Jio v/s Airtel v/s Vi: Jio v/s Airtel v/s Vi ಯಾವ ಪ್ಲಾನ್ ರಿಚಾರ್ಜ್ ಮಾಡಿದರೆ ಎಷ್ಟು ಉಳಿಸಬಹುದು…? ಇಲ್ಲಿದೆ ಡೀಟೇಲ್ಸ್
Jio v/s Airtel v/s Vi ಯಾವ ಪ್ಲಾನ್ ರಿಚಾರ್ಜ್ ಮಾಡಿದರೆ ಎಷ್ಟು ಉಳಿಸಬಹುದು...?
Jio v/s Airtel v/s Vi Plan Details: ಸದ್ಯ ದೇಶದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ದರವನ್ನು ಹೆಚ್ಚಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದೇಶದಲ್ಲಿ ಜುಲೈ 3 ರಿಂದ Jio, Airtel, Vi ರಿಚಾರ್ಜ್ ದರಗಳು ಹೆಚ್ಚಾಗಿವೆ ಎನ್ನಬಹುದು. ಪ್ರಸ್ತುತ ಈ ಸಿಮ್ ಕಾರ್ಡ್ ಬಳಕೆದಾರರು ಹೆಚ್ಚಿನ ಹಣವನ್ನು ನೀಡಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಅದಾಗ್ಯೂ, ಈ ಮೂರು ಟೆಲಿಕಾಂ ನೆಟ್ವರ್ಕ್ ಗಳಲ್ಲಿ ವಿಭಿನ್ನ ರಿಚಾರ್ಜ್ ಪ್ಲಾನ್ ಗಳು ವಿವಿಧ ಪ್ರಯೋಜನವನ್ನು ನೀಡುತ್ತದೆ.
ಮೂರು ಕಂಪನಿಗಳ ರಿಚಾರ್ಜ್ ಪ್ಲಾನ್ ಗಳಿಗೆ ಹೋಲಿಕೆ ಮಾಡಿದರೆ ಯಾವ ನೆಟ್ವರ್ಕ್ ನ ರಿಚಾರ್ಜ್ ಬೆಲೆ ಅಗ್ಗವಾಗಿರಬಹುದು ಎನ್ನುವ ಬಗ್ಗೆ ನೀವು ಯೋಚಿಸಿರಬಹುದು. ಸದ್ಯ ನಾವೀಗ ಈ ಲೇಖನದಲ್ಲಿ ಜಿಯೋ, ಏರ್ಟೆಲ್ ಮತ್ತು ವಿ ರಿಚಾರ್ಜ್ ಪ್ಲಾನ್ ಗಳ ಬೆಲೆಯ ವ್ಯತ್ಯಾಸ ಹಾಗೂ ಯಾವ ಪ್ಲಾನ್ ಹೆಚ್ಚು ಹಣ ಉಳಿಸುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
Jio v/s Airtel v/s Vi
ಇತ್ತೀಚೆಗೆ, ಈ ಮೂರು ಟೆಲಿಕಾಂ ಕಂಪನಿಗಳು ಏರ್ ಟೆಲ್, ವಿ ಟೆಲಿಕಾಂ ಮತ್ತು ಜಿಯೋ ತಮ್ಮ ಪ್ರಿಪೇಯ್ಡ್ ಯೋಜನೆಗಳು ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಆದರೆ ರೀಚಾರ್ಜ್ ಯೋಜನೆಯಲ್ಲಿ ಚಂದಾದಾರರು ಎಷ್ಟು ಪಾವತಿಸುತ್ತಿದ್ದಾರೆ ಮತ್ತು ಅವರು ಪ್ರತಿಯಾಗಿ ಏನನ್ನು ಪಡೆಯುತ್ತಿದ್ದಾರೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಕೆಲವು ಜನಪ್ರಿಯ ಯೋಜನೆಗಳನ್ನು ಹೋಲಿಸಲಾಗಿದೆ. ಅದರ ಬಗ್ಗೆ ವಿವರ ಇಲ್ಲಿದೆ.
ಯಾವ ಪ್ಲಾನ್ ರಿಚಾರ್ಜ್ ಮಾಡಿದರೆ ಎಷ್ಟು ಉಳಿಸಬಹುದು…?
•ಮೊದಲು 28 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ನೋಡೋಣ. ಜಿಯೋ 299 ರೂ. ಶುಲ್ಕ ವಿಧಿಸಿದರೆ, ಇತರ ಟೆಲಿಕಾಂ ಆಪರೇಟರ್ ಗಳು ಅದೇ ದಿನದ ಮಾನ್ಯತೆಗೆ 349 ರೂ. ಬೆಲೆಯನ್ನು ವಿಧಿಸಿವೇ. ಈ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ 50 ರೂ. ಉಳಿತಾಯವಾಗಲಿದೆ. ಆದ್ದರಿಂದ ಪ್ರತಿ ದಿನದ ಡೇಟಾದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಪ್ರತಿಯೊಬ್ಬರಿಗೂ ದಿನಕ್ಕೆ 1.5 GB ಡೇಟಾವನ್ನು ಮಾತ್ರ ನೀಡಲಾಗುತ್ತದೆ. ಜಿಯೋ ಬಳಕೆದಾರರು ತಿಂಗಳಿಗೆ 50 ರೂ. ಹಾಗಾಗಿ ವರ್ಷಕ್ಕೆ 600 ರೂ. ಉಳಿಸಬಹುದು.
•ಒಂದು ವರ್ಷದ ಯೋಜನೆಗಾಗಿ ಜಿಯೋದಲ್ಲಿ 3599 ರೂ. ಆಗಿದೆ. ಪ್ರತಿದಿನ 2.5 ಜಿಬಿ ಡೇಟಾ ಸಿಗಲಿದೆ. ಉಳಿದ ಟೆಲಿಕಾಂ ಆಪರೇಟರ್ ಗಳು ಸಹ ರೂ. 3599. ಶುಲ್ಕ ವಿಧಿಸುತ್ತದೆ. ಆದರೆ ಇವುಗಳಲ್ಲಿ ಉಚಿತ ಡೇಟಾ ದಿನಕ್ಕೆ 2 ಜಿಬಿ ಮಾತ್ರ.
•ಜಿಯೋದ 84 ದಿನಗಳ ಯೋಜನೆಗೆ ರೂ 859, ನೀವು ದಿನಕ್ಕೆ 2 ಜಿಬಿ ಡೇಟಾವನ್ನು ಪಡೆಯುತ್ತೀರಿ. ಇತರ ಟೆಲಿಕಾಂ ಆಪರೇಟರ್ ಗಳು ರೂ. 979 ಶುಲ್ಕ ವಿದಿಸಿವೆ. ಮತ್ತು ದಿನಕ್ಕೆ 2 ಜಿಬಿ ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ಈ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ 120 ರೂ. ಉಳಿತಾಯ ಆಗಲಿದೆ.