Kabzaa Collection: ಮೊದಲ ದಿನವೇ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಕಬ್ಜ, ದಾಖಲೆಯ ಕಲೆಕ್ಷನ್.
Kabzaa Movie First Day Collection: ಇಂದು ತೆರೆಕಂಡ ಕಬ್ಜ (Kabzaa) ಸಿನಿಮಾ ವೀಕ್ಷಕರಿಂದ ಉತ್ತಮ ಪತಿಕ್ರಿಯೆ ಪಡೆದುಕೊಳ್ಳುತ್ತಾ ಇದೆ. ಕಬ್ಜ ಸಿನಿಮಾ ನೋಡಿದ ಅಭಿಮಾನಿಗಳು ಈ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.
ಇನ್ನು ಕಬ್ಜ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಬ್ಜ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಕಬ್ಜ ಸಿನಿಮಾ ಹಲವು ಸಿನಿಮಾಗಳ ದಾಖಲೆಯನ್ನು ಮುರಿದು ಹಾಕುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ.
ಉತ್ತಮ ಪ್ರದರ್ಶನ ಕಾಣುತ್ತಿರುವ ಕಬ್ಜ ಸಿನಿಮಾ
ನಟ ಸುದೀಪ್ ಮತ್ತು ನಟ ಉಪೇಂದ್ರ (Upendra) ಅವರನ್ನು ಜೊತೆಯಾಗಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಇಬ್ಬರು ಈ ಸಿನಿಮಾದಲ್ಲಿ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಸಿನಿ ಪ್ರೇಕ್ಷಕರಿಗೆ ಈ ಸಿನಿಮಾ ನೋಡಲು ಬಹಳ ಖುಷಿಯಾಗಿದೆ ಎನ್ನುತ್ತಿದ್ದಾರೆ. ಇನ್ನು ಕಬ್ಜ ಸಿನಿಮಾ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಿದ್ದು ಈ ಸಿನಿಮಾವನ್ನು ದಿವಂಗತ ಪುನೀತ್ ಅವರಿಗೆ ಅರ್ಪಣೆ ಮಾಡಲಾಗಿದೆ.
ಕಬ್ಜ ಸಿನಿಮಾದ ಮೊದಲ ದಿನದ ಕಲೆಕ್ಷನ್
ಕಬ್ಜ ಸಿನಿಮಾ ಇಂದು ರಿಲೀಸ್ ಆಗಿದ್ದು ಸಿನಿಮಾ ವೀಕ್ಷಿಸಿದ ಜನರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯಾದ ಜನರ ಮೆಚ್ಚುಗೆಯ ಪ್ರತಿಕ್ರಿಯೆ ಕಂಡು ಬರುತ್ತಿರುವುದರಿಂದ ಕಬ್ಜ ಸಿನಿಮಾದ ಮೊದಲ ದಿನದ ಕಲೆಕ್ಷನ್ ಅಂದಾಜು 25 ರಿಂದ 30 ಕೋಟಿ ಆಗಲಿದೆ.
ಬಹುನಿರೀಕ್ಷಿತ ಕಬ್ಜ ಚಿತ್ರದ ಬಗ್ಗೆ ಮೆಚ್ಚುಗೆ ಪ್ರತಿಕ್ರಿಯೆ ಕೇಳಿ ಬಂದಿದೆ. ಕನ್ನಡಿಗರ ಬಹುನಿರೀಕ್ಷಿತ ಕಬ್ಜ ಚಿತ್ರ ಇಂದು ಅದ್ದೂರಿಯಾಗಿ ತೆರೆ ಕಂಡಿದೆ. ರಿಲೀಸ್ ಗು ಮುನ್ನವೇ ಕಬ್ಜ ಚಿತ್ರ ಸಾಕಷ್ಟು ಸದ್ದು ಮಾಡಿತ್ತು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಕನ್ನಡ, ತಮಿಳು, ತೆಲಗು, ಹಿಂದಿ, ಮಲಯಾಳಂ ಸೇರಿದನಂತೆ ಒಟ್ಟು 7 ಭಾಷೆಗಳಲ್ಲಿ ಬಿಡುಗಡೆ ಆಗಿದೆ. ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಸಿನಿಪ್ರಿಯರ ಬಹುನಿರೀಕ್ಷಿತ ಕಬ್ಜ ತೆರೆಯ ಮೇಲೆ ಬಂದಿದೆ.