Jio Postpaid: ಫ್ಯಾಮಿಲಿಗಾಗಿ ಜಿಯೋ ಬಂಪರ್ ಆಫರ್, 100GB ಡೇಟಾ ಜೊತೆಗೆ Netflix ಉಚಿತ.
ಇಡೀ ಕುಟುಂಬದ ಜನರಿಗಾಗಿ ಹೊಸ ಯೋಜನೆ ಬಿಡುಗಡೆ ಮಾಡಿದ ಅಂಬಾನಿ ಜಿಯೋ.
Reliance Jio Postpaid Recharge Plans: ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ (Jio) ಇದೀಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಂತೂ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ.
ತಮ್ಮ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಬಿಡುಗಡೆ ಮಾಡಿದೆ.
ಜಿಯೋ ಪೋಸ್ಟ್ ಪೈಡ್ 699 ಯೋಜನೆ
ಜಿಯೋ ಗ್ರಾಹಕರಿಗಿ ಜಿಯೋ ಇದೀಗ 699 ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ 100GB ಡೇಟಾವನ್ನು ಪಡೆಯಬಹುದು. ಡೇಟಾ ಮಿತಿ ಮುಗಿದ ಬಳಿಕ ಬಳಕೆದಾರರು 1GB ಡೇಟಕ್ಕಾಗಿ 10 ರೂ. ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಕುಟುಂಬದ ಸದಸ್ಯರು 5GB ಡೇಟಾವನ್ನು ಪಡೆಯುತ್ತಾರೆ.
ಈ ಯೋಜನೆಯ ಚಂದದರು ಪ್ರತಿದಿನ 100 ಉಚಿತ SMS ಗಳನ್ನೂ ಪಡೆಯಬಹುದು. ಈ ಯೋಜನೆಯಲ್ಲಿ ಒಂದು ವರ್ಷದವರೆಗೆ ಅಮೆಜಾನ್ ಪ್ರೈಮ್ ವಿಡಿಯೋಗೆ ಉಚಿತ ಪ್ರವೇಶವನ್ನು ಕೂಡ ಪಡೆಯಬಹುದು. ರಿಲಯನ್ಸ್ ಜಿಯೋ ನ ಈ ಯೋಜನೆಯು ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಜಿಯೋ ಕಂಪನಿಯು ಈ ಯೋಜನೆಯನ್ನು 30 ದಿನಗಳ ಪ್ರಯೋಗವನ್ನು ನೀಡುತ್ತದೆ.
ಜಿಯೋ ಪೋಸ್ಟ್ ಪೈಡ್ 1499 ಯೋಜನೆ
ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ 1499 ಪೋಸ್ಟ್ ಪೈಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ನೀವು 300GB ಡೇಟಾ ಮತ್ತು Netflix ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಅನಿಯಮಿತ ಕರೆಯ ಜೊತೆಗೆ ಅನಿಯಮಿತ SMS ಗಳನ್ನೂ ಪಡೆಯುತ್ತೀರಿ.