K.L Rahul: ಯಾರು ಮುರಿಯದ ಧೋನಿ ದಾಖಲೆ ಧೂಳಿಪಟ ಮಾಡಿದ ಕನ್ನಡಿಗ KL ರಾಹುಲ್, ಗ್ರೇಟ್ ಅಂದ ಫ್ಯಾನ್ಸ್

ಧೋನಿ ಅವರ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿ ಮಾಡಿದ K.L Rahul.

K.L Rahul Break The M.S Dhoni Record: ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರದಂದು ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆದಿದೆ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಅಲ್ಪ ಮೊತ್ತಕ್ಕೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಹೀನಾಯವಾದ ಸೋಲನ್ನ ಅನುಭವಿಸಿತು.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ತಂಡ 8 ವಿಕೆಟ್ ಗಳ ಜಯವನ್ನು ಸಾಧಿಸುತ್ತಿದೆ. ಮೂರು ಪಂದ್ಯಗಳಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ K.L Rahul ದಾಖಲೆ ಸೃಷ್ಟಿಸಿದ್ದಾರೆ. M .S Dhoni ಅವರ ದಾಖಲೆಯನ್ನು ಕೆ.ಎಲ್ ರಾಹುಲ್ ಮುರಿದಿದ್ದಾರೆ.

K.L Rahul And M.S Dhoni
Image Credit: Espncricinfo

ಧೋನಿ ಅವರ ದಾಖಲೆ ಮುರಿದ ಕನ್ನಡಿಗ K.L Rahul
ನಾಯಕನಾಗಿ ರಾಹುಲ್ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. 2013ರಲ್ಲಿ ನಾಯಕನಾಗಿ ಧೋನಿ ಸತತ 9 ಪಂದ್ಯಗಳನ್ನು ಗೆದ್ದಿದ್ದರು. ಇದೀಗ ಈ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ. ಇನ್ನು 2019 ರಿಂದ 2022 ರ ವರೆಗೆ ತಂಡದ ನಾಯಕರಾಗಿದ್ದರು ಮತ್ತು ಎಲ್ಲಾ 19 ಪಂದ್ಯಗಳನ್ನು ಗೆದ್ದರು. ಇದು ಸದ್ಯಕ್ಕೆ ದಾಖಲೆಯಾಗಿ ಉಳಿದಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲೂ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಸತತ 10 ಗೆಲುವು ಸಾಧಿಸಿದೆ.

K.L Rahul Break The M.S Dhoni Record
Image Credit: Espncricinfo

ಹೊಸ ದಾಖಲೆ ಸೃಷ್ಟಿಸಿದ K.L Rahul
ಈ ಗೆಲುವಿನೊಂದಿಗೆ ರಾಹುಲ್ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹೌದು, ಪಿಂಕ್ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಯನ್ನು ಕೆ.ಎಲ್ ರಾಹುಲ್ ಪಡೆದಿದ್ದಾರೆ. ಈ ಹಿಂದೆ ಧೋನಿ, ಕೊಹ್ಲಿ, ರೋಹಿತ್ ಸೇರಿದಂತೆ ಭಾರತದ ಯಾವ ನಾಯಕರೂ ಇಂತಹ ಸಾಧನೆ ಮಾಡಿರಲಿಲ್ಲ. ಇದೀಗ ಈ ವಿಶೇಷ ದಾಖಲೆ ಕನ್ನಡಿಗನದ್ದಾಗಿದೆ. ಕ್ರಿಕೆಟ್ ಅಭಿಮಾನಿಗಳು ಕೆ.ಎಲ್ ರಾಹುಲ್ ಅವರ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group