Virat Kohli: ಮೈದಾನದಲ್ಲೇ ಕಣ್ಣೀರು ಹಾಕಿದ ವಿರಾಟ್ ಕೊಹ್ಲಿ, ವಿಂಡೀಸ್ ಆಟಗಾರನ ಈ ಮಾತಿಗೆ ಕೊಹ್ಲಿ ಭಾವುಕ.

ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಮಾತು ಕೇಳಿ ಭಾವುಕರಾದ ವಿರಾಟ್.

Joshua Da Silva About Virat Kohli: ಭಾರತೀಯ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಅತ್ಯದ್ಭುತ ಆಟದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕ್ರಿಕೆಟ್ ಆಟಗಾರರಲ್ಲಿ ಅತಿ ಅಭಿಮಾನಿಗಳನ್ನು ಪಡೆದಿರುವ ಆಟಗಾರರಲ್ಲಿ ಇವರು ಒಬ್ಬರು. ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ನಲ್ಲಿ ತಮ್ಮ ಉತ್ತಮ ಪ್ರದರ್ಶನದ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

ಪ್ರಸ್ತುತ ಟೀಮ್ ಇಂಡಿಯಾ (Team India) ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಆಡುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಶತಕ ಪೂರೈಸುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಕೂಡ ವಿರಾಟ್ ಶತಕ ಭರಿಸುದನ್ನು ಕಾಯುತ್ತಿದ್ದಾರೆ. ಈ ವೇಳೆ ವೆಸ್ಟ್ ಇಂಡೀಸ್ ಆಟಗಾರ ಹೇಳಿದ ಮಾತನ್ನು ಕೇಳಿ ವಿರಾಟ್ ಕೊಹ್ಲಿ ಗ್ರೌಂಡ್ ನಲ್ಲಿಯೇ ಭಾವುಕರಾಗಿದ್ದಾರೆ.

Joshua Da Silva About Virat
Image Credit: India

ಶತಕ ಪೂರೈಸುವ ನಿರೀಕ್ಷೆಯಲ್ಲಿ ಕೊಹ್ಲಿ
ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ನಡೆಯುತ್ತಿದೆ. ಮೊದಲ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 84 ಓವರ್ ಗಳಲ್ಲಿ 288 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ 87 ರನ್ ಗಳಿಸಿ ಆಡುತ್ತ ಇದ್ದಾರೆ. ಇನ್ನು ಶತಕ ಬಾರಿಸಲು ವಿರಾಟ್ 13 ರನ್ ಗಳ ಅಂತರದಲ್ಲಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ತಮ್ಮ 500 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಶತಕ ಬಾರಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ 29 ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 76 ಶತಕಗಳನ್ನು ಪೂರೈಸಲಿದ್ದಾರೆ. ಕೊಹ್ಲಿ ತಮ್ಮ 500 ನೇ ಪಂದ್ಯದಲ್ಲಿ ಶತಕ ಬಾರಿಸಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ವಿರಾಟ್ ಈ ಬಾರಿ ಟೆಸ್ಟ್ ನಲ್ಲಿ ಶತಕ ಭರಿಸುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

Virat Emotion latest news
Image Credit: Mensxp

ವಿಂಡೀಸ್ ಆಟಗಾರನ ಮಾತು ಕೇಳಿ ವಿರಾಟ್ ಭಾವುಕ
ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡಾ ಸಿಲ್ವಾ (Joshua Da Silva) ಅವರು ವಿರಾಟ್ ಶತಕ ಪೂರೈಸುವ ಬಗ್ಗೆ ಕುತೂಹಲರಾಗಿದ್ದಾರೆ. “ನನ್ನ ತಾಯಿ ಅವರು ವಿರಾಟ್ ಕೊಹ್ಲಿಯನ್ನು ನೋಡುವ ಸಲುವಾಗಿ ಬಂದಿದ್ದಾರೆ.

Join Nadunudi News WhatsApp Group

ನನಗೆ ಇದು ನಂಬಲಾಗಲಿಲ್ಲ. ಹೀಗಾಗಿ ವಿರಾಟ್ ಶತಕ ಪೂರೈಸಬೇಕು. ನೀವು ಅದನ್ನು ಪೂರ್ಣಗೊಳಿಸಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ. ಈ ವಿಷಯವನ್ನು ಜೋಶುವಾ ಡಾ ಸಿಲ್ವಾ ಅವರು ಸ್ಟಂಪ್ ಮೈಕ್ ನಲ್ಲಿ ಕೊಹ್ಲಿ ಬಳಿ ಹೇಳುವಾಗ ಕೊಹ್ಲಿ ಭಾವುಕರಾಗಿದ್ದಾರೆ.

Join Nadunudi News WhatsApp Group