Kabzaa Box Office Collection: ಮೂರೇ ದಿನದಲ್ಲಿ ದಾಖಲೆ ನಿರ್ಮಾಣ ಮಾಡಿದ ಕಬ್ಜ, ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್.

kabzaa movie world wide box office collection

Kabzaa Wolrd Wide Collection: ಕನ್ನಡದ ಕಬ್ಜ (Kabzaa) ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಮಾರ್ಚ್ 17 ರಂದು ಬಿಡುಗಡೆಗೊಂಡ ಕಬ್ಜ ಚಿತ್ರ ಇದೀಗ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಡಿಗಡೆಗೊಂಡ ಎರಡೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಕಬ್ಜ ಮುಂದಾಗಿದೆ.

ಇನ್ನು ಕಬ್ಜ ಚಿತ್ರದ ಮೊದಲ ಹಾಗೂ ಎರಡನೇ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಇದೀಗ ಕನ್ನಡ ಕಬ್ಜ ಮೂರನೇ ದಿನ ಅದೆಷ್ಟು ಕೋಟಿ ಹಣ ಬಾಚಿಕೊಂಡಿದೆ ಎಂಬುದನ್ನು ತಿಳಿದುಕೊಳ್ಳೋಣ.

Kabzaa, which created a record in just three days, has a huge collection at the box office.
Image Credit: instagram

ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನಲ್ಲಿ ಕಬ್ಜ ಚಿತ್ರ ಮೂಡಿಬಂದಿದೆ. ಇನ್ನು ಆರ್ ಚಂದ್ರು ನಿರ್ದೇಶನದಲ್ಲಿ 100 ರಿಂದ 120 ಕೋಟಿ ವೆಚ್ಚದ ಬಜೆಟ್ ನಲ್ಲಿ ಕಬ್ಜ ಚಿತ್ರ ನಿರ್ಮಾಣಗೊಂಡಿದೆ. ಕಬ್ಜ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಮುಂದಾಗಿದೆ. ಕನ್ನಡದ ಕಬ್ಜ ಕನ್ನಡ ಭಾಷೆ ಸೇರಿದಂತೆ ಇನ್ನು 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

Kabzaa is among the highest grossing films by collecting 100 crore rupees
Image Credit: instagram

ಕಬ್ಜ ಚಿತ್ರದ ಮೂರನೇ ದಿನದ ಕಲೆಕ್ಷನ್
ಕಬ್ಜ ಚಿತ್ರ ಬಿಡುಗಡೆಗೊಂಡ ಮೊದಲ ದಿನವೇ 54 ಕೋಟಿ ಹಣ ಕೊಳ್ಳೆ ಹೊಡೆದಿತ್ತು. ನಂತರ ಎರಡೇ ದಿನ ಸೇರಿಸಿ ಬರೋಬ್ಬರಿ 100 ಕೋಟಿಗೂ ಅಧಿಕ ಹಣ ಬಾಚಿಕೊಂಡಿದೆ. ಇದೀಗ ಕಬ್ಜ ಚಿತ್ರದ ಮೂರನೇ ದಿನದ ಕಲೆಕ್ಷನ್ ಬಗ್ಗೆ ಮಾಹಿತಿ ತಿಳಿದುಬಂದಿದೆ. ಉಪೇಂದ್ರ ನಟನೆಯ ಕಬ್ಜ ಇದೀಗ ಮೂರನೇ ದಿನ 20 ಕೋಟಿ ಹಣ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ.

Kannada kabzaa movie collected 100 crores at the box office.
Image credit: instagram

ಕನ್ನಡದ ಕಬ್ಜ ಹೊಸ ಹೊಸ ದಾಖಲೆ ಬರೆಯಲು ಮುಂದಾಗಿದೆ. ಹಾಗೆಯೆ ಸಾಕಷ್ಟು ಚಿತ್ರಗಳ ದಾಖಲೆಯನ್ನು ಮುರಿಯಲು ಕಬ್ಜ ಸಜ್ಜಾಗಿದೆ. ಕಬ್ಜ ಬಿಡುಗಡೆಗೊಂಡು ಇಲ್ಲಿಯವರೆಗೆ 120 ಕೋಟಿಗೂ ಅಧಿಕ ಹಣವನ್ನು ಗಳಿಸಿದೆ. ಕನ್ನಡದಲ್ಲಿ ಅತಿ ಹೆಚ್ಚು ಹಣ ಗಳಿಸದ ಸಿನಿಮಾಗಳ ಖ್ಯಾತಿಗೆ ಕಬ್ಜ ಚಿತ್ರ ಕೂಡ ಸೇರಿಕೊಂಡಿದೆ.

Join Nadunudi News WhatsApp Group

Join Nadunudi News WhatsApp Group