K.L Rahul And Ramesh: ವೀಕೆಂಡ್ ವಿಥ್ ರಮೇಶ್ ನಲ್ಲಿ ಕೆ ಎಲ್ ರಾಹುಲ್, ಮೊದಲ ಅಥಿತಿಯಾಗಿ ಸ್ಟಾರ್ ಆಟಗಾರ.
Weekend With Ramesh Season 5: ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ (Ramesh) ಅವರು ವಿಕೇಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಈಗಾಗಲೇ 4 ಸೀಸನ್ ಅನ್ನು ಮುಗಿಸಿದ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋ ಮತ್ತೆ ಪುನಃ ವೀಕ್ಷಕರ ಮುಂದೆ ಬರಲಿದೆ. ಇದರಿಂದ ವೀಕ್ಷಕರು ಖುಷಿಯಲ್ಲಿದ್ದಾರೆ ಎನ್ನಬಹುದು.
ವೀಕೆಂಡ್ ವಿತ್ ರಮೇಶ್ ಸೀಸನ್ ಒಂದರಿಂದ ಹಿಡಿದು ಸೀಸನ್ ನಾಲ್ಕರ ತನಕ ಹಲವಾರು ಸಾಧಕರನ್ನು ಕರೆಸಿ ಅವರ ಜೀವನದ ಸಾಧನೆ ಬಗ್ಗೆ ಹೇಳಿಕೊಳ್ಳುವಂತೆ ಈ ಶೋ ಮಾಡಿತ್ತು. ಇದೀಗ ಈ ಶೋ ಮತ್ತೆ ಪ್ರಸಾರವಾಗುತ್ತಿರುವುದು ಇದೆ ತಿಂಗಳು 25 ರಿಂದ. ಮತ್ತೆ ರಮೇಶ್ ಅರವಿಂದ್ ಅವರೇ ಈ ಶೋ ಅನ್ನು ನಡೆಸಿಕೊಡಲಿದ್ದಾರೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5 ಗೆ ಮೊದಲ ಅತಿಥಿಯಾಗಿ ಬರಲಿದ್ದಾರೆ ನಟ ರಿಷಬ್ ಶೆಟ್ಟಿ
ಇದೀಗ ಮತ್ತೆ 25 ರಿಂದ ಶುರು ಆಗಲಿರುವ ವೀಕೆಂಡ್ ವಿತ್ ರಮೇಶ್ ಶೋ ಗೆ ಮೊದಲ ಅತಿಥಿಯಾಗಿ ರಿಷಬ್ ಶೆಟ್ಟಿ (Rishab Shetty) ಬರಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಎರಡನೇ ಅತಿಥಿಯಾಗಿ ಸ್ಟಾರ್ ಕ್ರಿಕೆಟಿಗ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾಧಕರ ಸ್ಪೂರ್ತಿದಾಯಕ ಜೀವನ ಕಥೆಗಳನ್ನು ಹೇಳಲಾಗುತ್ತದೆ. ಮಾರ್ಚ್ 25 ರಂದು ಶನಿವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರಾವಾಗಲಿದೆ. ಇದರ ನಡುವೆ ಮೊದಲ ಅತಿಥಿಯಾಗಿ ಸ್ಯಾಂಡಲ್ ವುಡ್ ನಟ ನಟ ರಿಷಬ್ ಶೆಟ್ಟಿ ಬರಲಿದ್ದಾರೆ ಎನ್ನಲಾಗುತ್ತಿದೆ.
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಮೊದಲ ಬಾರಿಗೆ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ (K.L Rahul)
ಇದೀಗ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಮೊದಲ ಬಾರಿಗೆ ಸ್ಟಾರ್ ಕ್ರಿಕೆಟಿಗ ಬರಲಿದ್ದಾರೆ ಎಂಬ ಸುದ್ದಿ ಹರಡಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕನ್ನಡಿಗ ಕ್ರಿಕೆಟರ್ ಕೆ ಎಲ್ ರಾಹುಲ್ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ವಿಚಾರ ಈಗ ಸಾಕಷ್ಟು ಸುದ್ದಿ ಆಗುತ್ತಿದೆ. ಇಂಡಿಯಾದ ಸ್ಟಾರ್ ಕ್ರಿಕೆಟ್ ಆಟಗಾರ ಕೆ ಎಲ್ ರಾಹುಲ್ ಅವರನ್ನು ಸಾಧಕರ ಕುರ್ಚಿ ಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.