June 2024 Rules: ಜೂನ್ 1 ರಿಂದ ಯಾವ ಯಾವ ನಿಯಮಗಳು ಬದಲಾಗಲಿದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಜೂನ್ 1 ರಿಂದ ಬದಲಾಗಲಿದೆ ಈ ಎಲ್ಲ ನಿಯಮಗಳು

June 1st 2024 New Rules: ಇನ್ನೇನು ಕೇವಲ ನಾಲ್ಕು ದಿನಗಳಲ್ಲಿ ಮೇ ತಿಂಗಳು ಮುಗಿದು ಜೂನ್ 2024 ಆರಂಭವಾಗಲಿದೆ. ಪ್ರತಿ ತಿಂಗಳು ದೇಶದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುವ ಬಗ್ಗೆ ಎಲ್ಲರಿಗು ತಿಳಿದೇ. ತಿಂಗಳ ಆರಂಭದಲ್ಲಿ ಬದಲಾಗುವ ನಿಯಮಗಳ ಬಗ್ಗೆ ತಿಳಿಯುವುದು ಕೂಡ ಅಗತ್ಯವಾಗಿದೆ.

ಜೂನ್ ತಿಂಗಳ ಆರಂಭದ ಕಾರಣ ಈ ತಿಂಗಳಿನಲ್ಲಿ ಕೂಡ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುವುದು ಬಾಕಿ ಇದೆ. ಜೂನ್ 1 ರಿಂದ ದೇಶದಲ್ಲಿ ಈ ನಿಯಮಗಳು ಬದಲಾಗುವುದು ಸಹಜ. ಹಣಕಾಸೇತರ ವಹಿವಾಟು, ವಸ್ತುಗಳ ಬೆಲೆ ಸೇರಿದಂತೆ ಅನೇಕ ಹೊಸ ಹೊಸ ನಿಯಮಗಳು ಜೂನ್ ನಲ್ಲಿ ಜಾರಿಯಾಗಲಿದೆ. ಜೂನ್ ತಿಂಗಳಲ್ಲಿ ಯಾವ ಯಾವ ನಿಯಮಗಳು ಜಾರಿಯಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Free Aadhar Card Updates
Image Credit: Live Mint

ಜೂನ್ 1 ರಿಂದ ಯಾವ ಯಾವ ನಿಯಮಗಳು ಬದಲಾಗಲಿದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
•ಉಚಿತ ಆಧಾರ್ ಕಾರ್ಡ್ ನವೀಕರಣ
ಸದ್ಯ UIDAI ಹತ್ತು ವರ್ಷ ಹಳೆಯ ಆಧಾರ್ಡ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತ ಹೊಸ ಅಪ್ಡೇಟ್ ನೀಡಿದೆ. June 14 ಉಚಿತ ನವೀಕರಣಕ್ಕೆ ಕೊನೆಯ ದಿನಾಂಕವಾಗಿದೆ. ನೀವು ಜೂನ್ 14 ರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಆದರೆ ಜೂನ್ 14 ರ ನಂತರ ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಿದ್ರೆ 50 ರೂ. ಶುಲ್ಕವನ್ನು ಪಾವತಿಸಬೇಕಾಗಬಹುದು.

•ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ
ನಿಮಗೆ ತಿಳಿದಿರುಲಾವ್ ಹಾಗೆ ಗ್ಯಾಸ್ ಸಿಲಿಂಡರ್ ಬೆಲೆಗಳು ತಿಂಗಳ ಮೊದಲ ದಿನದಂದು ಬದಲಾಗುತ್ತದೆ. ಗ್ಯಾಸ್ ಬೆಲೆಯಲ್ಲಿ ಇಳಿಕೆಯಾಗುತ್ತದೆಯೋ ಅಥವಾ ಏರಿಕೆಯಾಗುತ್ತದೆಯೋ ಎನ್ನುವುದು ತಿಂಗಳ ಮೊದಲ ದಿನ ತಿಳಿಯುತ್ತದೆ. ಜೂನ್ 1 ರಂದು ದೇಶಿಯ ಸಿಲಿಂಡರ್ ಗಳು ಹಾಗೂ ವಾಣಿಜ್ಯ ಸಿಲಿಂಡರ್ ಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ.

Join Nadunudi News WhatsApp Group

Gas Cylinder Price Change
Image Credit: Economic Times

•ಡ್ರೈವಿಂಗ್ ಲೈಸೆನ್ಸ್ ನಿಯಮ
ಜೂನ್ 1 2024 ರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಗೆ ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲು ಅಧಿಕಾರ ನೀಡಲಾಗಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ. ಜೂನ್ 1 ರಿಂದ ಹೊಸ ನಿಯಮದ ಪ್ರಕಾರ ವಾಹನ ಸವಾರರು DL ಅನ್ನು ಪಡೆದುಕೊಳ್ಳಬಹುದು.

•ಸಂಚಾರ ನಿಯಮ ಉಲ್ಲಂಘನೆ ನಿಯಮ
ಅತಿ ವೇಗದಲ್ಲಿ ವಾಹನ ಚಲಾಯಿಸಿದರೆ 1000 ರೂ.ನಿಂದ 2000 ರೂ.ವರೆಗೆ ದಂಡ ತೆರಬೇಕಾಗುತ್ತದೆ. ಹಾಗೆಯೆ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿದರೆ 500 ರೂಪಾಯಿ ದಂಡ ಹಾಗೂ ಹೆಲ್ಮೆಟ್, ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸಿದರೆ 100 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

•ಜೂನ್ ತಿಂಗಳ ಬ್ಯಾಂಕ್ ರಜಾ ದಿನಗಳು
ಇನ್ನು ಪ್ರತಿ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಒಂಧಿಷ್ಟು ರಜೆಯನ್ನು ನಿಗದಿಪಡಿಸಲಾಗುತ್ತದೆ. ಹಬ್ಬ, ಸರ್ಕಾರೀ ರಜೆ ಹಾಗೂ ಭಾನುವಾರ ಶನಿವಾರದ ರಜೆ ಸೇರಿದಂತೆ ಬ್ಯಾಂಕ್ ಗಳು ಕೆಲ ದಿನಗಳು ಬಂದ್ ಅಗರುತ್ತದೆ. ಇನ್ನು RBI ಬಿಡುಗಡೆ ಮಾಡಿರುವ ಬ್ಯಾಂಕ್ ರಜಾ ದಿನದ ಪಟ್ಟಿಯ ಪ್ರಕಾರ ಜೂನ್ ನಲ್ಲಿ 10 ದಿನಗಳು ಬ್ಯಾಂಕ್ ಬಂದ್ ಆಗಿರಲಿದೆ.

Bank Holiday In June 2024
Image Credit: The Hindu

Join Nadunudi News WhatsApp Group