Jio Happy New year Offer Complete Details: ಭಾರತದ ಪ್ರಮುಖ ಟೆಲಿಕಾಂ ಕಂಪನಿಯಲ್ಲಿ ಒಂದಾಗಿರುವ ಜಿಯೋ ಇದೀಗ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಮೂರೂ ಹೊಸ ರಿಚಾರ್ಜ್ ಜೊತೆಗೆ ಆಫರ್ ಗಳನ್ನ ಬಿಡುಗಡೆ ಮಾಡಿದೆ. ಈ ಮೂರೂ ಹೊಸ ರಿಚಾರ್ಜ್ ಯೋಜನೆಯಲ್ಲಿ ಜಿಯೋ ಗ್ರಾಹಕರು ಅನ್ಲಿಮಿಟೆಡ್ 5G ಡೇಟಾ, ಅನಿಯಮಿತ ಕರೆಗಳು ಹಾಗೆ ಮನೋರಂಜನಾ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ಜಿಯೋ ಹ್ಯಾಪಿ ನ್ಯೂ ಇಯರ್ ರಿಚಾರ್ಜ್ ಯೋಜನೆ ಯಾವುದು..? ಹಾಗೆ ನ್ಯೂ ಇಯರ್ ರಿಚಾರ್ಜ್ ಯೋಜನೆಯಲ್ಲಿ ಯಾವೆಲ್ಲ ಸೌಲಭ್ಯವನ್ನು ಪಡೆದುಕೊಳ್ಳಬಹುದು..? ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್
2026 ರ ಹೊಸ ವರ್ಷಕ್ಕೆ ಜಿಯೋ ತನ್ನ ಗ್ರಾಹಕರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಇದೀಗ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ವಾರ್ಷಿಕ, ಮಾಸಿಕ ಮತ್ತು ಫ್ಲೆಕ್ಸಿ ಯೋಜನೆಗಳನ್ನೂ ಬಿಡುಗಡೆ ಮಾಡಿದೆ. ಈ ಹೊಸ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಹೆಚ್ಚಿನ ಡೇಟಾ ಸೌಲಭ್ಯ, OTT ಪ್ರವೇಶ ಹಾಗೆ AI ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಯೋ ಸಿಮ್ ಬಳಕೆ ಮಾಡುವ ಪ್ರತಿಯೊಬ್ಬರೂ ಕೂಡ ಈ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.
1) ಜಿಯೋ ನ್ಯೂ ಇಯರ್ ವಾರ್ಷಿಕ ಯೋಜನೆ
ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ 3,599 ರೂಪಾಯಿಯ ವಾರ್ಷಿಕ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
* 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ
* ಪ್ರತಿದಿನ 2.5 GB ಡೇಟಾ
* ಅನಿಯಮಿತ ಕರೆ ಸೌಲಭ್ಯ
* ಪ್ರತಿ ದಿನ 100 SMS ಉಚಿತ
* ಅನಿಯಮಿತ 5G ಡೇಟಾ ಸೌಲಭ್ಯ
* ಇದೆಲ್ಲದರ ಜೊತೆಗೆ 18 ತಿಂಗಳ ಉಚಿತ ಗೂಗಲ್ ಜೆಮಿನಿ ಪ್ರೊ Subscription ಲಭ್ಯವಿದೆ. (ಜಿಯೋ ನೀಡಿದ ಮಾಹಿತಿ ಪ್ರಕಾರ, ಇದು ಸುಮಾರು 35,100 ರೂಪಾಯಿ ಮೌಲ್ಯದ್ದಾಗಿದೆ.) 18 ವರ್ಷ ಮೇಲ್ಪಟ್ಟವರು ಮಾತ್ರ ಈ ಸೇವೆ ಬಳಸಿಕೊಳ್ಳಬಹುದು.
2) ತಿಂಗಳ ರಿಚಾರ್ಜ್ ಯೋಜನೆ
ಕಡಿಮೆ ಅವಧಿಯ ಯೋಜನೆಗಳನ್ನು ಬಯಸುವ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ 500 ರೂಪಾಯಿಯ ಒಂದು ತಿಂಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ.
* 28 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ
* ಪ್ರತಿದಿನ 2 GB ಡೇಟಾ
* ಅನಿಯಮಿತ ಕರೆ ಸೌಲಭ್ಯ
* ಪ್ರತಿ ದಿನ 100 SMS ಉಚಿತ
* ಅನಿಯಮಿತ 5G ಡೇಟಾ ಸೌಲಭ್ಯ
* 18 ತಿಂಗಳ ಉಚಿತ ಗೂಗಲ್ ಜೆಮಿನಿ ಪ್ರೊ Subscription ಲಭ್ಯವಿದೆ.
* ಇದೆಲ್ಲದರ ಜೊತೆಗೆ YouTube Premium, JioHotstar, Amazon Prime Video Mobile Edition, Sony Liv, Zee5, Lionsgate Play, Planet Marathi, Chaupal, FanCode ಸೇರಿದಂತೆ 13 ಕ್ಕೂ ಅಧಿಕ OTT ಪ್ಲ್ಯಾಟ್ ಫಾರ್ಮ್ ಗಳಿಗೆ ಉಚಿತ ಪ್ರವೇಶವನ್ನು ನೀಡಲಾಗಿದೆ.
3) ಮನರಂಜನೆಗಾಗಿ ಫ್ಲೆಕ್ಸಿ ಪ್ಯಾಕ್
ಗ್ರಾಹಕರ ಬೇಡಿಕೆಯ ಮೇರೆಗೆ ಈ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. 103 ರೂಪಾಯಿಯ ಈ ಫ್ಲೆಕ್ಸಿ ಪ್ಯಾಕ್ 28 ದಿನಗಳ ಮಾನ್ಯತೆಯೊಂದಿಗೆ 5GB ಡಾಟಾವನ್ನು ಪಡೆದುಕೊಂಡಿದೆ. ಇದರಲ್ಲಿ 3 ಆಯ್ಕೆಗಳಿವೆ, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
* ಹಿಂದಿ ಪ್ಯಾಕ್ – JioHotstar, ZEE5, Sony LIV
* ಅಂತಾರಾಷ್ಟ್ರೀಯ ಪ್ಯಾಕ್ – JioHotstar, Fancode, Lionsgate Play, Discovery+
* ಪ್ರಾದೇಶಿಕ ಪ್ಯಾಕ್ – JioHotstar
https://play.google.com/store/apps/details?id=com.jio.myjio&hl=en_IN ಅಥವಾ ಜಿಯೋ ಅಧಿಕೃತ ವೆಬ್ ಸೈಟ್ (https://www.jio.com/) ಗೆ ಭೇಟಿ ನೀಡುವ ಮೂಲಕ ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. 18 ವರ್ಷ ಮೇಲ್ಪಟ್ಟ ಗ್ರಾಹಕರು ಮಾತ್ರ ಈ ಗೂಗಲ್ ಜೆಮಿನಿ ಯೋಜನೆಗೆ ಅರ್ಹರಾಗಿರುತ್ತಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

