Jio Add On: ಸದ್ದಿಲ್ಲದೆ ಒಂದು ವರ್ಷದ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಜಿಯೋ, ಅನಿಯಮಿತ ಕರೆ ಮತ್ತು 5G ಡೇಟಾ.

ಜಿಯೋ ಬಳಕೆದಾರರಿಗೆ ಹೊಸ ವಾರ್ಷಿಕ Data Add-on Pack ಯೋಜನೆ.

Jio Data Add-on Pack: Reliance Jio ತನ್ನ ಬಳಕೆದಾರರಿಗೆ ಹೊಸ ಹೊಸ Recharge Plan ಗಳನ್ನೂ ಪರಿಚಯಿಸುತ್ತಿದೆ. Jio ಇತ್ತೀಚಿಗೆ BSNL ಗಿಂತಲೂ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸುತ್ತಿದೆ ಎನ್ನಬಹುದು. ಇನ್ನು Jio ತನ್ನ ಗ್ರಾಹಕರಿಗಾಗಿ 15 ರೂ. ಒಂದು ದಿನದ ರಿಚಾರ್ಜ್ ಪ್ಲ್ಯಾನ್ ಸೇರಿದಂತೆ 3000 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ವಾರ್ಷಿಕ ಪ್ಲ್ಯಾನ್  ಅನ್ನು ಕೂಡ ಪರಿಚಯಿಸಿದೆ.

ಅನಿಯಮಿತ ಕರೆ, ಡೇಟಾ ,SMS ಜೊತೆಗೆ Jio ಅಪ್ಲಿಕೇಶನ್ ಸೇರಿದಂತೆ ಇನ್ನಿತರ OTT ಪ್ಲಾಟ್ ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುವ ಸಾಕಷ್ಟು ಯೋಜನೆಗಳು ಜಿಯೋ ಬಳಕೆದಾರರಿಗೆ ಲಭ್ಯವಿದೆ. ಇದೀಗ ಜಿಯೋ ಬಳಕೆದಾರರಿಗೆ ಹೊಸ ವಾರ್ಷಿಕ Data Add-on Pack ಯೋಜನೆಯನ್ನು ಪರಿಚಯಿಸಿದ್ದು, ಬಳಕೆದಾರರು ಸಂಪೂರ್ಣ 365 ದಿನಗಳವರೆಗೆ ಉಚಿತವಾಗಿ ಯೋಜನೆಯ ಲಾಭವನ್ನು ಪಡೆಯಬಹುದು.

jio data add-on pack
Image Credit: Postsen

Jio ಬಳಕೆದಾರರಿಗೆ Data Add-on Pack
ಜಿಯೋ ತನ್ನ ಗ್ರಾಹಕರಿಗಾಗಿ 2,878 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ಜಿಯೋ ಗ್ರಾಹಕರು ರೂ. 2,878 ರಿಚಾರ್ಜ್ ಮಾಡಿದರೆ 365 ದಿನಗಳ ಮಾನ್ಯತೆಯ ಜೊತೆಗೆ ಅನ್ಲಿಮಿಟೆಡ್ ಕರೆಯ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 2GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಜಿಯೋ 2879 ರೂ. ಯೋಜನೆಯಲ್ಲಿ ಗ್ರಾಹಕರು ಒಟ್ಟಾಗಿ 730GB ಡೇಟಾವನ್ನು ಪಡೆಯಬಹುದಾಗಿದೆ. ನೀವು 365 ದಿನಗಳವರೆಗೆ ಉಚಿತವಾಗಿ ಎಲ್ಲ ಸೇವೆಯನ್ನು ಪಡೆಯಬಹುದು. ಆದರೆ ಈ ಯೋಜನೆಯಲ್ಲಿ ನೀವು 5G ಸೇವೆ ಲಭ್ಯವಿದ್ದರೂ ಕೂಡ ಇನ್ನು ಬಳಸಲು ಸಾದ್ಯವಾಗವುದಿಲ್ಲ. ಇದಕ್ಕಾಗಿ 239 ಅಥವಾ ಇನ್ನಿತರ ಯೋಜನೆನ್ನು ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಮಾಸಿಕ ರಿಚಾರ್ಜ್ ಪ್ಲ್ಯಾನ್ ಗಿಂತ ಈ ವಾರ್ಷಿಕ ಪ್ಲಾನ್ ನಿಮ್ಮ ಹಣವನ್ನು ಸಾಕಷ್ಟು ಉಳಿಸಲಿದೆ ಎನ್ನಬಹುದು.

io New Recharge Plan
Image Credit: Business-standard

Jio ಬಳಕೆದಾರರಿಗೆ 2545 ರೂ. ರಿಚಾರ್ಜ್ ಪ್ಲ್ಯಾನ್
ಜಿಯೋ ತನ್ನ ಗ್ರಾಹಕರಿಗಾಗಿ 2545 ರೂ. ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದೆ. ಜಿಯೋ ಗ್ರಾಹಕರು ರೂ. 2545 ರಿಚಾರ್ಜ್ ಮಾಡಿದರೆ 365 ದಿನಗಳ ಮಾನ್ಯತೆಯ ಜೊತೆಗೆ ಅನ್ಲಿಮಿಟೆಡ್ ಕರೆಯ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 1 .5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group