Jio Prima: ಅಗ್ಗದ ಬೆಲೆಗೆ ಇನ್ನೊಂದು 4G ಪ್ರೈಮಾ ಫೋನ್ ಲಾಂಚ್ ಮಾಡಿದ Jio, ಫೀಚರ್ ಕಂಡು ಜನರು ಫಿದಾ.

ಅತಿ ಅಗ್ಗದ ಬೆಲೆಗೆ 4G ಫೋನ್ ಪರಿಚಯಿಸಿದ Jio Reliance.

JioPhone Prima 4G: ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ Jio ಇದೀಗ 5G ನೆಟ್ ವರ್ಕ್ ನೊಂದಿಗೆ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ದೇಶದಲ್ಲಿ ಜಿಯೋ ಪ್ರಮುಖ ಟೆಲಿಕಾಂ ಕಂಪನಿಯಾಗಿದೆ ಎಂದರೆ ತಪ್ಪಾಗಲಾರದು. Jio Reliance ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ.

ಇನ್ನು ಈಗಾಗಲೇ ಜಿಯೋ ಫೋನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದೀಗಾ ಜಿಯೋ ರಿಲಯನ್ಸ್ ಮತ್ತೊಂದು ಅತ್ಯಾಕರ್ಷಕ Jio Phone ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ Jio Reliance ಪರಿಚಯಿಸಿರುವ 4G ಫೋನ್ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

JioPhone Prima 4G
Image Credit: Government jobsinkarnataka

JioPhone Prima 4G
ಇದೀಗ Jio Reliance IMC (Indian Mobile Congress) ನಲ್ಲಿ ತನ್ನ JioPhone Prima 4G ಫೋನ್ ಅನ್ನು ಲಾಂಚ್ ಮಾಡಿದೆ. ಈ ನೂತನ JioPhone Prima 4G ಫೋನ್ ಪ್ರೀಮಿಯಂ ವಿನ್ಯಾಸದೊಂದಿಗೆ WhatsApp, YouTube ಸೇರಿದಂತೆ ಇನ್ನಿತರ ಅನೇಕ ಸೋಶಿಯಲ್ ಮೀಡಿಯಾ ಆಪ್ ಗಳನ್ನೂ ಹೊಂದಿದೆ. ಇನ್ನು ನೀವು JioPhone Prima 4G ಫೋನ್ ಅನ್ನು Jio Mart ನಲ್ಲಿ ಖರೀದಿಸಬಹುದಾಗಿದೆ. ದೀಪಾವಳಿಯ ವಿಶೇಷಕ್ಕೆ ಈ Jio 4G ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

JioPhone Prima 4G ಬೆಲೆ ಎಷ್ಟು..?
ಇನ್ನು ನೀವು JioPhone Prima 4G ನಲ್ಲಿ ಹಳದಿ ಮತ್ತು ನೀಲಿ ಎರಡು ಬಣ್ಣಗಳ ಆಯ್ಕೆಯನ್ನು ಕಾಣಬಹುದು. JioPhone Prima 4G Jiomart ನಲ್ಲಿ ಕೇವಲ 25,99 ರೂ. ಗೆ ಖರೀದಿಗೆ ಲಭ್ಯವಿದೆ. ಇನ್ನು ಈ 4G ಫೋನ್ ಖರೀದಿಗೆ ಆಕರ್ಷಕ ರಿಯಾಯಿತಿ ಕೂಡ ಲಭ್ಯವಿದೆ. ನೀವು ಕ್ಯಾಶ್ ಬ್ಯಾಕ್, ಬ್ಯಾಂಕ್ ಆಫರ್ ನ ಮೂಲಕ ಈ JioPhone Prima 4G ಫೋನ್ ಅನ್ನು ಇನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

JioPhone Prima 4G Phone
Image Credit: Reddit

Jio ಫೋನ್ ನ ವಿಶೇಷತೆ
ಇನ್ನು JioPhone Prima 4G ನಲ್ಲಿ ವಿಶೇಷವಾಗಿ 1800mAh ಬ್ಯಾಟರಿ ಸಾಮರ್ಥ್ಯವನ್ನು ನೋಡಬಹುದು. ಇನ್ನು JioPhone Prima 4G ಟಿಎಫ್ಟಿ ಡಿಸ್ಪ್ಲೇ ಜೊತೆಗೆ ನಿಮಗೆ ಅನುಕೂಲವಾಗುವಂತೆ 23 ಭಾಷೆಗಳ ಆಯ್ಕೆಯನ್ನು ಹೊಂದಿದೆ. ಇನ್ನು Jio ಲೊಗಿವನ್ನು ನೀವು ಮೊಬೈಲ್ ನ ಹಿಂಭಾಗದಲ್ಲಿ ನೋಡಬಹುದು. ಇನ್ನು Jio Savan, JioCinema, Jio Pay ಅನ್ನು ನೀವು ಡೌನ್ಲೋಡ್ ಮಾಡುವ ಅಗತ್ಯ ಇರುವುದಿಲ್ಲ. ಕಂಪನಿಯು ಮುಂಚಿತವಾಗಿಯೇ ಫೋನ್ ನಲ್ಲಿ ಈ ಅಪ್ಲಿಕೇಶನ್ ಗಳನ್ನೂ ಗ್ರಾಹಕರಿಗೆ ನೀಡುತ್ತಿದೆ.

Join Nadunudi News WhatsApp Group

Join Nadunudi News WhatsApp Group