Kabzaa Review: ಕಬ್ಜ ಚಿತ್ರ ನಿಜಕ್ಕೂ ಹೇಗಿದೆ, ಚಿತ್ರ ನೋಡಿದ ಅಭಿಮಾನಿಗಳು ಹೇಳಿದ್ದೇನು.
Kabzaa Review And Response: ನಟ ಉಪೇಂದ್ರ (Upendra) ಹಾಗು ಕಿಚ್ಚ ಸುದೀಪ್ (Kiccha Sudeep) ನಟನೆಯ ಕಬ್ಜ (Kabzaa) ಸಿನಿಮಾ ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾವನ್ನು ನೋಡಿದ ಸಿನಿ ಪ್ರೇಕ್ಷಕರು ಕಬ್ಜವನ್ನು ಹೊಗಳುತ್ತಿದ್ದಾರೆ. ಇನ್ನು ಕಬ್ಜ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾಕಷ್ಟು ಜನರ ಮೆಚ್ಚುಗೆ ಪಡೆದುಕೊಂಡಿತ್ತು. ಇವತ್ತು ತೆರೆ ಕಂಡ ನಂತರ ಸಿನಿಮಾ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಲಾಗುತ್ತಿದೆ.
ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕಬ್ಜ ಸಿನಿಮಾ
ಕಬ್ಜ ಸಿನಿಮಾದಲ್ಲಿ ನಟ ಉಪೇಂದ್ರ, ನಟ ಸುದೀಪ್ ಮತ್ತು ನಟ ಶಿವರಾಜ್ ಕುಮಾರ್ ಜೊತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಹೆಚ್ಚು ಖುಷಿ ತಂದುಕೊಟ್ಟಿದೆ. ಸಾಕಷ್ಟು ರೀತಿಯಲ್ಲಿ ಅಭಿಮಾನಿಗಳು ಕಬ್ಜ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹಲವು ಸಿನಿಮಾಗಳ ದಾಖಲೆಯನ್ನು ಪುಡಿ ಪುಡಿ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿದೆ.
ಇಂದು ತೆರೆಕಂಡ ಕಬ್ಜ ಸಿನಿಮಾ
ಇನ್ನು ಕಬ್ಜ ಸಿನಿಮಾದ ಟೀಸರ್ ಕಂಡ ಹಲವು ಜನರು ಕೆಜಿಎಫ್ ಸಿನಿಮಾ ಇದ್ದ ರೀತಿಯಲ್ಲಿಯೇ ಇದೆ ಎಂದಿದ್ದರು. ಇದಕ್ಕೆ ನಟ ಉಪೇಂದ್ರ ಸಹ ಸ್ಪಷ್ಟನೆ ನೀಡಿದ್ದರು. ಕೆಜಿಎಫ್ ಸಿನಿಮಾದ ಸ್ಟೋರಿನೇ ಬೇರೆ ಕಬ್ಜದ ಕಥೆನೇ ಬೇರೆ ಅಂತ ಹೇಳಿದ್ದರು. ಆ ಮಾತು ಈಗ ನಿಜವಾಗಿದೆ. ಕಬ್ಜ ಸಿನಿಮಾ ಕೆಜಿಎಫ್ ಸಿನಿಮಾ ರೀತಿ ಇಲ್ಲ ಎಂದು ಸಿನಿಮಾ ನೋಡಿದ ಅಭಿಮಾನಿಗಳು ಹೇಳುತ್ತಿದ್ದಾರೆ.
ಕಬ್ಜ ಸಿನಿಮಾದಲ್ಲಿ ನಟ ಉಪೇಂದ್ರ ಹಾಗು ನಟ ಸುದೀಪ್ ಇಬ್ಬರು ಸಹ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಆರಂಭದಿಂದಲೂ ಕೊನೆಯವರೆಗೂ ಸಿನಿ ಪ್ರೇಕ್ಷಕರಿಗೆ ಮನೋರಂಜನೆ ಕಡಿಮೆ ಆಗಿಲ್ಲ. ಇನ್ನು ಸುದೀಪ್ ಮತ್ತು ಉಪೇಂದ್ರ ಅವರನ್ನು ಜೊತೆಯಾಗಿ ಪೊಲೀಸ್ ಗೆಟಪ್ ನಲ್ಲಿ ನೋಡಿದ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.