Kadaknath Business: ಸಣ್ಣ ಜಾಗದಲ್ಲಿ ಆರಂಭಿಸಿ ಈ ಕೋಳಿ ಬಿಸಿನೆಸ್, ಕಡಿಮೆ ಖರ್ಚು ಮತ್ತು ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಲಾಭ.
ಸಣ್ಣ ಜಾಗದಲ್ಲಿ ಈ ಕೋಳಿ ಸಾಕಾಣಿಕೆ ಮಾಡಿದರೆ ತಿಂಗಳು ಒಂದು ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು.
Kadaknath Chicken Business Profit: ದೇಶದಲ್ಲಿ ಸಾಕಷ್ಟು ಜನರು ಕೋಳಿ ಸಾಕಾಣಿಕೆಯನ್ನು ಮಾಡುತ್ತಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಗಳಿಸಲು ಕೋಳಿ ಸಾಕಾಣಿಕೆಯು ಉತ್ತಮ ಆಯ್ಕೆಯಾಗಿದೆ. ದೇಶದಲ್ಲಿ ವಿವಿಧ ತಳಿಯ ಕೋಳಿಗಳು ಲಭ್ಯವಿರುತ್ತದೆ.
ಒಂದೊಂದು ರೀತಿಯ ತಳಿಗಳು ಒಂದೊಂದು ರೀತಿಯ ಬೆಳೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಕೋಳಿ ಮಾಂಸವನ್ನು ಇಷ್ಟಪಡುತ್ತಾರೆ. ಕೋಳಿ ಮಾಂಸದಲ್ಲಿ ಅನೇಕ ವಿಧದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬಹುದಾಗಿದೆ.
ಸಣ್ಣ ಜಾಗದಲ್ಲಿ ಆರಂಭಿಸಿ ಈ ಕೋಳಿ ಬಿಸಿನೆಸ್
ಕೋಳಿ ಮಾಂಸಗಳಿಗೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಇನ್ನು ಕೋಳಿ ಸಾಕಾಣಿಕೆ ಮಾಡಲು ಹೆಚ್ಚಿನ ಸ್ಥಳವಾಗಲಿ ಹಣವಾಗಲಿ ಖರ್ಚಾಗುವುದಿಲ್ಲ. ಕಡಿಮೆ ಖರ್ಚಿನಲ್ಲಿಯೇ ಕೋಳಿ ಸಾಕಾಣಿಕೆಯನ್ನು ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು ಸಾಮಾನ್ಯವಾಗಿ ಕೋಳಿ ಪ್ರತಿ ಕೆಜಿ ಹೆಚ್ಛಂದರೆ 200 ರಿಂದ 300 ರೂ. ಗಳು ಇರುತ್ತದೆ. ಈ ಬೆಲೆಯಲ್ಲಿ ಕೂಡ ಹೆಚ್ಚಿನ ಲಾಭವನ್ನು ಗಳಿಸಬಹುದು. ಆದರೆ ಇದಕ್ಕಿಂತಲೂ ದುಬಾರಿ ತಳಿಯ ಕೋಳಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಈ ಕೋಳಿಯ ಬೆಲೆ ಪ್ರತಿ ಕೆಜಿಗೆ 1000 ರೂ.
ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಂದು ತಳಿಯ ಕೋಳಿ ಲಭ್ಯವಿರುತ್ತದೆ. ಈ ಕೋಳಿ ಕೆಜಿಗೆ ಬರೋಬ್ಬರಿ 1000 ರೂ. ಇರುತ್ತದೆ. ಮಾರುಕಟ್ಟೆಯಲ್ಲಿ ಕೂಡ ಈ ತಳಿಯ ಕೋಳಿಗಳಿಗೆ ಬಾರಿ ಬೇಡಿಕೆ ಇದೆ. ಹೆಚ್ಚಿನ ರುಚಿ ನೀಡುವ ಕೋಳಿ ಇದಾಗಿರುದರಿಂದ ದುಬಾರಿ ಆದರೂ ಕೂಡ ಜನರು ಹೆಚ್ಚಾಗಿ ಈ ತಳಿಯ ಕೋಳಿಯನ್ನೇ ಖರೀದಿಸುತ್ತಾರೆ. ಈ ಕೋಳಿಯ ಹೆಸರು ಕಡಕ್ನಾಥ್. ಈ ಕೋಳಿಯ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ.
ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇರುವ ಕಡಕ್ನಾಥ್ ಕೋಳಿ
ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಕಡಕ್ನಾಥ್ ಕೋಳಿ ಸಾಕಾಣಿಕೆ ಹೆಚ್ಚು ಕಂಡು ಬರುತ್ತದೆ. ಬುಡಕಟ್ಟು ಪ್ರದೇಶಗಳಲ್ಲಿ ಇದನ್ನು ಕಾಳಿಮಾಸಿ ಎಂದು ಕರೆಯಲಾಗುತ್ತದೆ. ಇದರ ಮಾಂಸವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಕ್ನಾಥ್ ಕೋಳಿ ಮಾಂಸಕ್ಕೆ ಔಷಧೀಯ ಗುಣಗಳಿರುವುದರಿಂದ ಸಾಕಷ್ಟು ಬೇಡಿಕೆ ಇದೆ. ಈ ಕಡಕ್ನಾಥ್ ಕೋಳಿಯ ವಿಶೇಷವೆಂದರೆ ಕೋಳಿಯ ಬಣ್ಣ ಕಪ್ಪು, ಮಾಂಸ ಕಪ್ಪು ಮತ್ತು ರಕ್ತವೂ ಕೂಡ ಕಪ್ಪಾಗಿರುತ್ತದೆ.