Jio: ಒಂದು ಕುಟುಂಬಕ್ಕೆ ಒಂದು ರಿಚಾರ್ಜ್, Jio ಗ್ರಾಹಕರಿಗೆ ಹೊಸ ರಿಚಾರ್ಜ್ ಬಿಡುಗಡೆ ಮಾಡಿದ ಅಂಬಾನಿ.
ಜಿಯೋ ಫ್ಯಾಮಿಲಿ ಪ್ಲಾನ್ ಯೋಜನೆ ಬಿಡುಗಡೆ ಮಾಡಿದ ಅಂಬಾನಿ.
Jio Family Recharge Plan: ಜನಪ್ರಿಯ ಟೆಲಿಕಾಂ ಸಂಸ್ಥೆಯಾಗಿರುವ ಜಿಯೋ (Jio) ತನ್ನ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಜಿಯೋ ಬಳಕೆದಾರರು ಹೆಚ್ಚಿನ ಅನುಕೂಲವನ್ನು ಪಡೆಯಬಹುದಾಗಿದೆ.
ಇನ್ನು ಜಿಯೋ ತನ್ನ ಬಳಕೆದಾರರಿಗಾಗಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಯೋಜನೆಯನ್ನು ಅತಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಜಿಯೋದಲ್ಲಿ 150 ರೂ. ಗಿಂತಲುಕದಿಮೆ ಬೆಲೆಯಲ್ಲಿ ಮಾಸಿಕ ಪ್ಲಾನ್ ಅನ್ನು ಪಡೆಯಬಹುದು.
ಇನ್ನು ಜಿಯೋ ರಿಲಯನ್ಸ್ ವಿವಿಧ ಕುಟುಂಬ ಯೋಜನೆಗಳನ್ನು ಕೂಡ ಪರಿಚಯಿಸಿದೆ. ಕುಟುಂಬದ ಸದಸ್ಯರು ಹೆಚ್ಚಾಗಿ ಒಂದೇ ಯೋಜನೆಯನ್ನು ಬಳಸಲು ಇಷ್ಟಪಡುತ್ತಾರೆ. ಇದೀಗ ಜಿಯೋ ಫ್ಯಾಮಿಲಿಗಾಗಿ ಅದ್ಬುತ ಯೋಜನೆಯನ್ನು ಬಿಡುಗಡೆ ಮಾಡಿದೆ.
ಒಂದೇ ಯೋಜನೆಯಲ್ಲಿ ಕುಟುಂಬದ ಸದಸ್ಯರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಹೊಸ ಜಿಯೋ ಒಂದೇ ಫ್ಯಾಮಿಲಿ ಪ್ಲಾನ್ ಯೋಜನೆಯಲ್ಲಿ ನಾಲ್ಕು ಸಿಮ್ ಗಳನ್ನು ಬಳಸಬಹುದು.
ಜಿಯೋ ಫ್ಯಾಮಿಲಿ ಪ್ಲಾನ್ ಯೋಜನೆ
*ಜಿಯೋ 399 ಕುಟುಂಬ ಯೋಜನೆಯಲ್ಲಿ ಬಳಕೆದಾರರು ಒಂದು ಸಿಮ್ ಕಾರ್ಡ್ ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಯೋಜನೆಯು ಆಡ್- ಆನ್ ಸಿಮ್ ಗಳಿಲ್ಲ. ಮಾಸಿಕ 399 ರೂ. ಪಾವತಿಸುವ ಮೂಲಕ 75GB ಡೇಟಾ, ಅನಿಯಮಿತ ಕರೆ ಹಾಗೂ 5G ಡೇಟಾವನ್ನು ಪಡೆಯಬಹುದು.
*ಜಿಯೋ 498 ಕುಟುಂಬ ಯೋಜನೆಯಲ್ಲಿ ಬಳಕೆದಾರರು ಒಂದು ಪ್ರಾಥಮಿಕ ಸಿಮ್ ಕಾರ್ಡ್ ಮತ್ತು ಒಂದು ಆಡ್- ಒನ್ ಸಿಮ್ ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಾಸಿಕ 498 ರೂ. ಪಾವತಿಸುವ ಮೂಲಕ ಎರಡು ಸಿಮ್ ಕಾರ್ಡ್ ಗಳನ್ನೂ ಬಳಸಬಹುದು. ತಿಂಗಳಿಗೆ 80GB ಡೇಟಾ, ಅನಿಯಮಿತ ಕರೆ ಹಾಗೂ 5G ಡೇಟಾವನ್ನು ಪಡೆಯಬಹುದು.
*ಜಿಯೋ 597 ಕುಟುಂಬ ಯೋಜನೆಯಲ್ಲಿ ಬಳಕೆದಾರರು ಒಂದು ಪ್ರಾಥಮಿಕ ಸಿಮ್ ಕಾರ್ಡ್ ಮತ್ತು ಎರಡು ಆಡ್- ಒನ್ ಸಿಮ್ ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಾಸಿಕ 597 ರೂ. ಪಾವತಿಸುವ ಮೂಲಕ ಮೂರು ಸಿಮ್ ಕಾರ್ಡ್ ಗಳನ್ನೂ ಬಳಸಬಹುದು. ತಿಂಗಳಿಗೆ 85GB ಡೇಟಾ, ಅನಿಯಮಿತ ಕರೆ ಹಾಗೂ 5G ಡೇಟಾವನ್ನು ಪಡೆಯಬಹುದು.
*ಜಿಯೋ 696 ಕುಟುಂಬ ಯೋಜನೆಯಲ್ಲಿ ಬಳಕೆದಾರರು ಒಂದು ಪ್ರಾಥಮಿಕ ಸಿಮ್ ಕಾರ್ಡ್ ಮತ್ತು ಎರಡು ಆಡ್- ಒನ್ ಸಿಮ್ ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಾಸಿಕ 696 ರೂ. ಪಾವತಿಸುವ ಮೂಲಕ ಮೂರು ಸಿಮ್ ಕಾರ್ಡ್ ಗಳನ್ನೂ ಬಳಸಬಹುದು. ತಿಂಗಳಿಗೆ 90GB ಡೇಟಾ, ಅನಿಯಮಿತ ಕರೆ ಹಾಗೂ 5G ಡೇಟಾವನ್ನು ಪಡೆಯಬಹುದು.