ದೇಶದಲ್ಲಿ ಬಹುತೇಕ ಎಲ್ಲಾ ಜನರು ಉಪಯೋಗಿಸುವ ಸಿಮ್ ಅಂದರೆ ಅದೂ ಜಿಯೋ ಸಿಮ್ ಎಂದು ಹೇಳಬಹುದು. ಹೌದು ಉಚಿತವಾಗಿ ಇಂಟರ್ನೆಟ್ ಸೇವೆಯನ್ನ ನೀಡುವುದರ ಮೂಲಕ ದೇಶದಲ್ಲಿ ದೊಡ್ಡ ಸಂಚಲನವನ್ನ ದೃಷ್ಟಿ ಮಾಡಿದ ಜಿಯೋ ಮೊದಲಿನಿಂದಲೂ ತನ್ನ ಗ್ರಾಹಕರಿಗೆ ಉಚಿತವಾಗಿ ಇಂಟರ್ನೆಟ್ ಸೇವೆಯೆನ್ನ ನೀಡುತ್ತಾ ಬಂದಿದೆ ಎಂದು ಹೇಳಬಹುದು. ಇನ್ನು ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಸೇವೆಯನ್ನ ನೀಡುವುದರ ಮೂಲಕ ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ನೀಡುತ್ತಿದ್ದ ಜಿಯೋ ಈಗ ಜನರಿಗೆ ಇನ್ನೊಂದು ಹೊಸ ಸೇವೆಯನ್ನ ಒದಗಿಸಿದ್ದು ಸದ್ಯ ಜಿಯೋ ಗ್ರಾಹಕರು ಬಂಪರ್ ಕೊಡುಗೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಹೌದು ಜನರಿಗೆ ಉಚಿತವಾಗಿ 5GB ಇಂಟರ್ನೆಟ್ ಸೇವೆಯನ್ನ ನೀಡಲು ಈಗ ಜಿಯೋ ಮುಂದಾಗಿದ್ದು ಜನರು ಈ ಪ್ಲ್ಯಾನ್ ಗೆ ಫಿದಾ ಆಗಿದ್ದಾರೆ ಎಂದು ಹೇಳಬಹುದು.
ಹಾಗಾದರೆ ಉಚಿತವಾಗಿ 5GB ಇಂಟರ್ನೆಟ್ ಸೇವೆಯನ್ನ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಇಂದಿನ ಸಮಯದಲ್ಲಿ, ಎಲ್ಲಾ ಕಂಪನಿಗಳು ತನ್ನ ಬಳಕೆದಾರರಿಗೆ ಗರಿಷ್ಠ ಲಾಭವನ್ನು ನೀಡುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ರಿಲಯನ್ಸ್ ಜಿಯೋ ಕೂಡ ಅಂತಹ ಒಂದು ಖಾಸಗಿ ಟೆಲಿಕಾಂ ಕಂಪನಿಯಾಗಿದ್ದು ಇದು ಅತ್ಯಂತ ಕಡಿಮೆ ಸಮಯದಲ್ಲಿ ಜನರ ನಂಬಿಕೆಯನ್ನು ಗೆದ್ದಿದೆ ಮತ್ತು ದೇಶದ ನಂಬರ್ ಒನ್ ಕಂಪನಿಯಾಗಿದೆ.
ಹೌದು ಸ್ನೇಹಿತರೆ ಜಿಯೋ ಎಮರ್ಜೆನ್ಸಿ ಡೇಟಾ ಪ್ಲಾನ್ ಅನ್ನುವ ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆಯ ಸಹಾಯದಿಂದ ನೀವು ಯಾವುದೇ ಹಣವಿಲ್ಲದೆ ತಕ್ಷಣವೇ ಡೇಟಾವನ್ನು ರೀಚಾರ್ಜ್ ಮಾಡಬಹುದು. ಇನ್ನು ಈ ಯೋಜನೆಯ ಅಡಿಯಲ್ಲಿ ನೀವು ರಿಚಾರ್ಜ್ ಮಾಡಲು ಯಾವುದೇ ಹಣವನ್ನ ಖರ್ಚು ಮಾಡುವ ಅವಶ್ಯಕತೆ ಇಲ್ಲ ಮತ್ತು ನೀವು Jio ನ ಅಪ್ಲಿಕೇಶನ್‌ಗೆ ಹೋಗಿ ಈ ತುರ್ತು ಯೋಜನೆಯನ್ನು ಸಕ್ರಿಯಗೊಳಿಸಬಹುದು ಮತ್ತು ಯಾವುದೇ ಹಣವನ್ನು ಪಾವತಿಸದೆ ನೀವು ಇಂಟರ್ನೆಟ್ ಅನ್ನು ಪಡೆಯಬಹುದು ಮತ್ತು ನಂತರ ನೀವು ಅದರ ಹಣವನ್ನು ಪಾವತಿಸಬಹುದು. ಇನ್ನು ನೀವು ಜಿಯೋ ಅಪ್ಲಿಕೇಶನ್ ನಲ್ಲಿ ತುರ್ತು ಡೇಟಾ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ ನೀವು 1GB ಡೇಟಾವನ್ನು ಪಡೆಯಬಹುದು.
ಆ ಸಮಯದಲ್ಲಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಮತ್ತು ನೀವು ನಂತರ ಕೆಲವು ಸಮಯದ ನಂತರ ಹಣವನ್ನ ಪಾವತಿ ಮಾಡಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ ನೀವು 11 ರೂಪಾಯಿಗೆ 1GB ಡೇಟಾವನ್ನು ಪಡೆಯುವಿರಿ ಮತ್ತು ನಿಮಗೆ 5GB ಇಂಟರ್ನೆಟ್ ಬೇಕಾದರೆ ನೀವು Jio ನ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನೀವು ಈ ತುರ್ತು ಡೇಟಾ ಯೋಜನೆಯನ್ನು ಒಟ್ಟು ಐದು ಬಾರಿ ಸಕ್ರಿಯಗೊಳಿಸಬಹುದು ಮತ್ತು 55 ರೂಪಾಯಿಗೆ 5GB ಇಂಟರ್ನೆಟ್ ಅನ್ನು ಪಡೆಯುವಿರಿ ಮತ್ತು ನೀವು ಅದನ್ನು ಯಾವಾಗ ಬೇಕಾದರೂ ಪಾವತಿಸಬಹುದು.
ಇನ್ನು ಜಿಯೋ ತನ್ನ ಗ್ರಾಹಕರಿಗೆ ಈ ಯೋಜನೆಗೆ ಹಣ ಪಾವತಿಗಾಗಿ ಯಾವುದೇ ಮಿತಿಯನ್ನು ನಿರ್ಧರಿಸಿಲ್ಲ. ರಿಮೈಂಡರ್ ಸಂದೇಶಗಳನ್ನು ಕಂಪನಿಯು ಖಂಡಿತವಾಗಿಯೂ ಕಳುಹಿಸುತ್ತದೆ ಆದರೆ ಯಾವುದೇ ನಿಗದಿತ ಸಮಯದ ಮಿತಿಯನ್ನು ಅದರಲ್ಲಿ ನೀಡಲಾಗುವುದಿಲ್ಲ. ನೀವು ಬಯಸಿದಾಗ ಈ ಯೋಜನೆಯಲ್ಲಿ ಬಳಸಿದ ಇಂಟರ್ನೆಟ್‌ಗೆ ಹಣವನ್ನು ಪಾವತಿಸಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಜಿಯೋ ಗ್ರಾಹಕನಿಗೆ ತಲುಪಿಸಿ.