Upendra Remuneration: ಕಬ್ಜ ಚಿತ್ರದಲ್ಲಿ ದುಬಾರಿ ಸಂಭಾವನೆ ಪಡೆದ ಕಿಚ್ಚ- ಉಪ್ಪಿ, ಯಾರ ಸಂಭಾವನೆ ಹೆಚ್ಚು.
Upendra And Sudeep Salary In Kabzaa: ಸಿನಿಪ್ರಿಯರ ಬಹುನಿರೀಕ್ಷಿತ ಕಬ್ಜ ಸಿನಿಮಾ (Kabza Movie) ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಬ್ಜ ಚಿತ್ರ ತೆರೆಕಾಣಲಿದೆ.
ಇನ್ನು ಕಬ್ಜ ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆ ಕಬ್ಜ ಚಿತ್ರದಲ್ಲಿ ಸುದೀಪ್ (Kiccha Sudeep) ಹಾಗೂ ಉಪೇಂದ್ರ (Upendra) ಅವರ ಸಂಭಾವನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (social Media) ಚರ್ಚೆ ಶುರುವಾಗಿದೆ. ಇದೀಗ ಕಬ್ಜ ಚಿತ್ರದಲ್ಲಿ ಉಪೇಂದ್ರ ಹಾಗೂ ಕಿಚ್ಚನ ಸಂಭಾವನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಕಬ್ಜ ಚಿತ್ರದಲ್ಲಿ ನಟ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕಬ್ಜ ಚಿತ್ರ ಬರೋಬ್ಬರಿ 100 ರಿಂದ 120 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸಾಥ್ ನೀಡಲಿದ್ದಾರೆ.
ಇನ್ನು ಕಬ್ಜ ಚಿತ್ರದಲ್ಲಿ ಕಿಚ್ಚನ ಅಭಿನಯಾ 15 ನಿಮಿಷಗಳು ಎನ್ನಲಾಗುತ್ತಿದೆ. ಆದರೆ ಇತ್ತೀಚಿಗೆ ನಡೆದ ಕಬ್ಜ ಚಿತ್ರದ ಪ್ರಮೋಷನ್ (Kabza Movie Promotion) ನಲ್ಲಿ ಭಾಗವಹಿಸಿರುವ ಕಿಚ್ಚ ಸುದೀಪ್ ವೇದಿಕೆ ಮೇಲೆ ಮಾತನಾಡಿರೋದು ಕಬ್ಜ ಚಿತ್ರದಲ್ಲಿ ಕಿಚ್ಚನ ಸಂಭಾವನೆಯ ಬಗ್ಗೆ ಕುತೂಹಲ ಮೂಡಿಸುತ್ತಿದೆ.
ಕಬ್ಜ ಚಿತ್ರದ ಕಥೆ ಕೇಳಿ ನನಗೆ ಅಳು ಬಂತು ಎಂದು ನಟಿ ಶ್ರಿಯಾ ಸರನ್ ಹೇಳಿದರು. ನಂತರ ಸುದೀಪ್ ಅವರ ಬಳಿ ಆರ್ ಚಂದ್ರು ಅವರು ಹೇಳಿರುವ ಕಥೆ ಕೇಳಿ ನೀವು ಅತ್ರ ಎಂದು ಕೇಳಿದ್ದಾರೆ. ಅದಕ್ಕೆ ಕಿಚ್ಚ ನೋ, ಅವರು ಪೇಮೆಂಟ್ ಕೊಡುವ ಸಮಯದಲ್ಲಿ ಅವರೇ ಅತ್ತರು ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಸುದೀಪ್ ಅವರ ಈ ಹಾಸ್ಯ ಚಟಾಕೆಯ ಮಾತುಗಳು ಇದೀಗ ಕಿಚ್ಚನ ಸಂಭಾವನೆಯ ಬಗ್ಗೆ ಕುತೂಹಲ ಮೂಡಿಸುತ್ತಿದೆ.
ಸುದೀಪ್ ಅವರು 15 ನಿಮಿಷಗಳ ಕಾಲ ಸ್ಕ್ರೀನ್ ಮೇಲೆ ಬಂದು ಹೊಗಳಿದ್ದಾರೆ. ಇನ್ನು ಉಪ್ಪಿ ಅವರು ಕಬ್ಜ ಚಿತ್ರಕ್ಕಾಗಿ ಮೂರು ವರ್ಷ ಕಾಲ್ ಶೀಟ್ ಕೊಟ್ಟಿದ್ದರು. 150 ರಿಂದ 180 ದಿನಗಳು ಉಪ್ಪಿ ಪೋರ್ಷನ್ ಶೂಟ್ ಆಗಿದೆ. ಇನ್ನು ಕಬ್ಜ ಚಿತ್ರದಲ್ಲಿ ಈ ಇಬ್ಬರಿಗೂ ಇವರದ್ದೇ ಆದ ಪೆಮೆಂಟ್ ಕೊಟ್ಟಿದ್ದಾರೆ. ಯಾರು ಹೆಚ್ಚು ಯಾರು ಕಡಿಮೆ ಸಂಭಾವನೆ ಪಡೆದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.