Jio Petrol Pump: ಇಂದೇ ಆರಂಭಿಸಿ Jio ಪೆಟ್ರೋಲ್ ಪಂಪ್ ಬಿಸಿನೆಸ್, ಕಡಿಮೆ ಹೂಡಿಕೆ ಮತ್ತು ಲಕ್ಷ ಲಕ್ಷ ಲಾಭ.

ಕಡಿಮೆ ವೆಚ್ಚದಲ್ಲಿ ಜಿಯೋ ಪೆಟ್ರೋಲ್ ಪಂಪ್ ಬಿಸಿನೆಸ್ ಆರಂಭ ಮಾಡಿದರೆ ದೊಡ್ಡ ಮಾತ್ತದ ಲಾಭ ಪಡೆಯಬಹುದು.

Jio BP Petrol Pump Business: ಸಾಮಾನ್ಯವಾಗಿ ವ್ಯವಹಾರವನ್ನು ಮಾಡಲು ಸಾಕಷ್ಟು ಆಯ್ಕೆಗಳಿರುತ್ತದೆ. ಯಾವ ಉದ್ಯೋಗವನ್ನು ಆರಿಸಿಕೊಂಡರು ಕೂಡ ವ್ಯಾಪಾರವನ್ನು ಸುಲಭವಾಗಿ ಮಾಡಿಕೊಂಡು ಹೋಗಬಹುದು. ಆದರೆ ವ್ಯಾಪಾರ ಆರಂಭಿಸುವ ಮುನ್ನ ವ್ಯವಹಾರದ ಲಾಭ ನಷ್ಟದ ಬಗ್ಗೆ ತಿಳಿದಿರಬೇಕು. ಇತ್ತೀಚಿಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ.

ಇನ್ನು ವಾಹನ ಮಾರಾಟದ ಜೊತೆಗೆ ವಾಹನಗಳಿಗೆ ಅಗತ್ಯ ಇರುವ ಪೆಟ್ರೋಲ್(Petrol), ಡೀಸೆಲ್ ಮಾರಾಟ ಮಾಡುವುದು ಹೆಚ್ಚಿನ ಲಾಭವನ್ನು ನೀಡುವ ವ್ಯವಹಾರವಾಗಿದೆ. ಹೊಸ ವ್ಯವಹಾರವನ್ನು ಮಾಡುವ ಯೋಜನೆ ಇದ್ದವರಿಗೆ ಪೆಟ್ರೋಲ್ ಬ್ಯಾಂಕ್ ವ್ಯವಹಾರ ಉತ್ತಮ ಆಯ್ಕೆಯಾಗಿದೆ.

Jio BP Petrol Pump Business
Image Source: India Today

ಪೆಟ್ರೋಲ್ ಪಂಪ್ ವ್ಯವಹಾರ
ಪೆಟ್ರೋಲ್ ಪಂಪ್‌ಗಳ ಡೀಲರ್‌ ಶಿಪ್ ಒದಗಿಸುವ ಹಲವಾರು ಕಂಪನಿಗಳು ದೇಶದಲ್ಲಿವೆ. ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸೇರಿದಂತೆ ಇತ್ಯಾದಿ ಕಂಪನಿಗಳು ಪೆಟ್ರೋಲ್ ಪಂಪ್‌ಗಳ ಡೀಲರ್‌ ಶಿಪ್ ಅನ್ನು ನೀಡುತ್ತವೆ. ರಿಲಯನ್ಸ್ ಕಂಪನಿಯ ಜಿಯೋ ಬಿಪಿ ಪೆಟ್ರೋಲ್ ಪಂಪ್ ಡೀಲರ್‌ಶಿಪ್ ಅನ್ನು ಸಹ ನೀಡುತ್ತದೆ. ನೀವು ಪೆಟ್ರೋಲ್ ಪಂಪ್ ತೆರೆಯುವ ಯೋಜನೆಯಲ್ಲಿ ಈ ಮಾಹಿತಿ ನಿಮಗೆ ಸಹಾಯವಾಗುತ್ತದೆ.

ಇಂದೇ ಆರಂಭಿಸಿ ಜಿಯೋ ಪೆಟ್ರೋಲ್ ಪಂಪ್ ಬಿಸಿನೆಸ್
ಜಿಯೋ ಕಂಪನಿಯು ತನ್ನ ನೆಟ್ವರ್ಕ್ ಅನ್ನು ಈನಷ್ಟು ವಿಸ್ತರಿಸಲು ಹೊಸ ಹೊಸ ಹೆಜ್ಜೆಯನ್ನು ಇಡುತ್ತಿದೆ. ವೇಗವಾಗಿ ಬೆಳೆಯುವ ಉದ್ಯಮವನ್ನು ಜಿಯೋ ಆರಿಸುತ್ತಿದೆ. ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪೆಟ್ರೋಲ್ ಪಂಪ್ ಡೀಲರ್‌ ಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮುಂತಾದ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.

Jio BP Petrol Pump Business
Image Source: Energy News

ಜಿಯೋ ಪೆಟ್ರೋಲ್ ಪಂಪ್ ತೆರೆಯಲು ಇವುಗಳು ಅಗತ್ಯ
ನೀವು Jio BP ಪೆಟ್ರೋಲ್ ಪಂಪ್ ತೆರೆಯಲು ಬಯಸಿದರೆ, ನೀವು ರಸ್ತೆಯ ಪಕ್ಕದಲ್ಲಿ 1500 ಚದರ ಮೀಟರ್ ಮತ್ತು ಹೆದ್ದಾರಿಯಲ್ಲಿ 3000 ಚದರ ಮೀಟರ್ ಭೂಮಿಯನ್ನು ಹೊಂದಿರಬೇಕು. 2 ಕೋಟಿ ರೂ. ಗಿಂತ ಹೆಚ್ಚು ಇದು ಸ್ಥಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡರೆ, ಅದರ ಗುತ್ತಿಗೆಯು ದೀರ್ಘಕಾಲದವರೆಗೆ ಇರಬೇಕಾಗುತ್ತದೆ.

Join Nadunudi News WhatsApp Group

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ
ಪೆಟ್ರೋಲ್ ಪಂಪ್ ಪಾರ್ನಲ್ ಮಾಡಲು ಯಾವುದೇ ಏಜೆಂಟ್ ಅನ್ನು ನೇಮಿಸಿಲ್ಲ ಎಂದು JIO-BP ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಪೆಟ್ರೋಲ್ ಪಂಪ್‌ನ ಡೀಲರ್‌ಶಿಪ್ ಅನ್ನು ತೆಗೆದುಕೊಂಡ ನಂತರ, ನಿಮ್ಮ ಗಳಿಕೆಯು ಪೆಟ್ರೋಲ್ ಮಾರಾಟದ ಮೇಲೆ ಇರುತ್ತದೆ. ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ನಿಮಗೆ 2 ರಿಂದ 5 ರೂಪಾಯಿಗಳ ಕಮಿಷನ್ ಸಿಗುತ್ತದೆ. ಪೆಟ್ರೋಲ್ ಹೆಚ್ಚು ಮಾರಾಟವಾದರೆ ನಿಮ್ಮ ಲಾಭದ ಪ್ರಮಾಣವು ಹೆಚ್ಚಿರುತ್ತದೆ.

Join Nadunudi News WhatsApp Group