Job Exam: ಸರ್ಕಾರೀ ಕೆಲಸಕ್ಕಾಗಿ ಪರೀಕ್ಷೆ ಬರೆಯುವ ಕನ್ನಡಿಗರಿಗೆ ಇನ್ನುಮುಂದೆ ಹೊಸ ಸೇವೆ, ಕೇಂದ್ರದ ಘೋಷಣೆ.

ಕರ್ನಾಟಕದಲ್ಲಿ ಸರ್ಕಾರೀ ಕೆಲಸಕ್ಕೆ ಪರೀಕ್ಷೆ ಬರೆಯುವವರಿಗೆ ಹೊಸ ಸೇವೆ ಆರಂಭ.

Job Exam In Kannada: ಇದೀಗ ಜಾಬ್ ಗಾಗಿ ಪರೀಕ್ಷೆ ಬರೆಯುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಕೇಂದ್ರ ಸರ್ಕಾರ ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ(Central Government)ದಿಂದ ಹೊಸ ಸುದ್ದಿ ಹೊರ ಬಿದ್ದಿದೆ.

ಹಲವು ನೇಮಕಾತಿಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಇನ್ನುಮುಂದೆ ಎಸ್ ಎಸ್ ಸಿ(SSC), ಎಂ ಟಿ ಎಸ್(MTS), ಎಸ್ ಆರ್ ಪಿ ಎಫ್(SRPF), ಸಿಬಿಎಸ್ ಇ(CBSE) ಪರೀಕ್ಷೆಯನ್ನು ಇಂಗ್ಲಿಷ್ ಜೊತೆಗೆ ತಮ್ಮ ಮಾತೃಭಾಷೆಯಲ್ಲಿ ತೆಗೆದುಕೊಳ್ಳಬಹುದು.

job exam latest news update
Image Credit: Knocksense

ಜಾಬ್ ಗಾಗಿ ಪರೀಕ್ಷೆ ಬರೆಯುವವರಿಗೆ ಹೊಸ ಮಾಹಿತಿ
ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿ ಪಟ್ಟಿ ಮಾಡಲಾದ ಎಲ್ಲಾ ಭಾಷೆಗಳನ್ನು ಸೇರಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ತೊಡಗಿಸಿಕೊಂಡಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಪರೀಕ್ಷೆ ಮತ್ತು ಸಿ ಎಚ್ ಎಸ್ ಏ ಇ ಪರೀಕ್ಷೆಯನ್ನು ಹಿಂದಿ ಮತ್ತು ತರಬೇತಿ ಇಲಾಖೆ ಅನುಮೋದನೆ ನೀಡಿದೆ. ಈ ನಿರ್ಧಾರದ ನಂತರ ವಿದ್ಯಾರ್ಥಿಗಳು ಈಗ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

A new service has been launched for government job candidates in Karnataka.
Image credit: Collegechalo

ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು ಒರಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯಬಹುದು. ಈ ನಿರ್ಧಾರದ ಪರಿಣಾಮವಾಗಿ ಲಕ್ಷಾಂತರ ಅಭ್ಯರ್ಥಿಗಳು ತಮ್ಮ ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ ಮತ್ತು ಅವರ ಆಯ್ಕೆಯ ನಿರೀಕ್ಷೆಗಳು ಸುಧಾರಿಸುತ್ತವೆ.

ಪ್ರಾದೇಶಿಕ ಭಾಷೆಯಲ್ಲೂ ಸಿಎಪಿಎಫ್ ಪರೀಕ್ಷೆ
ಸಿಎಪಿಎಫ್ ಗಳಿಗೆ ಕಾನ್ಸ್ಟೆಬಲ್ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳನ್ನು ನಡೆಸಲು ಕೇಂದ್ರ ಸರ್ಕಾರ ಇತ್ತೀಚಿಗೆ ಅನುಮೋದನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group