Jio Saavan: 28 ದಿನಗಳ ಕಾಲ 42 GB ಡೇಟಾ ಮತ್ತು ಕರೆ, ಜಿಯೋ ಈ ರಿಚಾರ್ಜ್ ಪ್ಲ್ಯಾನ್ ಗೆ ಭರ್ಜರಿ ಬೇಡಿಕೆ.
28 ದಿನಗಳ ಇನ್ನೊಂದು ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದರೆ Jio.
Jio 28 Days Recharge Plan: ಇತ್ತೀಚಿಗೆ ರಿಲಯನ್ಸ್ ಜಿಯೋ (jio) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್(Recharge Plan) ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ.
ಜಿಯೋ ರಿಲಯನ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಜಿಯೋ ಗ್ರಾಹಕರಿಗೆ ಇದೀಗ ಕಂಪನಿಯು ಸಿಹಿಸುದ್ದಿ ನೀಡಿದೆ. ಕಡಿಮೆ ಬೆಲೆಯ ರಿಚಾರ್ಜ್ ನಲ್ಲಿ ಈ ಹೊಸ ಸೌಲಭ್ಯ ನೀಡಲು ಜಿಯೋ ನಿರ್ಧರಿಸಿದೆ. ಜಿಯೋ ಬಳಕೆದಾರರು ಇನ್ನುಮುಂದೆ ಹೆಚ್ಚಿನ ಅನುಕೂಲವನ್ನು ಪಡೆಯಬಹುದು.
ಜಿಯೋ ಬಳಕೆದಾರರಿಗೆ ಹೊಸ ಸೇವೆ ಲಭ್ಯ
ಜಿಯೋ ಬಿಡುಗಡೆ ಮಾಡಿರುವ ಅತಿ ಕಡಿಮೆ ಬೆಲೆಯ ಪ್ರೀಪೈಡ್ ಯೋಜನೆಯು ಜಿಯೋ ಸಾವನ್ ಪ್ರೊ (JioSaavan Pro) ಉಚಿತಾ ಚಂದಾದಾರಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ JioSaavn ಆನ್ಲೈನ್ ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆಗಿದ್ದು ಅದು ಬಳಕೆದಾರರಿಗೆ ಹಲವಾರು ಡಿವೈಸ್ ಗಳಿಂದ ತಮ್ಮ ಪ್ರೊಫೈಲ್ ಗಳನ್ನೂ ಪ್ರವೇಶಿಸಲು ಅನುಮತಿಸುತ್ತದೆ.
ಜಿಯೋ ಸಾವನ್ ಆಫ್ಲೈನ್ ಡೌನ್ಲೋಡ್ ಗಳನ್ನೂ ಸಕ್ರಿಯಗೊಳಿಸುತ್ತದೆ. ಈಗಾಗಲೇ ಈ ಯೋಜನೆ ಭಾರಿ ಪ್ರಯೋಜನದೊಂದಿಗೆ ಲಭ್ಯವಿದ್ದು ನೀವು ಈ JioSaavn Pro ಚಂದಾದಾರಿಕೆಯನ್ನು ಬಯಸಿದರೆ ನೀವು ಕೇವಲ 99 ಅಥವಾ 749 ರೂಗಳಿಗೆ ಸುಮಾರು 30 ದಿನಗಳಿಂದ 365 ದಿನಗಳ ವರೆಗೆ ಈ ಸೇವೆಯ ಲಾಭವನ್ನು ಪಡೆಯಬಹುದು. ಯಾವ ಯೋಜನೆಯಿಂದ ಜಿಯೋ ಸಾವನ್ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
28 ದಿನಗಳ ಕಾಲ 42 GB ಡೇಟಾ ಪ್ರಯೋಜನ ಪಡೆಯಿರಿ
ಜಿಯೋ ರಿಲಯನ್ಸ್ ಬಳಕೆದಾರರಿಗೆ 269 ರೂ ನ ಹೊಸ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಒಟ್ಟಗಿ 42 GB ಡೇಟಾವನ್ನು ನೀಡಲಾಗುತ್ತದೆ. ಪ್ರತಿನಿತ್ಯ 1.5GB ಡೇಟಾದ ಪ್ರಯೋಜನವನ್ನು ಪಡೆಯಬಹುದು. ಸಂಪೂರ್ಣ ಡೇಟಾ ಬಳಕೆಯ ನಂತರ 64 kbps ನಲ್ಲಿ ಬಳಸಬಹುದಾಗಿದೆ.
ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಸೇರಿದಂತೆ ಇನ್ನಿತರ ಜಿಯೋ ಪ್ಲೇಟ್ ಫಾರಂ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ. ಜಿಯೋ ರಿಲಯನ್ಸ್ ತನ್ನ ಬಳಕೆದಾರರಿಗೆ 5G ಸೇವೆಯನ್ನು ನೀಡುತ್ತಾ ಇನ್ನಷ್ಟು ಗ್ರಾಹಕರನ್ನು ಪಡೆಯುತ್ತಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಜಿಯೋ ಸಾವನ್ ಉಚಿತ ಚಂದಾದಾರಿಕೆಯ ಪ್ರಯೋಜನದ ಲಾಭ ಪಡೆಯಿರಿ.