕ್ ಲ್ಯಾಪ್ ಟಾಪ್
ಇನ್ನು ಕಳೆದ ಅಕ್ಟೊಬರ್ ನಲ್ಲಿ ಜಿಯೋ ಸಂಸ್ಥೆಯು ಜಿಯೋ ಬುಕ್ ಹೆಸರಿನ ಮೊದಲ ಲ್ಯಾಪ್ ಟಾಪ್ ಅನ್ನು ಭಾರತದಲ್ಲಿ ಘೋಷಿಸಲಾಯಿತು. ಇದೀಗ ಮತ್ತೆ ಅದೇ ಹಾದಿಯಲ್ಲಿ ಸಂಚಲನ ಮೂಡಿಸಲು ಜಿಯೋ ಸಿದ್ಧತೆ ಮಾಡಿಕೊಂಡಿದೆ.
ಈ ಜಿಯೋ ಬುಕ್ ಲ್ಯಾಪ್ ಟಾಪ್ 20,000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಜಿಯೋ ಸಂಸ್ಥೆಯು ಈಗ ಮತ್ತೆ ಭಾರತದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ಲ್ಯಾಪ್ ಟಾಪ್ ನ ನೂತನ ರಿಫ್ರೆಶ್ ಆವೃತ್ತಿ ಅನ್ನು ಪ್ರಾರಂಭಿಸಲು ಸಕಲ ತಯಾರಿ ನಡೆಸಿದೆ ಎಂದು ವರದಿ ತಿಳಿಸಿದೆ.
ಜಿಯೋ ಬುಕ್ ಲ್ಯಾಪ್ ಟಾಪ್ ನ ವಿಶೇಷತೆ
ರಿಲಯನ್ಸ್ ದೇಶಿಯ ಮಾರುಕಟ್ಟೆಯಲ್ಲಿ ಈ ತಿಂಗಳ ಅಂತ್ಯದಲ್ಲಿ ಆಲ್ ನ್ಯೂ ಜಿಯೊಬುಕ್ ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಹುತೇಕ ಜುಲೈ 31 ರಂದು ನೂತನ ಜಿಯೊಬುಕ್ ಲ್ಯಾಪ್ ಟಾಪ್ ಎಂಟ್ರಿ ಆಗುವ ನಿರೀಕ್ಷೆಗಳಿವೆ. ಇನ್ನು ಸಂಸ್ಥೆಯು ಭಾರತದಲ್ಲಿ ಅಧಿಕೃತ ಲಾಂಚ್ ಮಾಡುವ ಮುಂಚಿತವಾಗಿ ಅಮೆಜಾನ್ ನಲ್ಲಿ ಲ್ಯಾಪ್ ಟಾಪ್ ನ ಕೆಲವು ಫೀಚರ್ಸ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.
ಇನ್ನು ಈ ಹೊಸ ಲ್ಯಾಪ್ ಟಾಪ್ ಎಲ್ಲಾ ವಯಸ್ಸಿನವರಿಗೆ, ಉತ್ಪಾದಕತೆ, ಮನೋರಂಜನೆ ಮತ್ತು ಪ್ಲೆ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ಲ್ಯಾಪ್ ಟಾಪ್ ಪ್ರಯಾಣದಲ್ಲಿರುವಾಗ 4G ಕನೆಕ್ಟಿವಿಟಿ ಒದಗಿಸುತ್ತದೆ. ಈ ಲ್ಯಾಪ್ ಟಾಪ್ 11 .6 ಇಂಚಿನ ಹೆಚ್ ಡಿ ಡಿಸ್ ಪ್ಲೇಯನ್ನು ಅನ್ನು ಹೊಂದಿದೆ. ಈ ಲ್ಯಾಪ್ ಟಾಪ್ ವಿಶಾಲವಾದ ಮಾದರಿಯ ಬೆಜೆಲ್ ಗಳನ್ನೂ ಪಡೆದಿದೆ.
ಈ ಲ್ಯಾಪ್ ಟಾಪ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ 665 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡುತ್ತದೆ. ಇದರೊಂದಿಗೆ ಈ ಲ್ಯಾಪ್ ಟಾಪ್ ಅಡ್ರಿನೊ 610 GPU ನ ಬೆಂಬಲ ಸಹ ಒಳಗೊಂಡಿದೆ. ಹಾಗೆಯೇ ಜಿಯೋ ಬುಕ್ ಗ್ರಾಹಕ ಸ್ನೇಹಿ ಬೆಲೆಯನ್ನು ಹೊಂದಿದೆ. ಈ ಲ್ಯಾಪ್ ಟಾಪ್ 2GB RAM ಮತ್ತು 32 GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.