Jio 4G Phone: 2500 ರೂಪಾಯಿಗೆ ಹೊಸ 4G ಫೋನ್ ಲಾಂಚ್ ಮಾಡಿದ ಮುಕೇಶ್ ಅಂಬಾನಿ, ವಾಟ್ಸಾಪ್ ಮತ್ತು Youtube ಕೂಡ ರನ್ ಆಗುತ್ತೆ.

ರಿಲಯನ್ಸ್‌ ಕಂಪನಿಯಿಂದ ಜಿಯೋಫೋನ್‌ ಪ್ರೈಮಾ 4G ಬಿಡುಗಡೆ.

Jiophone Prima 4G : ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರು ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಆಗಾಗ ಸುದ್ದಿಯಾಗುತ್ತಾರೆ. ಬಿಲಿಯನೇರ್ ಮುಕೇಶ್ ಅಂಬಾನಿ ಅವರು ಪ್ರತಿ ದೀಪಾವಳಿ ಹಬ್ಬಕ್ಕೆ ಹೊಸ ಹೊಸ ಪ್ರಾಡಕ್ಟ್ ಅನ್ನು ಲಾಂಚ್ ಮಾಡುತ್ತಿರುತ್ತಾರೆ.

ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಅದೇ ತರ ಈ ವರ್ಷದ ದೀಪಾವಳಿಗೆ ಮುಕೇಶ್ ಅಂಬಾನಿ ಅವರು ಜನಸಾಮಾನ್ಯರು ಖರೀದಿಸಬಹುದಾದಂತ ಕಡಿಮೆ ಬೆಲೆಯ ಫೋನ್ ಒಂದನ್ನು ಲಾಂಚ್ ಮಾಡಿದ್ದಾರೆ. ನಾವೀಗ ಈ ಫೋನ್ ಯಾವುದು..? ಅದರ ಬೆಲೆ ಎಷ್ಟು..? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Jiophone Prima 4G
Image Credit: Digit

ರಿಲಯನ್ಸ್‌ ಕಂಪನಿಯಿಂದ ಜಿಯೋಫೋನ್‌ ಪ್ರೈಮಾ 4G ಬಿಡುಗಡೆ
ಭಾರತದಲ್ಲಿ ಈ ಹಿಂದೆ ರಿಲಯನ್ಸ್ ಕಂಪನಿ 999 ರೂಪಾಯಿಗೆ Jio Bharat V2 ಫೋನ್‌ ಅನ್ನು ಬಿಡುಗಡೆ ಮಾಡಿದೆ. ಇದೀಗ ಆ ಫೋನ್ ಗಿಂತ ಹೆಚ್ಚಿನ ಫೀಚರ್ ಹೊಂದಿದ ಜಿಯೋಫೋನ್‌ ಪ್ರೈಮಾ 4G ಫೋನ್ ಅನ್ನು ದೀಪಾವಳಿಗಿಂತ ಮುಂಚೆಯೇ ಬಿಡುಗಡೆ ಮಾಡಿದೆ. ಇದರಲ್ಲಿ ನೀವು Jio TV, Jio Savan, Jio Cinema, Jio News ಮುಂತಾದ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ.

ಜಿಯೋಫೋನ್‌ ಪ್ರೈಮಾ 4G ಬೆಲೆ
ಮುಕೇಶ್ ಅಂಬಾನಿ ಕಳೆದ ಕೆಲವು ತಿಂಗಳುಗಳಲ್ಲಿ ಬಿಡುಗಡೆ ಮಾಡಿದ ಎರಡನೇ 4G ಫೋನ್ ಇದಾಗಿದೆ. ಜಿಯೋಫೋನ್‌ ಪ್ರೈಮಾ 4G ಫೋನ್ ಅನ್ನು ರಿಲಯನ್ಸ್ ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಕೇವಲ 2,599 ರೂಪಾಯಿಗೆ ಖರೀದಿಸಬಹುದಾಗಿದೆ. ಜಿಯೋಫೋನ್‌ ಪ್ರೈಮಾ 4G ಅಲ್ಲಿ WhatsApp ಮತ್ತು Youtube ಸಹ ಲಭ್ಯವಾಗಲಿದೆ. ಇದು ಭಾರತದ ಅಗ್ಗದ ಫೋನ್‌ ಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಫೋನ್ ಕ್ಯಾಶ್‌ ಬ್ಯಾಕ್ ಡೀಲ್‌, ಬ್ಯಾಂಕ್ ಆಫರ್‌ ಹಾಗೂ ಕೂಪನ್‌ಗಳನ್ನು ಒಳಗೊಂಡಿದೆ.

Jiophone Prima 4G Price
Image Credit: Apanabihar

Jio ಫೋನ್ ನ ವಿಶೇಷತೆ
ಇನ್ನು JioPhone Prima 4G ನಲ್ಲಿ ವಿಶೇಷವಾಗಿ 1800mAh ಬ್ಯಾಟರಿ ಸಾಮರ್ಥ್ಯವನ್ನು ನೋಡಬಹುದು. ಇನ್ನು JioPhone Prima 4G ಟಿಎಫ್ಟಿ ಡಿಸ್ಪ್ಲೇ ಜೊತೆಗೆ ನಿಮಗೆ ಅನುಕೂಲವಾಗುವಂತೆ 23 ಭಾಷೆಗಳ ಆಯ್ಕೆಯನ್ನು ಹೊಂದಿದೆ. ಇನ್ನು Jio ಲೋಗೋ ಅನ್ನು ನೀವು ಮೊಬೈಲ್ ನ ಹಿಂಭಾಗದಲ್ಲಿ ನೋಡಬಹುದು. ಇನ್ನು Jio Savan, JioCinema, Jio Pay ಅನ್ನು ನೀವು ಡೌನ್ಲೋಡ್ ಮಾಡುವ ಅಗತ್ಯ ಇರುವುದಿಲ್ಲ. ಕಂಪನಿಯು ಮುಂಚಿತವಾಗಿಯೇ ಫೋನ್ ನಲ್ಲಿ ಈ ಅಪ್ಲಿಕೇಶನ್ ಗಳನ್ನೂ ಗ್ರಾಹಕರಿಗೆ ನೀಡುತ್ತಿದೆ. ಹಾಗೆ ಈ ಫೋನ್ ಗ್ರಾಹಕರಿಗೆ ನೀಲಿ ಮತ್ತು ಹಳದಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group