Jio Nokia 5G: ನೋಕಿಯಾ ಹಾಗೂ ಜಿಯೋ ಸೇರಿ ಡೀಲ್, ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್

5 ಜಿ ಗಾಗಿ ನೋಕಿಯಾ ಜೊತೆ ಒಪ್ಪಂದ ಮಾಡಿಕೊಂಡ ಜಿಯೋ.

Jio Nokia 5G: ಇದೀಗ ನಂಬರ್ ಒನ್ ಟೆಲಿಕಾಂ ಕಂಪನಿಯಾದ ಜಿಯೋ 5 ಜಿ ಗಾಗಿ ನೋಕಿಯಾ ಜೊತೆ ಡೀಲ್ ಮಾಡಿಕೊಂಡಿದೆಯಂತೆ. ಭಾರತದ ರಿಲಯೆನ್ಸ್ ಜಿಯೋ ಲಿಮಿಟೆಡ್ ಮತ್ತು ನೋಕಿಯಾವು ಈ ವಾರ 5 ಜಿ ನೆಟ್ ವರ್ಕ್ ಎಕ್ವಿಪ್ ಮೆಮಟ್ ಖರೀದಿಗಾಗಿ 1 .7 ಬಿಲಿಯನ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ವರದಿ ನೀಡಲಾಗಿದೆ.

ನೋಕಿಯಾದ ಪ್ರಧಾನ ಕಚೇರಿ ಇರುವ ಫ಼ಿನ್ ಲ್ಯಾಂಡ್ ನ ಹೆನ್ಸ್ ಲಿಂಕಿಯಲ್ಲಿ ಇಂದು ಸಹಿ ಹಾಕಬಹುದು ಎಂದು ವರದಿ ಹೇಳಿದೆ. ಈ ಕುರಿತು ಜಿಯೋ(Jio) ಮತ್ತು ನೋಕಿಯಾದ(Nokia) ಪ್ರತಿಕ್ರಿಯೆ ಕೇಳಲಾಗಿದ್ದು, ಇದರಿಂದ ಇಲ್ಲಿಯವರೆಗೆ ಯಾವುದೇ ಉತ್ತರ ಬರಲಿಲ್ಲ ಎನ್ನಲಾಗುತ್ತಿದೆ.

ನೋಕಿಯಾ ಹಾಗು ಜಿಯೋ ಒಪ್ಪಂದ
ಕಳೆದ ವರ್ಷ ಅಕ್ಟೊಬರ್ ನಲ್ಲಿಯೇ ತನ್ನ ಬೃಹತ್ ಪೂರೈಕೆದಾರ ಕಂಪನಿಯಾಗಿ ನೋಕಿಯಾವನ್ನು ರಿಲಯನ್ಸ್ ಇಂಡಸ್ಟ್ರೀಸ್ ಆಯ್ಕೆ ಮಾಡಿತ್ತು.

Nokia and Jio deal
Image Credit: Timesnownews

ಭಾರತದಲ್ಲಿ ವೈರ್ ಲೆಸ್ ಸೇವೆಗಳನ್ನು ಆರಂಭಿಸುವ ಸಮಯದಲ್ಲಿ ಈ ಡೀಲ್ ಆರಂಭವಾಗಿತ್ತು. ಕಳೆದ ಆಗಸ್ಟ್ ತಿಂಗಳಿನಲ್ಲಿ 5G ಸೆಕ್ರಮ್ ಹರಾಜಿನಲ್ಲಿ 11 ಶತಕೋಟಿ ಡಾಲರ್ ಮೌಲ್ಯದ ಏರ್ ವೇವ್ ಗಳನ್ನೂ ಜಿಯೋ ತನ್ನದಾಗಿಸಿಕೊಂಡಿತ್ತು. ಈಗ ಹಲವು ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಿದೆ. ಕಡಿಮೆ ದರದ 5ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಅಲ್ಪಾಬೆಟ್ ನ ಗೂಗಲ್ ಕಂಪನಿಯ ಜೊತೆ ಕಾರ್ಯ ನಿರ್ವಹಿಸುತ್ತದೆ.

ಜಿಯೊದ 5 ಜಿ ಸಂಬಂಧಿತ ಖರೀದಿಗಳನ್ನು ಬೆಂಬಲಿಸುವ ಸಂಸ್ಥೆಗಳಲ್ಲಿ ಎಚ್ ಎಸ್ ಬಿಸಿ ಜೆಪಿ ಮೋರ್ಗಾನ್ ಮತ್ತು ಸಿಟಿಗ್ರೂಪ್ ಸೇರಿವೆ ಎಂದು ವರದಿ ಹೇಳಿದೆ. ಯುರೋಪಿಯನ್ ಎಕ್ಸ್ ಪೋರ್ಟ್ ಕ್ರೆಡಿಟ್ ಏಜೆನ್ಸಿಯಾದ ಫಿಂವೇರವು ವಿದೇಶದಲ್ಲಿ ಸಾಲಗಳನ್ನು ವಿತರಿಸಲು ಸಾಲದಾರರಿಗೆ ಗ್ಯಾರೆಂಟಿ ನೀಡುತ್ತಿದೆ.

Join Nadunudi News WhatsApp Group

Nokia and Jio deal
Image credit: Pixabay

ಕಳೆದ ವರ್ಷ ಅಕ್ಟೊಬರ್ ತಿಂಗಳಲ್ಲಿ ಸ್ವೀಡಿಷ್ ದೂರಸಂಪರ್ಕ ಕಂಪನಿ ಎರಿಕ್ಸನ್ ಭಾರತದಲ್ಲಿ 5G ಸ್ವತಂತ್ರ ನೆಟ್ ವರ್ಕ್ ನಿರ್ಮಿಸಲು ಜಿಯೋ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ಇನ್ನು ಭಾರತದಲ್ಲಿ ಸ್ಮಾರ್ಟ್ ಫೋನ್ ಹೊಂದದೆ ಇರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಗ್ರಾಹಕರ ಬೇಡಿಕೆ ಪೂರೈಸಲು 4ಜಿ ಫೀಚರ್ ಫೋನ್ ಪರಿಚಯಿಸುವುದಾಗಿ ಜಿಯೋ ಕಳೆದ ವಾರದ ಆರಂಭದಲ್ಲಿ ತಿಳಿಸಿತ್ತು.

Join Nadunudi News WhatsApp Group