Jio: ಜಿಯೋ ಗ್ರಾಹಕರಿಗೆ ಸ್ವಾತಂತ್ರ್ಯ ದಿನದ ಕೊಡುಗೆ, ಎಷ್ಟೇ ಬಳಸಿದರು ಮುಗಿಯದ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಹೊಸ ರಿಚಾರ್ಜ್ ಅನ್ನು ಈಗ Jio ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ.
Jio Independence Day Offer 2023: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಪ್ರಭಾವ ಬೀರಿದ್ದವು. ಇವುಗಳ ಜೊತೆಗೆ ಜಿಯೋ ಟೆಲಿಕಾಂ ಕಂಪನಿ ಭಾರಿ ಪ್ರಯೋಜನಗಳನ್ನು ನೀಡುವ ಮೂಲಕ ದಿನದಿಂದ ದಿನಕ್ಕೆ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದ್ದೆ.
ಇನ್ನೇನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಬರಲಿದೆ, ಇದರ ಅಂಗವಾಗಿ ಜಿಯೋ ಟೆಲಿಕಾಂ (Jio Telecom)ಕಂಪನಿಯ ನೀಡುವ ಸ್ವಾತಂತ್ರ್ಯ ದಿನದ ಕೊಡುಗೆ ಏನು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಜಿಯೋ ಕಂಪನಿಯ ಹೊಸ ರಿಚಾರ್ಜ್ ಪ್ಲಾನ್
ಇದೀಗ ಜಿಯೋ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. 365 ದಿನಗಳ ಮಾನ್ಯತೆ ಅಂದರೆ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಇದೀಗ ಘೋಷಣೆ ಮಾಡಿದೆ. ಜಿಯೋ ಪ್ರಸ್ತುತ ಎರಡು ಪ್ರಿಪೇಯ್ಡ್ ಪ್ಲಾನ್ ಗಳನ್ನೂ ಧೀರ್ಘ ಕಾಲದ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಧೀರ್ಘವದಿಯ ಯೋಜನೆ ಇದೀಗ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಆಫರ್ ನೊಂದಿಗೆ ಗ್ರಾಹಕರ ಕೈ ಸೇರಲಿದೆ. ಇದು ಜಿಯೋ ಚಂದಾದಾರರಿಗೆ ಅನಿಯಮಿತ ಕರೆ, ಡೇಟಾ ಸೌಲಭ್ಯ ಗಳ ಜೊತೆಗೆ ಇನ್ನು ಕೆಲವು ಪ್ರಯೋಜನಗಳನ್ನು ನೀಡಲಿದೆ.
ವಾರ್ಷಿಕ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ ಜಿಯೋ
ಪ್ರಸ್ತುತ ಜಿಯೋ 2999 ರೂಪಾಯಿಗಳ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಿದೆ. ಬಳಕೆದಾರರಿಗೆ ಅನಿಯಮಿತ ಕಾಲ್, 100 SMS, 2 .5 GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಒಟ್ಟಾರೆಯಾಗಿ 912 .5GB ಡೇಟಾವನ್ನು ಪಡೆದುಕೊಳ್ಳುತ್ತಾರೆ.
ಜಿಯೋ ಗ್ರಾಹಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಕೊಡುಗೆಗಳು
*ಯಾತ್ರ ಟ್ರಾವೆಲ್ ಏಜೆನ್ಸಿ ಮೂಲಕ ವಿಮಾನ ಟಿಕೆಟ್ ಬುಕಿಂಗ್ ಮೇಲೆ 1500 ರೂಪಾಯಿಗಳ ರಿಯಾಯಿತಿಯನ್ನ ಪಡೆದುಕೊಳ್ಳಬಹುದು.
*ಭಾರತದಲ್ಲಿ ಎಲ್ಲಿಯಾದರೂ ಹೋಟೆಲ್ ಬುಕ್ ಮಾಡಿದರೆ ನಿಮಗೆ 4000 ತನಕ ಡಿಸ್ಕೌಂಟ್ ಸಿಗುತ್ತದೆ.
*ಆಜಿಯೋ ಸೈಟ್ ಗಳ ಮೂಲಕ ಆರ್ಡರ್ ಮಾಡಿದ ಮಾಡಿದ ವಸ್ತುಗಳ ಮೇಲೆ 200 ರೂ. ಗಳ ರಿಯಾಯಿತಿ ಪಡೆಯಬಹುದು. ಹಾಗೆ ಈ ಆಫರ್ 900 ರೂ. ಗಳ ಮೇಲೆ ಇರುವ ಪ್ರಾಡಕ್ಟ್ ಗಳಿಗೆ ಮಾತ್ರ ಲಭ್ಯವಾಗುತ್ತದೆ.
*ಆನ್ಲೈನ್ ಔಷಧ ಮಾರಾಟ ಪ್ಲಾಟ್ ಫಾರ್ಮ್ ಆದ ನೆಟ್ ಮೇಡ್ಸ್ ಮೂಲಕ ಯಾವುದೇ ಔಷಧಿಯನ್ನ ಖರೀದಿಸಿದರೆ 20 % ರಿಯಾಯಿತಿಯನ್ನ ಕೊಡಲಾಗುತ್ತದೆ.
*ರಿಲಯನ್ಸ್ ಡಿಜಿಟಲ್ ನಲ್ಲಿ ಆಡಿಯೋ ಪ್ರಾಡಕ್ಟ್ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್ ನೀಡಲಾಗುತ್ತದೆ. ಹಾಗೆ ಗೃಹ ಉಪಯೋಗಿ ವಸ್ತುಗಳ ಮೇಲೆ 10 % ರಿಯಾಯಿತಿಯನ್ನ ಈ ರಿಚಾರ್ಜ್ ಪ್ಲಾನ್ ಮೂಲಕ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ನಿಮ್ಮ ಮಾಸಿಕ ರಿಚಾರ್ಜ್ ವೆಚ್ಚವನ್ನು ನೀವು ಕಡಿಮೆ ಮಾಡಲು ಬಯಸಿದರೆ ಈ ಯೋಜನೆಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದು ದೊಡ್ಡ ಮೊತ್ತವಾದರೂ ಸಹ ಜಿಯೋ ತನ್ನ ಗ್ರಾಹಕರಿಗೆ ಅದಕ್ಕೆ ತಕಂತ ಸೌಲಭ್ಯವನ್ನ ಒದಗಿಸಿದೆ.