Kabza Movie Shiva Song: ಕಬ್ಜ ಚಿತ್ರದ ಶಿವನ ಹಾಡಿಗೆ ಇಡೀ ದೇಶವೇ ಫಿದಾ, ಟ್ರೆಂಡ್ ಆದ ಕಬ್ಜ ಹಾಡು.

Kabza Movie Namami Namami Song: ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kiccha Sudeep) ನಟನೆಯ ಕಬ್ಜ (Kabzaa) ಚಿತ್ರ ರಿಲೀಸ್ ಗು ಮುನ್ನ ಬಾರಿ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಮಾರ್ಚ್ 17 ರಂದು ತೆರೆಯ ಮೇಲೆ ಬರಲಿದೆ.

ಕನ್ನಡಿಗರು ಕಬ್ಜ ಚಿತ್ರದ ಬರುವಿಕೆಯಲ್ಲಿ ಕಾಯುತ್ತಿದ್ದಾರೆ. ಇದೀಗ ಮಹಾ ಶಿವರಾತ್ರಿಯ ವಿಶೇಷಕ್ಕೆ ಕಬ್ಜ ಚಿತ್ರದ ಹಾಡು ರಿಲೀಸ್ ಆಗಿದೆ. ಈ ಹಾಡು ಇದೀಗ ಬಾರಿ ವೈರಲ್ ಆಗುತ್ತಿದೆ.

The song of Shiva from the movie Kabzaa is the trending song of the entire country.
Image Credit: themeghalayan

ಶಿವರಾತ್ರಿಯ ವಿಶೇಷಕ್ಕೆ ಕಬ್ಜ ಚಿತ್ರದ ಹಾಡು ರಿಲೀಸ್
ಶಿವರಾತ್ರಿಯ ವಿಶೇಷಕ್ಕೆ ಕಬ್ಜ ಚಿತ್ರ ತಂಡ ಹಾಡನ್ನು ಬಿಡುಗಡೆ ಮಾಡಿದೆ. ಚೆನ್ನೈ ನಲ್ಲಿ ನಡೆದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳು ಸಿನಿಮಾರಂಗದ ಕೆಲವರು ಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅತಿಥಿಗಳ ಸಮ್ಮುಖದಲ್ಲಿ ಕಬ್ಜ ಚಿತ್ರದ ಎರಡನೇ ಹಾಡು “ನಮಾಮಿ ನಮಾಮಿ” ಬಿಡುಗಡೆ ಆಗಿದೆ.

Fans appreciated Shiva's song from Kabzaa
Image Credit: instagram

ನಮಾಮಿ ನಮಾಮಿ ಹಾಡಿನಲ್ಲಿ ರಾಣಿಯಾಗಿ ಮಿಂಚಿದ ಶ್ರಿಯಾ ಸರನ್ (Shriya Saran) 
ಕಬ್ಜ ಚಿತ್ರದ ಎರಡನೇ ಹಾಡು “ನಮಾಮಿ ನಮಾಮಿ” ಬಿಡುಗಡೆಗೊಂಡಿದ್ದು, ವೀಕ್ಷಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಕಿನ್ನಾಳ್ ರಾಜ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ಈ ಹಾಡನ್ನು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಇನ್ನು ನಟಿ ಶ್ರಿಯಾ ಸರನ್ ಕಬ್ಜ ಚಿತ್ರದ ಎರಡನೇ ಹಾಡಿನಲ್ಲಿ ರಾಣಿಯಾಗಿ ಮಿಂಚಿದ್ದಾರೆ.

Join Nadunudi News WhatsApp Group

Namami Namami song from Kabzaa is trending on YouTube
Image Credit: ottplay

ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಮೂವಿ ರಿಲೀಸ್
ಕನ್ನಡಿಗರ ಬಹುನಿರೀಕ್ಷಿತ ಚಿತ್ರ ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 17 ರಂದು ಕಬ್ಜ ದೇಶಾದ್ಯಂತ ಬಿಡುಗಡೆಗೊಳ್ಳಲಿದೆ. ಕಬ್ಜ ಚಿತ್ರಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ಕಬ್ಜ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಕೂಡ ನಟಿಸಲಿದ್ದಾರೆ.

Shiva's song from Kabzaa is trending on YouTube
Image Credit: news18

ಸಿನಿಪ್ರಿಯರು ಕಬ್ಜ ಚಿತ್ರದ ಟ್ರೈಲರ್ ನೋಡಿದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ದುಪ್ಪಟಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದಂದು ಕಬ್ಜ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಟೀಸರ್ ನಲ್ಲಿಯೇ ಕಬ್ಜ ಚಿತ್ರ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಕಬ್ಜ ಚಿತ್ರದ ಎರಡನೇ ಹಾಡು ರಿಲೀಸ್ ಆಗಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group