Jio 5G Plan: ಜಿಯೋ ಗ್ರಾಹಕರಿಗಾಗಿ ಭರ್ಜರಿ ರಿಚಾರ್ಜ್ ಪ್ಲಾನ್, 5G ಡೇಟಾ ಪ್ಲಾನ್ ಅಗ್ಗದ ಬೆಲೆಗೆ.
5G ಡೇಟಾ ಪ್ಲಾನ್ ಅಗ್ಗದ ಬೆಲೆಗೆ , ಏನೆಲ್ಲಾ ಪ್ರಯೋಜನಗಳಿವೆ...?
Jio New 5G Plan Details: ಪ್ರಸ್ತುತ ದೇಶದ ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಆಗಿರುವ Jio ತನ್ನ ರಿಚಾರ್ಜ್ ದರಗಳನ್ನು ಹೆಚ್ಚಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಪ್ರಸ್ತುತ ಜಿಯೋ ರಿಚಾರ್ಜ್ ದರಗಳು ಬಾರಿ ದುಬಾರಿಯಾಗಿವೆ ಎನ್ನಬಹುದು. ಬಳಕೆದಾರರು ಯಾವುದೇ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರು ಕೂಡ ಈಗ ಹೆಚ್ಚು ಹಣವನ್ನು ನೀಡಬೇಕಾಗಿದೆ.
ಹೀಗಾಗಿ ಬಳಕೆದಾರರು ಬೆಸ್ಟ್ ಪ್ಲಾನ್ ಗಾಗಿ ಹುಡುಕುತ್ತಿದ್ದರೆ. ಸದ್ಯ ನಾವೀಗ ಈ ಲೇಖನದಲ್ಲಿ ಜಿಯೋ ಬೆಸ್ಟ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಂಪನಿಯು ತನ್ನ 47 ಕೋಟಿ ಬಳಕೆದಾರರಿಗಾಗಿ ಬೆಸ್ಟ್ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೋ ಬಳಕೆದಾರರು ಈ ರಿಚಾರ್ಜ್ ಪ್ಲಾನ್ ನಲ್ಲಿ ಅನಿಯಮಿತ ಪ್ರಯೋಜನವನ್ನು ಪಡೆಯಬಹುದು.
ಜಿಯೋ ಗ್ರಾಹಕರಿಗಾಗಿ ಭರ್ಜರಿ ರಿಚಾರ್ಜ್ ಪ್ಲಾನ್
ಇದೀಗ ಜಿಯೋ ತನ್ನ ಗ್ರಾಹಕರಿಗೆ ರೂ. 349 ರ ಉತ್ತಮ ಯೋಜನೆಯನ್ನು ಪರಿಚಯಿಸಿದೆ. ಜಿಯೋ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಇದು ಉತ್ತಮ ಅಲ್ಪಾವಧಿಯ ರೀಚಾರ್ಜ್ ಯೋಜನೆಯಾಗಿದೆ. ವಿಶೇಷವಾಗಿ ಹೆಚ್ಚಿನ ಡೇಟಾವನ್ನು ಬಳಸುವ ಬಳಕೆದಾರರಿಗೆ ಈ ಯೋಜನೆಯು ತುಂಬಾ ಕೈಗೆಟುಕುವಂತಿದೆ. ಈ ಯೋಜನೆಯ ರೀಚಾರ್ಜ್ ನಲ್ಲಿ ಗ್ರಾಹಕರು ಯಾವುದೇ ನೆಟ್ ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು. ಕರೆಯ ಜೊತೆಗೆ ಈ ಎಲ್ಲ ಪ್ರಯೋಜನವನ್ನು ಪಡೆಯಬಹುದಾಗಿದೆ.
5G ಡೇಟಾ ಪ್ಲಾನ್ ಅಗ್ಗದ ಬೆಲೆಗೆ , ಏನೆಲ್ಲಾ ಪ್ರಯೋಜನಗಳಿವೆ…?
ಜಿಯೋ ಬಳಕೆದಾರರು 349 ರೀಚಾರ್ಜ್ ಮಾಡಿದರೆ, 28 ದಿನಗಳವರೆಗೆ 56GB ಡೇಟಾವನ್ನು ಪಡೆಯುತ್ತಾರೆ. ಅಂದರೆ ಗ್ರಾಹಕರು ದಿನಕ್ಕೆ 2 GB ಡೇಟಾವನ್ನು ಬಳಸಬಹುದು. ಜಿಯೋ 2GB ಗಿಂತ ಹೆಚ್ಚಿನ ಡೇಟಾ ಪ್ಯಾಕ್ ಹೊಂದಿರುವ ಗ್ರಾಹಕರಿಗೆ ಉಚಿತ 5G ಸೇವೆಗಳನ್ನು ನೀಡುತ್ತಿದೆ. ನಿಮ್ಮ ಪ್ರದೇಶದಲ್ಲಿ 5G ಡೇಟಾ ಲಭ್ಯವಿದ್ದರೆ ನೀವು ಅನಿಯಮಿತ 5G ಸೇವೆಗಳನ್ನು ಆನಂದಿಸಬಹುದು.
ಈ ರೀಚಾರ್ಜ್ ಯೋಜನೆಯು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ. ನೀವು OTT ಸ್ಟ್ರೀಮಿಂಗ್ ಮಾಡಿದರೆ ಈ ಯೋಜನೆಯೊಂದಿಗೆ ನೀವು ಉಚಿತ Jio ಸಿನಿಮಾ ಚಂದಾದಾರಿಕೆಯನ್ನು ಪಡೆಯಬಹುದು. ಇದರೊಂದಿಗೆ ನೀವು ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಅನ್ನು ಉಚಿತವಾಗಿ ವೀಕ್ಷಿಸಬಹುದು. ಜಿಯೋ ಗ್ರಾಹಕರು ಮಾಸಿಕವಾಗಿ ಅನಿಯಮಿತ ಪ್ರಯೋಜನವನ್ನು ಪಡೆದುಕೊಳ್ಳೂ ಇಂದೇ ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಂಡು ಯೋಜನೆಯ ಲಾಭ ಪಡೆಯಿರಿ.